೧೯೯೫ ರಲ್ಲಿ ಪರಾತ್ಪರ ಗುರು ಡಾಕ್ಟರರು ನೆಟ್ಟ ಗ್ರಂಥದ ಒಂದು ಚಿಕ್ಕ ಸಸಿಯು ಕೇವಲ ೨೬ ವರ್ಷಗಳಲ್ಲಿ ೩೫೦ ಗ್ರಂಥಗಳ ಒಂದು ದೊಡ್ಡ ವೃಕ್ಷದಲ್ಲಿ ರೂಪಾಂತರವಾಗಿದೆ. ಇನ್ನೂ ೫ ಸಾವಿರಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸುವಷ್ಟು ಬರವಣಿಗೆಯು ಗಣಕಯಂತ್ರದಲ್ಲಿದೆ. ಸಪ್ಟೆಂಬರ್ ೨೦೨೧ ರಿಂದ ಸನಾತನ ಸಂಸ್ಥೆಯು ನಡೆಸಿದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಅಂರ್ತಗತ ಸನಾತನದ ಗ್ರಂಥಗಳನ್ನು ಭಾರತದಾದ್ಯಂತ ವ್ಯಾಪಕ ಸ್ತರದಲ್ಲಿ ಪ್ರಸಾರವನ್ನು ಮಾಡಲಾಗುತ್ತಿದೆ. ಈ ಅಭಿಯಾನಕ್ಕೆ ಎಲ್ಲೆಡೆಯಲ್ಲೂ ಸ್ವಯಂಪ್ರೇರಿತ ಮತ್ತು ಅಭೂತಪೂರ್ವ ಬೆಂಬಲ ಲಭಿಸುತ್ತಿದೆ. ಈ ಅಭಿಯಾನದ ಅಂರ್ತಗತ ಕೇವಲ ೩ ತಿಂಗಳುಗಳಲ್ಲಿಯೇ ಮರಾಠಿ, ಹಿಂದಿ, ಕನ್ನಡ, ಗುಜರಾತಿ ಮತ್ತು ಆಂಗ್ಲ ಈ ೫ ಭಾಷೆಗಳಲ್ಲಿನ ೩,೫೮,೯೮೦ ಗ್ರಂಥಗಳು ಮಾರಾಟವಾಗಿವೆ ! ಈ ಅಭಿಯಾನ ನಡೆಯತ್ತಿರುವಾಗಲೇ ಸನಾತನದ ೩೫೦ ನೇ ಗ್ರಂಥವನ್ನು ಪ್ರಕಟಿಸುವುದು ದುಗ್ಧಶರ್ಕರಾಯೋಗವಾಗಿದೆ (ಹಾಲಿನಲ್ಲಿ ಸಕ್ಕರೆ ಹಾಕಿದಂತೆ ಆಗಿದೆ).
‘ಈಶ್ವರೀ ನಿಯೋಜನೆಗನುಸಾರ ೨೦೨೫ ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು ಮತ್ತು ನಂತರ ಅನಂತಕಾಲ ಸನಾತನದ ಗ್ರಂಥಗಳು ವೇದಗಳಂತೆ ‘ಧರ್ಮಗ್ರಂಥ’ಗಳೆಂದು ಮಾನ್ಯತೆಯನ್ನು ಪಡೆಯುವವು’, ಎಂದು ಮಹರ್ಷಿಗಳು ‘ಸಪ್ತರ್ಷಿ ಜೀವನಾಡಿ ಪಟ್ಟಿ’ಯ ಮೂಲಕ ಆಶೀರ್ವಾದವನ್ನು ನೀಡಿದ್ದಾರೆ. ಪರಾತ್ಪರ ಗುರು ಡಾಕ್ಟರರ ಈ ದೈದಿಪ್ಯಮಾನ ಗ್ರಂಥಕಾರ್ಯ ಇಡೀ ಭಾರತಕ್ಕೇ ಅಭಿಮಾನವೆನಿಸುವಂತಹದ್ದಾಗಿದೆ. ‘ಅಖಿಲ ಮನುಕುಲವೇ ಈ ಜ್ಞಾನಗಂಗೆಯಲ್ಲಿ ಮಿಂದೆದ್ದು ಮನುಷ್ಯಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು’, ಇದೇ ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !
