೧೯ ಜನವರಿ ೨೦೨೨ ರಂದು ‘ಕಾಶ್ಮೀರಿ ಹಿಂದೂಗಳ ನಿರಾಶ್ರಿತರ ದಿನ’ ಇದೆ. ಅದರ ನಿಮಿತ್ತದಲ್ಲಿ…
ಒಂದು ಕಾಲದಲ್ಲಿ ವಿಶ್ವಗುರುವೆಂದು ಕರೆಸಿಕೊಳ್ಳುತ್ತಿದ್ದ ಭಾರತದ ಮೂಲ ನಿವಾಸಿಗಳು ಇಂದು ಭಾರತದಲ್ಲಿ ಅಸುರಕ್ಷಿತರಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಹಿಂದೂಗಳ ಸಂಖ್ಯೆ ನಿರಂತರ ಕುಸಿಯುತ್ತಿದೆ ಹಾಗೂ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವ ಮಾರ್ಗದಲ್ಲಿದ್ದಾರೆ. ಇಂದು ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಜಿಹಾದಿ ಉಗ್ರವಾದದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಸ್ಥಳಾಂತರವಾಗುತ್ತಿದ್ದಾರೆ. ಭಾರತದಲ್ಲಿ ಮೊತ್ತ ಮೊದಲು ಕಾಶ್ಮೀರಿ ಪಂಡಿತರು ಜಿಹಾದಿ ಉಗ್ರವಾದವನ್ನು ಎದುರಿಸಬೇಕಾಯಿತು. ೧೯೯೦ ರಲ್ಲಿ ಕಾಶ್ಮೀರದಲ್ಲಿ ಜಿಹಾದಿ ಉಗ್ರವಾದಿಗಳ ಅತ್ಯಾಚಾರದಿಂದ ರಕ್ಷಿಸಿಕೊಳ್ಳಲು ಅಲ್ಲಿನ ನಾಲ್ಕೂವರೆ ಲಕ್ಷ ಹಿಂದೂಗಳು ನಿರಾಶ್ರಿತರಾದರು. ಇಂದು ಆ ಎಲ್ಲ ಹಿಂದೂಗಳು ‘ಪನೂನ್ ಕಶ್ಮೀರ್’ ಸಂಘಟನೆಯ ಮೂಲಕ ಕಾಶ್ಮೀರದಲ್ಲಿ ಪುನಃ ಅವರ ಪುನರ್ವಸತಿಯಾಗಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಈ ಪನೂನ್ ಕಶ್ಮೀರದ ಯುವಾ ಶಾಖೆ ‘ಯುಥ್ ಫಾರ್ ಪನೂನ್ ಕಶ್ಮೀರ್’ ಇದರ ಮಹಾರಾಷ್ಟ್ರ ಪ್ರಮುಖ ಶ್ರೀ. ರಾಹುಲ ಕೌಲ್ ಇವರು ‘ಪನೂನ್ ಕಶ್ಮೀರ್’ ಇದರ ಯುವಾ ಶಾಖೆ ‘ಯೂಥ್ ಫಾರ್ ಪನೂನ್ ಕಶ್ಮೀರ್’ ಸಂಘಟನೆಯ ಸ್ಥಾಪನೆ, ಅದರ ಉದ್ದೇಶ ಮತ್ತು ಅದರ ಕಾರ್ಯದ ವಿಷಯದಲ್ಲಿ ನೀಡಿದ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.
