ವ್ಯಕ್ತಿಯ ಪ್ರಕೃತಿ ಮತ್ತು ಶಾರೀರಿಕ ಸ್ಥಿತಿಗನುಸಾರ ಯೋಗ್ಯ ಮಗ್ಗುಲಲ್ಲಿ ಮಲಗುವುದರಿಂದ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭವಾಗಿ ಬೇಗನೇ ಶಾಂತ ನಿದ್ರೆ ತಗಲುವುದು !
ಉಬ್ಬಸದ ತೊಂದರೆಯಾಗುತ್ತಿದ್ದರೆ, ಎಡ ಮಗ್ಗುಲಿಗೆ ಮಲಗಬೇಕು. ಇದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ದೇಹದಲ್ಲಿ ಉಷ್ಣತೆಯು ಹೆಚ್ಚಾಗಿ ಶ್ವಾಸಮಾರ್ಗದಲ್ಲಿನ ಕಫದ ಕಣಗಳು ಕರಗಿ ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ.