ಬನಾರಸ ಹಿಂದೂ ವಿಶ್ವವಿದ್ಯಾಲದಲ್ಲಿ ಎಮ್.ಎ.ಗಾಗಿ ದೇಶದ ಮೊದಲ ‘ಹಿಂದೂ ಪಠ್ಯಕ್ರಮ’ದ ಪ್ರಾರಂಭ !

ಸ್ವಾತಂತ್ರ್ಯದ ೭೪ ವರ್ಷಗಳ ಬಳಿಕ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಈ ರೀತಿಯ ಪಠ್ಯಕ್ರಮ ಮತ್ತು ಅದೂ ಕೂಡ ಕೇವಲ ಒಂದು ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗುವುದು ಎಂದರೆ ಇಲ್ಲಿಯವರೆಗಿನ ಎಲ್ಲ ಆಡಳಿತಗಾರರಿಗೆ ಲಜ್ಜಾಸ್ಪದ ಸಂಗತಿ !

ಕೇಂದ್ರ ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ದೇಶದ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ ಹಾಗೂ ಪ್ರಾಥಮಿಕ ಶಾಲೆಯಿಂದ ಹಿಂದೂಗಳಿಗೆ ಧರ್ಮದ ವಿಷಯದ ಶಿಕ್ಷಣವನ್ನು ನೀಡಲು ತತ್ಪರತೆಯಿಂದ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ವಾರಣಾಸಿ (ಉತ್ತರಪ್ರದೇಶ) – ಬನಾರಸ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಮ್.ಎ.ಗಾಗಿ ‘ಹಿಂದೂ ಪಠ್ಯಕ್ರಮ’ ಈ ಹೊಸ ಪಠ್ಯಕ್ರಮವನ್ನು ಪ್ರಾರಂಭಿಸಿದೆ. ದೇಶದಲ್ಲಿರುವ ಈ ರೀತಿಯ ಮೊದಲ ಸ್ನಾತಕೋತ್ತರ ಪಠ್ಯಕ್ರಮವಾಗಿದೆ. ಬನಾರಸ ಹಿಂದೂ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಜಯ ಕುಮಾರ ಶುಕ್ಲಾ ಇವರು ಈ ಪಠ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಈ ಪಠ್ಯಕ್ರಮ ‘ರಾಷ್ಟ್ರೀಯ ಶಿಕ್ಷಣ ನೀತಿ, ೨೦೨೦’ ಅನುಗುಣವಾಗಿ ಸಿದ್ಧಪಡಿಸಲಾಗಿದೆ. ಕಲಾವಿಭಾಗದ ಅಡಿಯಲ್ಲಿ ಈ ಪಠ್ಯಕ್ರಮವಿರಲಿದೆ. ದರ್ಶನಶಾಸ್ತ್ರ ಮತ್ತು ಧರ್ಮ ವಿಭಾಗ, ಸಂಸ್ಕೃತವಿಭಾಗ ಹಾಗೂ ಪ್ರಾಚೀನ ಭಾರತೀಯ ಇತಿಹಾಸ, ಹಾಗೆಯೇ ಸಂಸ್ಕೃತಿ ಮತ್ತು ಪುರಾತತ್ವ ವಿಭಾಗದ ಸಹಯೋಗದಲ್ಲಿ ಪಠ್ಯಕ್ರಮವನ್ನು ತಯಾರಿಸಲಾಗಿದೆ.

ಕುಲಪತಿ ಡಾ. ವಿಜಯಕುಮಾರ ಶುಕ್ಲಾ ಮಾತನಾಡುತ್ತಾ, ಈ ಪಠ್ಯಕ್ರಮ ಜಗತ್ತಿನ ಹಿಂದೂ ಧರ್ಮದ ಅಜ್ಞಾತ ಅಂಶಗಳ ಮಾಹಿತಿ ಮತ್ತು ಶಿಕ್ಷಣವನ್ನು ನೀಡಲಿದೆ. ಇದರ ಮೊದಲ ಹಂತದಲ್ಲಿ ೪೫ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಇದರಲ್ಲಿ ಕೆಲವು ವಿದೇಶಿ ವಿದ್ಯಾರ್ಥಿಗಳೂ ಇದ್ದಾರೆ. (ನಾಳೆ ಇದೇ ವಿದೇಶಿ ವಿದ್ಯಾರ್ಥಿಗಳು ಭಾರತೀಯ ಹಿಂದೂ ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದ ಶಿಕ್ಷಣವನ್ನು ನೀಡ ತೊಡಗಿದರೆ ಆಶ್ಚರ್ಯ ಪಡಬಾರದು !- ಸಂಪಾದಕರು)