– (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೧೫.೧೨.೨೦೨೧)
ಗ್ರಂಥ ರಚನೆಯ ಸೇವೆ ಮಾಡಲು ಇಚ್ಛಿಸುವವರು ಈ ಮುಂದಿನ ಮಾಹಿತಿಯನ್ನು ತಿಳಿಸಬೇಕು !ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿ ನವೆಂಬರ್ ೨೦೨೧ ರ ವರೆಗೆ ೩೫೦ ಗ್ರಂಥಗಳು ಪ್ರಕಾಶನವಾಗಿವೆ. ಇನ್ನೂ ಸುಮಾರು ೫ ಸಾವಿರಕ್ಕಿಂತಲೂ ಹೆಚ್ಚು ಗ್ರಂಥಗಳ ನಿರ್ಮಾಣ ಪ್ರಕ್ರಿಯೆಯು ಹೆಚ್ಚು ವೇಗದಲ್ಲಿ ನಡೆಯಬೇಕಾದರೆ ಅನೇಕರ ಸಹಾಯದ ಅವಶ್ಯಕತೆಯಿದೆ. ಗ್ರಂಥನಿರ್ಮಾಣದ ಸೇವೆಯನ್ನು ಕಲಿಯಲು ಗಣಕಯಂತ್ರದ ಅಲ್ಪಸ್ವಲ್ಪ ಜ್ಞಾನ ಮತ್ತು ಗಣಕೀಯ ಬೆರಳಚ್ಚು ಮಾಡಲು ಬರಬೇಕು. ಇದರಲ್ಲಿ ಇಚ್ಛೆಯುಳ್ಳವರು ಸನಾತನದ ಆಶ್ರಮದಲ್ಲಿ ೨-೩ ವಾರ ಇರಬಹುದು. ಮುಂದೆ ಅವರು ಸನಾತನದ ಆಶ್ರಮದಲ್ಲಿ ಅಥವಾ ಮನೆಯಲ್ಲಿಯೇ ಇದ್ದು ಸೇವೆ ಮಾಡಬಹುದು. ಇಚ್ಛೆಯುಳ್ಳವರು ಮುಂದಿನ ಕೋಷ್ಟಕಕ್ಕನುಸಾರ ತಮ್ಮ ಮಾಹಿತಿಯನ್ನು ಸನಾತನದ ಸಾಧಕರಿಗೆ ಗಣಕೀಯ ಕಡತದ ಮೂಲಕ ಅಥವಾ ಲಿಖಿತ ಸ್ವರೂಪದಲ್ಲಿ ನೀಡಬೇಕು ಮತ್ತು ಸಾಧಕರು ಆ ಮಾಹಿತಿಯನ್ನು ತಮ್ಮ ಜಿಲ್ಲಾಸೇವಕರ ಮೂಲಕ ನನ್ನ ಹೆಸರಿಗೆ [email protected] ಈ ವಿ-ಅಂಚೆಗೆ ಅಥವಾ ಮುಂದಿನ ಅಂಚೆಯ ವಿಳಾಸಕ್ಕೆ ಕಳುಹಿಸಬೇಕು. ಅಂಚೆಯ ವಿಳಾಸ ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಂದೀಪ ಸಾವಂತ, ‘ಸನಾತನ ಆಶ್ರಮ’, ರಾಮನಾಥಿ, ಫೋಂಡಾ ಗೋವಾ. – ೪೦೩ ೪೦೧ ಸಂಚಾರಿವಾಣಿ – ೭೦೫೮೮೮೫೬೧೦ – ಸೌ. ಭಾಗ್ಯಶ್ರೀ ಸಂದೀಪ ಸಾವಂತ (15.12.2021) |
೭. ಗ್ರಂಥಗಳಲ್ಲಿನ ಜ್ಞಾನಕ್ಕೆ ನಿಯತಕಾಲಿಕೆಗಳ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಿದ್ಧಿ !
