ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳು ಪಲಾಯನಗೈದರು.- ಕೇಂದ್ರ ಸರಕಾರ

ನವದೆಹಲಿ – ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಅನ್ಯ ಸ್ಥಳಗಳಲ್ಲಿ ಪಲಾಯನ ಮಾಡಲು ಅನಿವಾರ್ಯವಾಯಿತು.

ಗೃಹ ಸಚಿವಾಲಯ ೨೦೨೦ – ೨೧ ಇಸವಿಯ ವಾರ್ಷಿಕ ವರದಿಯ ಪ್ರಕಾರ ೧೯೯೦ರ ದಶಕ ಮತ್ತು ೨೦೨೦.ರ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯಿಂದ ೧೪ ಸಾವಿರ ೯೧ ನಾಗriಕರು ಮತ್ತು ೫ ಸಾವಿರ ೩೫೬ ಸೈನಿಕರು ಸಾವನ್ನಪ್ಪಿದರು. ಈ ವರದಿಯಲ್ಲಿ ಭಯೋತ್ಪಾದನೆಯಿಂದ ಹಿಂದೂಗಳ ಜೊತೆಗೆ ಕೆಲವು ಸಿಖ್ಖರು ಮತ್ತು ಮುಸಲ್ಮಾನ ಕುಟುಂಬದವರು ಕಾಶ್ಮೀರ ಬಿಟ್ಟು ಪಲಾಯನ ಮಾಡಬೇಕಾಯಿತು ಹೀಗೂ ಹೇಳಲಾಗಿದೆ.

ಸಂಪಾದಕರ ನಿಲುವು

ಇದರಲ್ಲಿನ ಎಷ್ಟು ಕುಟುಂಬಗಳು ಕಾಶ್ಮೀರದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ ಮತ್ತು ಎಷ್ಟು ಜನರ ಪುನರ್ವಸನ ಬಾಕಿ ಇದೆ ? ಇದರಲ್ಲಿ ಯಾವ ಅಡಚನೆಗಳು ಇವೆ ಮತ್ತು ಸರಕಾರ ಅದರಲ್ಲಿ ಯಾವ ಉಪಾಯಯೋಜನೆ ಮಾಡುತ್ತಿದೆ ? ಇದರ ಮಾಹಿತಿ ಸರಕಾರ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.