Hindu Boy Killed: ಬಾಂಗ್ಲಾದೇಶ: ಮುಸಲ್ಮಾನ ಯುವತಿಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಹಿಂದೂ ಯುವಕನ ಹತ್ಯೆಗೈದ ಮೂವರು ಮೌಲ್ವಿಗಳು!

(‘ಮೌಲಾನಾ’ ಎಂದರೆ ಇಸ್ಲಾಮಿನ ಅಭ್ಯಾಸಕರು)

ಢಾಕಾ (ಬಾಂಗ್ಲಾದೇಶ) – ನೆರೆಯ ಬಾಂಗ್ಲಾದೇಶದಲ್ಲಿ ಓರ್ವ ಮುಸಲ್ಮಾನ ಯುವತಿಯ ಜೊತೆಗೆ ಪ್ರೇಮ ಸಂಬಂಧಹೊಂದಿದ್ದ ಕಾರಣಕ್ಕೆ ಹಿಂದೂ ಯುವಕನನ್ನು ಮೂವರು ಮೌಲ್ವಿಗಳು ಹಿಗ್ಗಾಮುಗ್ಗ ಥಳಿಸಿ ಅವನ ಹತ್ಯೆ ಮಾಡಿದ್ದಾರೆ.

ಮಾಧ್ಯಮಗಳು ನೀಡಿರುವ ಸಮಾಚಾರದ ಪ್ರಕಾರ, ಢಾಕಾದಲ್ಲಿನ ಕಿಶೋರಗಂಜ ಜಿಲ್ಲೆಯ ನಿವಾಸಿಯಾದ ರೀಡಾಯ್ ರೋಬಿ ದಾಸ್ ಎಂಬ ಹಿಂದೂ ಯುವಕನನ್ನು ನವಂಬರ್ ೧೭.೨೦೨೪ ರಂದು ಹತ್ಯೆ ಮಾಡಲಾಗಿದೆ. ಮೂವರು ಮೌಲ್ವಿಗಳು ರೀಡಾಯ್ ಎಂಬವನನ್ನು ಅವನ ಅಂಗಡಿಯಿಂದ ಅಪಹರಿಸಿ ಅವನನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಈ ಮೌಲ್ವಿಗಳು ಅವನಿಗೆ ಹಿಗ್ಗಾಮುಗ್ಗ ಥಳಿಸಿದರು ಮತ್ತು ಅವನಿಗೆ ಕಿರುಕುಳ ನೀಡಿ ಹತ್ಯೆ ಮಾಡಿದ್ದಾರೆ. ರೀಡಾನ್ ತನ್ನ ಮುಸಲ್ಮಾನ ಪ್ರೇಯಸಿಯನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲು ಬಯಸಿದ್ದನು ಹಾಗಾಗಿ ನಾವು ಅವನಿಗೆ ಈ ಶಿಕ್ಷೆ ನೀಡಿದ್ದೇವೆ ಎಂದು ಮೌಲ್ವಿಗಳು ಆರೋಪಿಸಿದ್ದಾರೆ. ಈ ಘಟನೆಯ ನಂತರ ರೀಡಾಯ್ ನ ಕುಟುಂಬದವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಹಿಂದೂಗಳಷ್ಟೇ ಅಲ್ಲ ಜಗತ್ತಿನ ಎಲ್ಲಾ ಹಿಂದುಗಳನ್ನು ರಕ್ಷಿಸುವುದಕ್ಕಾಗಿ ಹಿಂದೂ ರಾಷ್ಟ್ರವೇ ತರಬೇಕು !