೭ ಅ. ಸನಾತನದ ಗ್ರಂಥಗಳಲ್ಲಿನ ಜ್ಞಾನವನ್ನು ಪ್ರಸಾರ ಮಾಡುವ ಜಾಲತಾಣಗಳು೭. ಗ್ರಂಥಗಳಲ್ಲಿನ ಜ್ಞಾನಕ್ಕೆ ನಿಯತಕಾಲಿಕೆಗಳ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಿದ್ಧಿ !
೧. sanatan.org (ಮರಾಠಿ, ಹಿಂದಿ, ಕನ್ನಡ, ತಮಿಳು, ತೆಲುಗು, ಗುಜರಾತಿ, ಮಲಯಾಳಮ್, ನೇಪಾಲಿ ಮತ್ತು ಆಂಗ್ಲ ಈ ಭಾಷೆಗಳಲ್ಲಿ)
೨. HinduJagruti.org (ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ)
೩. Balasanskar.com (ಮರಾಠಿ, ಹಿಂದಿ, ಆಂಗ್ಲ ಮತ್ತು ಕನ್ನಡ)
೪. SpiritualResearchFoundation.org (ಆಂಗ್ಲ, ಚೀನೀ, ಪಾರಂಪರಿಕ ಚೀನೀ, ಫ್ರೆಂಚ್, ಡಚ್, ಸ್ಪ್ಯಾನಿಶ್, ಕ್ರೊಯೇಶಿಯನ್, ಸರ್ಬಿಯನ್, ರಶ್ಯನ್, ಸ್ಲೋವ್ಹೆನ್ಸಿನಾ, ಮಲಯ, (ಮಲೇಶಿಯನ್), ಇಟಾಲಿಯನ್, ಇಗ್ಬೋ, ಹಂಗೇರಿಯನ್, ಪೋರ್ಚ್ಯುಗೀಸ್, ಇಂಡೋನೇಶಿಯನ್, ಮ್ಯಸ್‌ಡೀನಿಯನ್, ಬಲ್ಗೇರಿಯನ್, ವಿಯೇಟ್ನಾಮಿ, ರೋಮಾನಾ ಮತ್ತು ನೇಪಾಲಿ ಈ ೨೨ ವಿದೇಶಿ ಭಾಷೆಗಳಲ್ಲಿ ಹಾಗೂ ಹಿಂದಿ ಮತ್ತು ತಮಿಳು ಈ ೨ ಭಾರತೀಯ ಭಾಷೆಗಳಲ್ಲಿ.)
೫. spiritual.university (Maharshi University of Spirituality) : ಆಂಗ್ಲ ಭಾಷೆಯಲ್ಲಿ
೭ ಆ. ‘ಯು ಟ್ಯೂಬ್’ನಲ್ಲಿ ಪ್ರಸಾರ : ‘www.youtube.com/c/Dharmashikshan‘ಈ ಲಿಂಕ್‌ನ ‘ಧರ್ಮಶಿಕ್ಷಣ’ ವಾಹಿನಿಯಲ್ಲಿ (‘ಚಾನಲ್’ನಲ್ಲಿ) ‘ಬ್ರಹ್ಮಧ್ವಜವನ್ನು ಹೇಗೆ ಏರಿಸಬೇಕು ?’, ‘ಗಣೇಶೋತ್ಸವ, ನವರಾತ್ರ್ಯುತ್ಸವ ಇತ್ಯಾದಿಗಳನ್ನು ಹೇಗೆ ಆಚರಿಸಬೇಕು’, ‘ಹೋಳಿಯ ಪೂಜೆ ಹೇಗೆ ಮಾಡಬೇಕು ?’ ಇತ್ಯಾದಿ ವಿಷಯಗಳ ಮರಾಠಿ, ಹಿಂದಿ, ಬಂಗಾಲಿ, ಗುಜರಾತಿ, ಕನ್ನಡ, ತೆಲುಗು, ಮಲ್ಯಾಳಮ್ ಮತ್ತು ತಮಿಳು ಈ ಭಾಷೆಗಳಲ್ಲಿನ ವಿಡಿಯೋಗಳು ಉಪಲಬ್ಧವಿವೆ. ೧೧.೫.೨೦೧೧ ರಂದು ಆರಂಭವಾದ ಈ ‘ಯೂ ಟ್ಯೂಬ್’ ವಾಹಿನಿಗೆ ಭೇಟಿಯಾದವರ ಸಂಖ್ಯೆ ನವೆಂಬರ್ ೨೦೨೧ ರ ವರೆಗೆ ೪೧,೧೮,೦೦೦ ಕ್ಕಿಂತಲೂ ಹೆಚ್ಚು ಇದೆ.