೧. ‘ಸಂಪೂರ್ಣ ಕಾಶ್ಮೀರವನ್ನು ಪುನಃ ಭಾರತದೊಳಗೆ ಸಮಾವೇಶಗೊಳಿಸುವುದು’, ಎನ್ನುವ ಮೂಲ ಮಂತ್ರವನ್ನು ಜಪಿಸುತ್ತಾ ‘ಪನೂನ್ ಕಶ್ಮೀರ’ದ ಜನ್ಮವಾಗಿದೆ
ಕಾಶ್ಮೀರದಿಂದ ೭ ಸಲ ನಮ್ಮ (ಕಾಶ್ಮೀರಿ ಹಿಂದೂಗಳ) ಪಲಾಯನವಾಗಿದೆ. ಕಳೆದ ೭೦೦ ವರ್ಷಗಳಲ್ಲಿ ೭ ಬಾರಿ ಪಲಾಯನವಾಯಿತು. ಅಂದರೆ ಸರಾಸರಿ ಪ್ರತಿ ೧೦೦ ವರ್ಷಗಳಿಗೊಮ್ಮೆ ನಾವು ಕಾಶ್ಮೀರ ದಿಂದ ಪಲಾಯನ ಮಾಡಬೇಕಾಯಿತು. ಒಬ್ಬ ಹೇಳುತ್ತಾನೆ, ನನಗೆ ಪಾಕಿಸ್ತಾನ ಬೇಕು, ಇನ್ನೊಬ್ಬ ಹೇಳುತ್ತಾನೆ, ನನಗೆ ಸ್ವಾತಂತ್ರ÷್ಯ ಬೇಕು. ಮೂರನೆಯವನು ಹೇಳುತ್ತಾನೆ, ನಮಗೆ ಸ್ವನಿರ್ಣಯದ ಅಧಿಕಾರಬೇಕು. ಅಲ್ಲಿ ಯಾರೂ `ನನಗೆ ಭಾರತ ಬೇಕು’, ಎಂದು ಹೇಳುವುದಿಲ್ಲ. ಇದುವೇ ಪನೂನ್ ಕಾಶ್ಮೀರದ ಜನ್ಮದ ಮೂಲ ಕಾರಣವಾಗಿದೆ. ಪನೂನ್ ಕಾಶ್ಮೀರದ ಒಂದೇ ಧ್ಯೇಯವೆಂದರೆ, ಭಾರತದೊಳಗೆ ಪುನಃ ಕಾಶ್ಮೀರವನ್ನು ಸಮಾವೇಶಗೊಳಿಸುವುದು. ಇದೇ ಮೂಲ ಮಂತ್ರವನ್ನು ಜಪಿಸುತ್ತಾ `ಪನೂನ್ ಕಶ್ಮೀರ’ದ ಜನ್ಮವಾಯಿತು.
೨. ‘ಕಾಶ್ಮೀರ ನಮ್ಮದೇ ಆಗಿದೆ’, ಎಂಬುದು ಕಾಶ್ಮೀರಿ ಹಿಂದೂಗಳ ಭಾವನೆಯಾಗಿದೆ
ಒಂದು ವೇಳೆ ಕಾಶ್ಮೀರಿ ಹಿಂದೂಗಳಿಗೆ ತಮ್ಮ ಭೂಮಿಗೆ ಹಿಂತಿರುಗಿ ಹೋಗಲಿಕ್ಕಿದ್ದರೆ, ಅವರು ತಮ್ಮ ಷರತ್ತುಗಳೊಂದಿಗೆ ಅಲ್ಲಿಗೆ ಹೋಗುವರು. ಅವರು ಅಲ್ಲಿನ ಸಹಜೀವನವನ್ನು ನಿರಾಕರಿಸಿದ್ದಾರೆ. ನಾವೇನೂ ಮಾಡಿಲ್ಲ; ಆದರೆ ನಾವು ನಮ್ಮ ಷರತ್ತುಗಳೊಂದಿಗೆ ಅಲ್ಲಿಗೆ ಹೋಗುವೆವು, ಎಂಬುದನ್ನು ಸ್ವೀಕರಿಸಿದ್ದೇವೆ. ಇನ್ನೊಬ್ಬರು ಹೇಳುತ್ತಾರೆ, ನಮಗೆ ಒಂದು ಮೂಲೆ ಬೇಕು. ಹಾಗೆ ಮಾಡಿದರೆ ಉಳಿದ ಕಾಶ್ಮೀರ ಏನಾಗುವುದು ? ಆ ಕಾಶ್ಮೀರವೂ ನಮ್ಮದೇ ಆಗಿದೆ. ನಿಮ್ಮ ಒಂದು ಸ್ವಂತ ಮನೆ ಇದೆ. ಆ ಮನೆಯ ಶಯನಗೃಹದಲ್ಲಿ ನೀವು ಮಲಗುತ್ತೀರಿ. ಒಂದು ಮೂಲೆಯಲ್ಲಿ ನೀವು ಅಭ್ಯಾಸ ಮಾಡುತ್ತೀರಿ; ಆದರೆ ಆ ಮೂಲೆಯೂ ನಿಮ್ಮದೇ ಆಗಿದೆ. ನಾವು ಕೂಡ ಸಂಪೂರ್ಣ ಕಾಶ್ಮೀರ ನಮ್ಮದೇ ಆಗಿದೆ ಹಾಗೂ ಅದು ಅಖಂಡ ಭಾರತದ್ದಾಗಿದೆ; ಆದರೆ ನೀವು ನಮಗೆ ಶಾಶ್ವತವಾದ, ಅಲ್ಲಿಂದ ಯಾರೂ ನಮ್ಮನ್ನು ಹೊರಗೆ ಹಾಕದಂತಹ ಒಂದು ಮೂಲೆಯನ್ನಾದರೂ ಕೊಡಬೇಕು; ಆದ್ದರಿಂದ ನಾವು ಪನೂನ್ ಕಶ್ಮೀರದ ಸಂಕಲ್ಪನೆಯನ್ನು ಮಂಡಿಸುತ್ತಿದ್ದೇವೆ ಹಾಗೂ ಅದಕ್ಕಾಗಿ ನಮಗೆ ನಿಮ್ಮೆಲ್ಲರ ಸಹಕಾರ ಬೇಕಾಗಿದೆ.
