ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಬಾರಿ ಹಿಂದೂ ಲೆಫ್ಟಿನೆಂಟ್ ಕರ್ನಲ್ ನೇಮಕ !

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನ ಸೈನ್ಯದಲ್ಲಿ ೨ ಹಿಂದೂ ಅಧಿಕಾರಿಗಳಿಗೆ ಮೊಟ್ಟ ಮೊದಲ ಬಾರಿ ಲೆಫ್ಟಿನೆಂಟ್ ಕರ್ನಲ ಸ್ಥಾನಕ್ಕೆ ಪದೋನ್ನತಿ ನೀಡಲಾಗಿದೆ. ಮೇಜರ ಡಾ. ಕೈಲಾಶ ಕುಮಾರ ಮತ್ತು ಮೇಜರ ಡಾ. ಅನಿಲ ಕುಮಾರ ಎಂದು ಇಬ್ಬರು ಅಧಿಕಾರಿಗಳ ಹೆಸರುಗಳಾಗಿವೆ. ‘ಪಾಕಿಸ್ತಾನ ಆರ್ಮಿ ಪ್ರಮೋಷನ್ ಬೋರ್ಡ್’ ಇವರು ಪದೋನ್ನತಿಗೆ ಮಾನ್ಯತೆ ನೀಡಿದ ನಂತರ ಅವರಿಗೆ ಈ ಪದೋನ್ನತಿ ನೀಡಲಾಗಿದೆ. ಸಿಂಧ ಪ್ರಾಂತದಲ್ಲಿ ಥಾರಪಾರಕರ ಜಿಲ್ಲೆಯ ನಿವಾಸಿಯಾಗಿರುವ ಕೈಲಾಶ ಕುಮಾರ್ ಇವರು ೨೦೧೯ ರಲ್ಲಿ ಹಿಂದೂ ಸಮುದಾಯದ ದೇಶದಲ್ಲಿನ ಮೊದಲು ಮೇಜರ ಆಗಿದ್ದರು. ಇವರು ೧೯೮೧ ಜನಿಸಿದ್ದಾರೆ. ಜಾಮಶೋರೋ ಇಲ್ಲಿಯ ‘ಲಿಯಾಕತ ಯುನಿವರ್ಸಿಟಿ ಆಫ್ ಮೆಡಿಕಲ್ ಹೆಲ್ತ್ ಅಂಡ್ ಸೈನ್ಸಸ್’ನಿಂದ ಎಂ.ಬಿ.ಬಿ.ಎಸ್. ಪೂರ್ಣ ಮಾಡಿದ ನಂತರ ೨೦೦೮ ರಲ್ಲಿ ಅವರು ಪಾಕಿಸ್ತಾನದ ಸೈನ್ಯದಲ್ಲಿ ‘ಕ್ಯಾಪ್ಟನ್’ ಎಂದು ನೇಮಕಗೊಂಡರು.