೭ ಇ. ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ : ‘ಟ್ವಿಟರ್’, ‘ವಾಟ್ಸ್‌ಆಪ್’ ಮತ್ತು ‘ಟೆಲಿಗ್ರಾಮ್’ ಈ ಸಾಮಾಜಿಕ ಮಾಧ್ಯಮಗಳ ಮೂಲಕ ಸನಾತನದ ಗ್ರಂಥಗಳಲ್ಲಿನ ಲೇಖನಗಳು ಪ್ರತಿ ತಿಂಗಳು ಸಾವಿರಾರು ಜನರಿಗೆ ತಲಪುತ್ತವೆ.
೭ ಈ. ‘ಅಂಡ್ರಾಯಿಡ್ ಆಪ್’ನ ಮೂಲಕ ಪ್ರಸಾರ : ‘ಬಾಲಸಂಸ್ಕಾರ’, ‘ಹಿಂದೂ ಜನಜಾಗೃತಿ ಸಮಿತಿ’, ‘ಸನಾತನ ಸಂಸ್ಥೆ’, ‘ಸನಾತನ ಪ್ರಭಾತ ನಿಯತಕಾಲಿಕೆ’, ‘ಆಪತ್ಕಾಲದ ಭದ್ರತೆ’ ಮತ್ತು ‘ಶ್ರಾದ್ಧವಿಧಿ’ ಇತ್ಯಾದಿ ಅಂಡ್ರಾಯಿಡ್ ಆಪ್ಸ್ ಮೂಲಕ ಸನಾತನದ ಗ್ರಂಥಗಳಲ್ಲಿನ ಲೇಖನಗಳನ್ನು ಪ್ರತಿ ತಿಂಗಳು ಸಾವಿರಾರು ಜನರು ಓದುತ್ತಾರೆ.
೮. ಹಿಂದೂ ರಾಷ್ಟ್ರ-ಸ್ಥಾಪನೆಯ ದೃಷ್ಟಿಯಲ್ಲಿ ಗ್ರಂಥಗಳ ಅಸಾಧಾರಣ ಮಹತ್ವ !
ಧರ್ಮದ ಅಧಿಷ್ಠಾನದಲ್ಲಿಯೇ ‘ಹಿಂದೂ ರಾಷ್ಟ್ರ’ ಎದ್ದು ನಿಲ್ಲುವುದರಿಂದ ಹಿಂದೂ-ರಾಷ್ಟ್ರ ಸ್ಥಾಪನೆಗಾಗಿ ಎಲ್ಲೆಡೆ ಧರ್ಮ ಪ್ರಚಾರದ ಕಾರ್ಯದ ಅತ್ಯಂತ ಆವಶ್ಯಕತೆಯಿದೆ. ಧರ್ಮಪ್ರಸಾರದ ಕಾರ್ಯವಾಗುವುದರಲ್ಲಿ ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ ಇವುಗಳಲ್ಲಿ ಜ್ಞಾನಶಕ್ತಿಯ ಯೋಗದಾನ ದೊಡ್ಡ ಪ್ರಮಾಣದಲ್ಲಿದೆ. ಜ್ಞಾನಶಕ್ತಿಯ ಮೂಲಕ ಕಾರ್ಯವಾಗುವುದರಲ್ಲಿ ಎಲ್ಲಕ್ಕಿಂತ ಪ್ರಭಾವಪೂರ್ಣ ಮಾಧ್ಯಮವೆಂದರೆ, ‘ಗ್ರಂಥ’ !