೩. ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ ಹೋಗಲು ಏಕೆ ಇಚ್ಛಿಸುವುದಿಲ್ಲ ?
ನಡು ನಡುವೆ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ವಿಷಯದಲ್ಲಿ ಚರ್ಚೆಯಾಗುತ್ತದೆ. ಕಾಶ್ಮೀರದ ಅಂದಿನ ಮುಖ್ಯಮಂತ್ರಿ ಓಮರ ಅಬ್ದುಲ್ಲಾರವರು ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಕೆಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದರು. ಅವರು ಕಾಶ್ಮೀರಿ ಹಿಂದೂಗಳನ್ನು ಸ್ವಯಂಪೂರ್ಣಗೊಳಿಸುವ ಬಗ್ಗೆ ಮಾತನಾಡುತ್ತಾರೆ. ಗಿಲಾನಿಯವರು ಕೂಡ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ಕೆಲವು ಪ್ರಸ್ತಾಪಗಳನ್ನು ಮಂಡಿಸಿದ್ದಾರೆ. ಆದರೂ ಕಾಶ್ಮೀರಿ ಹಿಂದೂಗಳು ಕಾಶ್ಮೀರಕ್ಕೆ ಹೋಗಲು ಇಚ್ಛಿಸುವುದಿಲ್ಲ. ಆಂಗ್ಲ ಭಾಷೆಯ ಒಂದು ವಚನಕ್ಕನುಸಾರ ಇದು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ನೀವು ಈ ನಾಣ್ಯವನ್ನು ನೋಡಿದರೆ, ಓಮರ ಅಬ್ದುಲ್ಲಾರ ಮೊದಲು ಅವರ ತಂದೆ ಫಾರೂಖ ಅಬ್ದುಲ್ಲಾ ಮತ್ತು ಅವರಿಗಿಂತ ಮೊದಲು ಶೇಖ್ ಅಬ್ದುಲ್ಲಾ ಮುಖ್ಯಮಂತ್ರಿ ಆಗಿದ್ದರು.
೪. ಕಾಶ್ಮೀರದಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿರುವುದರಿಂದ ಅಲ್ಲಿ ಇಸ್ಲಾಮೀ ಚಳುವಳಿಯನ್ನು ನಡೆಸಲಾಗುತ್ತದೆ
೧೯೩೧ ರಲ್ಲಿ ಮುಸ್ಲಿಮ್ ಲೀಗ್‌ನ ಜನ್ಮವಾದಾಗಲೇ ಕಾಶ್ಮೀರದಲ್ಲಿ ಮೊತ್ತಮೊದಲು ಬಹುಸಂಖ್ಯಾತದ ಬೀಜವನ್ನು ಬಿತ್ತಲಾಯಿತು. ಅದಕ್ಕೂ ಮೊದಲು ಸಮೂಹಗಳಿದ್ದವು. ಅವರು ಹೋರಾಟಗಾರರು ಹಾಗೂ ಹೊರಗಿನವರಾಗಿದ್ದರು. ಅವರು ಕಾಶ್ಮೀರವನ್ನು ಲೂಟಿ ಮಾಡಿದರು. ಜನರನ್ನು ಮತಾಂತರಿಸಿದರು ಮತ್ತು ಆಯೋಜನಾ ಬದ್ಧವಾಗಿ ಕಾಶ್ಮೀರದಲ್ಲಿ ಇಸ್ಲಾಮೀ ಚಳುವಳಿಯನ್ನು ನಡೆಸಿದರು.