– (ಪೂ.) ಸಂದೀಪ ಆಳಶಿ (೧೫.೧೨.೨೦೨೧)
೯. ಪರಾತ್ಪರ ಗುರು ಡಾಕ್ಟರರು ಹಿಂದೂ ರಾಷ್ಟ್ರ ಸ್ಥಾಪನೆಯ ತಾತ್ಕಾಲಿಕ ಕಾರ್ಯದಲ್ಲಿ ಪಾಲ್ಗೊಳ್ಳುವುದು ಲೌಕಿಕಾರ್ಥದಲ್ಲಿ ಹೆಚ್ಚೇನೂ ಕಾಣಿಸದಿರುವುದರ ಹಿಂದಿನ ಕಾರಣವೆಂದರೆ, ಅವರು ಮಾಡುತ್ತಿರುವ ಗ್ರಂಥಗಳ ಕಾರ್ಯ !
‘ಕೆಲವು ಹಿಂದುತ್ವನಿಷ್ಠರು, “ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ನಿಮ್ಮ ಸಹಭಾಗ ಕಾಣಿಸುವುದಿಲ್ಲವೇಕೆ ?’, ಎಂದು ನನಗೆ ಕೇಳಿದರು. ಅವರು ಸಾಧನೆ ಮಾಡದಿರುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಉತ್ತರ ಕೊಡದೆ ನಾನು ಶಾರೀರಿಕ ಸ್ತರದ ವಿಚಾರ ಮಾಡಿ, “ಈಗ ನನ್ನ ವಯಸ್ಸು ೭೮ ವರ್ಷಗಳಾಗಿರುವುದರಿಂದ ಶರೀರವು ಸೋತುಹೋಗಿದೆ. ಆದ್ದರಿಂದ ನನಗೆ ಹೊರಗೆ ಹೋಗಿ ಕಾರ್ಯ ಮಾಡಲು ಸಾಧ್ಯವಿಲ್ಲ, ಎಂದೆನು. ಅವರ ಪ್ರಶ್ನೆಯ ಆಧಾತ್ಮಿಕ ಸ್ತರದ ಉತ್ತರ ಈ ಮುಂದಿನಂತಿದೆ.
ಅ. ಈಶ್ವರೀ ನಿಯೋಜನೆ ಮತ್ತು ಕಾಲಮಹಾತ್ಮೆಗನುಸಾರ ಹಿಂದೂ ರಾಷ್ಟ್ರ ಸ್ಥಾಪನೆಯು ೨೦೨೫ ರಲ್ಲಿ ಆರಂಭವಾಗಲಿಕ್ಕಿದೆ. ಆದ್ದರಿಂದ ಈಗ ನಾನು ಏನೂ ಮಾಡುವ ಅವಶ್ಯಕತೆಯಿಲ್ಲ. ನಾನು ಸಿದ್ಧಪಡಿಸಿದ ಸಾಧಕರು ಈ ಕಾರ್ಯವನ್ನು ಮಾಡುತ್ತಿದ್ದಾರೆ.
ಆ. ಮುಂದೆ ಸ್ಥಾಪನೆಯಾಗಲಿರುವ ಹಿಂದೂ ರಾಷ್ಟ್ರದಲ್ಲಿನ ಹಿಂದೂಗಳಿಗೆ ಮತ್ತು ಜಿಜ್ಞಾಸುಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿನ ವೇದಗಳು, ಉಪನಿಷತ್ತುಗಳು, ಪುರಾಣಗಳು ಇತ್ಯಾದಿಗಳ ವಾಚನದಿಂದ ಹಿಂದೂ ಧರ್ಮ ತಿಳಿಯಲಿಕ್ಕಿಲ್ಲ; ಏಕೆಂದರೆ ಅವರ ವಿಚಾರ ಬುದ್ಧಿಯ ಸ್ತರದಲ್ಲಿರುವುದು ಹಾಗೂ ಅಧ್ಯಾತ್ಮವು ಬುದ್ಧಿಯ ಆಚೆಗಿನದ್ದಾಗಿದೆ. ಆ ಕಾಲದಲ್ಲಿ ಅಧ್ಯಾತ್ಮ ತಿಳಿಯಬೇಕೆಂದು ಬುದ್ಧಿಯ ಸ್ತರದಲ್ಲಿ ಅವರು ಹೆಚ್ಚೆಚ್ಚು ತಿಳಿದುಕೊಳ್ಳಬೇಕೆಂದು ನಾನು ಬರೆಯುತ್ತಿರುವ ಗ್ರಂಥಗಳಲ್ಲಿ ವಿಜ್ಞಾನದ ಭಾಷೆಯಲ್ಲಿ ಅಧ್ಯಾತ್ಮವನ್ನು ಹೇಳಿದ್ದೇನೆ.