ಮುಸಲ್ಮಾನರದ್ದೇ ಸರಕಾರವಿದ್ದ ಕಾರಣ ಹಿಂದೂಗಳು ದೇಶಾಂತರವಾಗಬೇಕಾಯಿತು. ಮುಸ್ಲಿಮ್ ಲೀಗ್‌ನ ಸ್ಥಾಪನೆಯಾದಾಗ ಶೇಖ್ ಅಬ್ದುಲ್ಲಾರವರು, ‘ನೀವು ಎಲ್ಲಿಯವರೆಗೆ ಅವರ ಹಿಂದೆ ಹೋಗುತ್ತೀರಿ ? ಅವರೇ ನಿಮ್ಮ ಹಿಂದೆ ಬರುವ ಹಾಗೆ ನೀವೇನಾದರೂ ಮಾಡಬೇಕು’, ಎಂದಿದ್ದರು. ಓಮರ ಅಬ್ದುಲ್ಲಾ ಇವರು ಕೂಡ ಹಾಗೆಯೇ ಮಾಡಿದರು. ‘ಜೆ.ಕೆ.ಎಲ್.ಎಫ್.’ನ ನಿರ್ಮಾಣವಾಗುವುದರ ಹಿಂದೆ ಓಮರ ಅಬ್ದುಲ್ಲಾ ಮತ್ತು ಶೇಖ್ ಅಬ್ದುಲ್ಲಾ ಇವರ ಕೈವಾಡವಿದೆ. ಇಂದು ಓಮರ ಅಬ್ದುಲ್ಲಾ, ‘ಕಾಶ್ಮೀರದ ಹಿಂದೂಗಳು ಇಲ್ಲಿಗೆ ಹಿಂತಿರುಗಿ ಬರಬೇಕು’, ಎನ್ನುತ್ತಾರೆ. ಆದರೆ ಇಲ್ಲಿ ವಿಚಾರ ಮಾಡಬೇಕಾದ ವಿಷಯವೆಂದರೆ, ಕಾಶ್ಮೀರದಿಂದ ಹಿಂದೂಗಳು ಹೊರಗೆ ಹೋದಾಗ ಅವರು ಹೊರಗೆ ಹೋಗುವ ಕಾರಣವೇನಿತ್ತು ? ಅಲ್ಲಿ ಭೂಕಂಪ ಆಗಿತ್ತೇ ? ಅಲ್ಲಿನ ವಾತಾವರಣದಲ್ಲಿ ಅಂತಹ ಯಾವ ಬದಲಾವಣೆಯಾಗಿತ್ತು ? ಅದರಿಂದಾಗಿ ನಾಲ್ಕು ಲಕ್ಷ ಹಿಂದೂಗಳಿಗೆ ಕಾಶ್ಮೀರವನ್ನು ತ್ಯಜಿಸಬೇಕಾಯಿತು ? ಕಾಶ್ಮೀರದಿಂದ ಹಿಂದೂ ಹೊರಗೆ ಹೋಗಿರುವುದು ಅವನ ಧರ್ಮದಿಂದಾಗಿ !
೫. ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾಗಲು ಕಾರಣ
ಕಾಶ್ಮೀರಿ ಹಿಂದೂಗಳು ಅಲ್ಲಿಂದ ನಿರಾಶ್ರಿತರಾಗುವುದರ ಹಿಂದೆ ಯಾವ ಕಾರಣವಿತ್ತು, ಎಂಬುದರ ವಿಚಾರವನ್ನು ಯಾಕೆ ಯಾರು ಮಾಡುವುದಿಲ್ಲ ? ನಿರಾಶ್ರಿತರಾಗುವ ಮೂಲ ಕಾರಣವೆಂದರೆ, ಕಾಶ್ಮೀರಿ ಹಿಂದೂಗಳು ಅಲ್ಲಿ ಪ್ರಾಬಲ್ಯವಿರುವ (ಇಸ್ಲಾಮ್) ಪಂಥದವರಾಗಿರಲಿಲ್ಲ.