ಇ. ಸನಾತನದ ಎಲ್ಲ ಗ್ರಂಥಗಳು ಜಿಜ್ಞಾಸುಗಳಿಗೆ ಮುಂದಿನ ಸಾವಿರಾರು ವರ್ಷಗಳು ಅಧ್ಯಾತ್ಮ ಕಲಿಯಲು ಉಪಯೋಗವಾಗುವವು. ಋಷಿಮುನಿಗಳು ಹಿಂದೆ ಬರೆದಿಟ್ಟಿರುವ ಗ್ರಂಥಗಳು ಸಾವಿರಾರು ವರ್ಷಗಳ ನಂತರವೂ ಈಗ ಸಮಾಜಕ್ಕೆ ದಾರಿ ತೋರಿಸಲು ಉಪಯುಕ್ತವಾಗಿವೆ. ಸಂತ ತುಳಸೀದಾಸರು, ಸಂತ ಕಬೀರರು, ಸಂತ ಜ್ಞಾನೇಶ್ವರರು, ಸಂತ ತುಕಾರಾಮರು, ಸಮರ್ಥ ರಾಮದಾಸ ಸ್ವಾಮಿಗಳು, ಸಂತ ಕನಕದಾಸರು, ಸಂತ ಪುರಂದರದಾಸರು, ಶ್ರೀ ರಾಘವೇಂದ್ರಸ್ವಾಮಿಗಳು, ಸಂತ ನರಸಿ ಮೆಹತಾರವರು ಮುಂತಾದವರು ಬರೆದಿರುವ ಸಾಹಿತ್ಯಗಳು ಹಲವಾರು ವರ್ಷಗಳ ನಂತರವೂ ಈಗ ಮಾರ್ಗದರ್ಶಕವಾಗಿವೆ. ಅದೇ ರೀತಿ ನಾನು ಸಂಕಲನ ಮಾಡಿರುವ ಗ್ರಂಥಗಳು ಹಿಂದೂ ರಾಷ್ಟ್ರದ ಹಿಂದೂಗಳಿಗೆ ಮಾತ್ರವಲ್ಲ, ಜಗತ್ತಿನ ಸಾಧಕರಿಗೆ ಮಾರ್ಗದರ್ಶಕವಾಗುವವು. ಇದರಿಂದ ‘ತಾತ್ಕಾಲಿಕ ಮಹತ್ವವಿರುವ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕಾಗಿ ನಾನು ನನ್ನ ಉಳಿದ ಜೀವನವನ್ನು ನೀಡುವ ಬದಲು ಅದನ್ನು ಗ್ರಂಥಗಳ ಸಂಕಲನದ ಸೇವೆಗಾಗಿ ನೀಡುವುದು ಎಷ್ಟು ಮಹತ್ವದ್ದಾಗಿದೆ’, ಎಂಬುದು ಅರಿವಾಗಬಹುದು. – (ಪರಾತ್ಪರ ಗುರು) ಡಾ. ಜಯಂತ ಆಠವಲೆ (೨.೮.೨೦೨೦)
೧೦. ಗ್ರಂಥಗಳ ಮೂಲಕ ಆಗುವ ಧರ್ಮಪ್ರಚಾರ ಕಾರ್ಯದಲ್ಲಿ ಸಹಭಾಗಿಯಾಗುವವರ ಮೇಲೆ ಪರಾತ್ಪರ ಗುರು ಡಾಕ್ಟರರ ಅಪಾರ ಕೃಪೆಯಾಗಲಿಕ್ಕಿದೆ
ವಿಷಯ ‘೮’ ಮತ್ತು ‘೯’ ರಿಂದ ‘ಗ್ರಂಥಗಳ ಮೂಲಕ ಧರ್ಮಪ್ರಚಾರ ಮಾಡುವುದು’, ಇದು ವರ್ತಮಾನ ಕಾಲದ ಶ್ರೇಷ್ಠ ಸಾಧನೆಯಾಗಿದೆ, ಎಂಬುದು ಅರಿವಾಗುವುದು. ಹಿಂದೂ ರಾಷ್ಟ್ರವು ಸಾವಿರಾರು ವರ್ಷಗಳ ವರೆಗೆ ಉಳಿಯುವುದು; ಆದರೆ ಗ್ರಂಥದಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹೇಗೆ ಹಿಂದೂ ರಾಷ್ಟ್ರ ಬೇಗನೆ ಬರುವ ಅವಶ್ಯಕತೆಯಿದೆಯೋ, ಅಷ್ಟೇ ವೇಗವಾಗಿ ಆಪತ್ಕಾಲ ಮತ್ತು ಮೂರನೆ ಮಹಾಯುದ್ಧ ಆರಂಭವಾಗುವ ಮೊದಲು ಈ ಗ್ರಂಥಗಳು ಪ್ರಕಾಶನವಾಗುವ ಅವಶ್ಯಕತೆಯಿದೆ. ಅದಕ್ಕಾಗಿಯೇ ಆಪತ್ಕಾಲದ ಮೊದಲೇ ಹೆಚ್ಚೆಚ್ಚು ಗ್ರಂಥಗಳು ಪ್ರಸಿದ್ಧವಾಗಬೇಕೆಂಬುದು, ಪರಾತ್ಪರ ಗುರು ಡಾಕ್ಟರರ ಅತ್ಯಂತ ತಳಮಳವಾಗಿದೆ. ಈ ತಳಮಳದಿಂದಲೇ ಅವರು ಇಂದು ಕೂಡ ಪ್ರಾಣಶಕ್ತಿ ಅತೀ ಕಡಿಮೆ ಇರುವಾಗಲೂ ಗ್ರಂಥಕಾರ್ಯವು ವೇಗದಿಂದ ಆಗಬೇಕೆಂಬ ಪ್ರಯತ್ನದಲ್ಲಿದ್ದಾರೆ. ಅದಕ್ಕಾಗಿ ಒಂದು ರೀತಿಯಲ್ಲಿ ಅವರ ಸಂಕಲ್ಪವೂ ಆಗಿದೆ. ಪರಾತ್ಪರ ಗುರು ಡಾಕ್ಟರರಂತಹ ಶ್ರೇಷ್ಠ ವಿಭೂತಿಯ ಸಂಕಲ್ಪಕ್ಕನುಸಾರ ಸಾಧಕರೂ ಗ್ರಂಥಕಾರ್ಯದ ವೇಗ ಹೆಚ್ಚಾಗಲು ತಳಮಳದಿಂದ ಪ್ರಯತ್ನ ಮಾಡಿದರೆ, ಸಾಧಕರ ಆಧ್ಯಾತ್ಮಿಕ ಉನ್ನತಿಯೂ ಶೀಘ್ರಗತಿಯಲ್ಲಿ ಆಗುವುದು.
ಗ್ರಂಥನಿರ್ಮಿತಿಯ ಸೇವೆ ಮಾಡುವವರ ಹಾಗೆಯೇ ಗ್ರಂಥಗಳ ಪ್ರಸಾರ ಮಾಡುವವರು, ಗ್ರಂಥಕ್ಕಾಗಿ ಅರ್ಪಣೆ ತರುವವರು, ಗ್ರಂಥಗಳ ವಿತರಣೆ ಮಾಡುವವರು ಹೀಗೆ ಎಲ್ಲರಿಗೂ ಸಾಧನೆಯ ಅಪೂರ್ವ ಸುವರ್ಣಾವಕಾಶ ಲಭಿಸಿದೆ. ಎಲ್ಲರೂ ಈ ಅವಕಾಶದಿಂದ ಹೆಚ್ಚೆಚ್ಚು ಲಾಭ ಪಡೆಯಬೇಕು ! – (ಪೂ.) ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು. (೧೫.೧೨.೨೦೨೧)