೬. ಇಸ್ಲಾಮ್‌ನ ಜಾಗತಿಕ ಅಲೆಗಳು ಬರುವುದು
ಹಿಂದೂಗಳಿಗೆ ತಮ್ಮ ಧರ್ಮದಿಂದಾಗಿ ಕಾಶ್ಮೀರದಿಂದ ಪಲಾಯನ ಮಾಡಬೇಕಾಯಿತು; ಏಕೆಂದರೆ, ಕಾಶ್ಮೀರದಲ್ಲಿ ‘ನಿಜಾಮ-ಎ-ಮುಸ್ತಫಾ’ದ ಅಲೆಯು ಬಂದಿತ್ತು. ಇದು ಇಸ್ಲಾಮಿನ ಜಾಗತಿಕ ಅಲೆಯಾಗಿತ್ತು; ಏಕೆಂದರೆ ಇಲ್ಲಿಂದ ಪಶ್ಚಿಮ-ಉತ್ತರದ ಮೈತ್ರಿ ಆರಂಭವಾಗುತ್ತದೆ. ಇಲ್ಲಿಂದ ರಶ್ಯಾ ಕೂಡ ನಿಮಗಾಗಿ ತೆರೆದಿರುತ್ತದೆ. ಎಷ್ಟರವರೆಗೆ ಈ ಇಸ್ಲಾಮೀ ಅಲೆಯ ಅಬ್ಬರ ಇಳಿಯುವುದಿಲ್ಲವೋ, ಅಷ್ಟರವರೆಗೆ ನೀವು ಏನೂ ಮಾಡಲು ಸಾಧ್ಯವಿಲ್ಲ. ನನ್ನ ಅಭಿಪ್ರಾಯದಂತೆ ಓಮರ ಅಬ್ದುಲ್ಲಾ ಮತ್ತು ಗಿಲಾನೀ ಇವರ ಮಾತಿನ ಹಿಂದೆ ‘ನಾವು ಅಲ್ಲಿ ಪ್ರಯಾಣಿಕರ ಹಾಗೆ ಬಂದು ನೆಲೆಸಬೇಕು’, ಅಂದರೆ ಅವರ ಅವಶ್ಯಕತೆಗನುಸಾರ ಕಾಶ್ಮೀರಿಗಳನ್ನು ಅಲ್ಲಿಂದ ಓಡಿಸಬಹುದು ಎಂಬರ್ಥವಿದೆ.
೭. ಕಾಶ್ಮೀರಿ ಹಿಂದೂಗಳ ತ್ರಿಸೂತ್ರ ಬೇಡಿಕೆಗಳು
ನಾವು ಈಗ ಹಿಂತಿರುಗಿ ಹೋದರೆ, ಅದಕ್ಕಾಗಿ ನಮ್ಮಲ್ಲಿ ೩ ವಿಷಯಗಳಿರುವವು. ಒಂದು ಕಾಶ್ಮೀರದಿಂದ ನಿರಂತರ ಹಿಂದೂಗಳ ಪಲಾಯನ ಏಕಾಗುತ್ತಿದೆ ? ಇನ್ನೊಂದು ನಾವು ಬಂದರೆ, ನಾವು ನಮ್ಮ ಭೂಮಿಯ ಆಕಾಂಕ್ಷೆಯೊಂದಿಗೆ ಬರುವೆವು ಹಾಗೂ ಮೂರನೆಯದ್ದು ಕಾಶ್ಮೀರವನ್ನು ಕೇಂದ್ರಾಡಳಿತ ರಾಜ್ಯವನ್ನಾಗಿಮಾಡಬೇಕು. ಎಷ್ಟರವರೆಗೆ ಈ ರಾಜ್ಯವು ಸುರಕ್ಷಿತವಾಗುವುದಿಲ್ಲವೋ, ಅಷ್ಟರ ವರೆಗೆ ಅದನ್ನು ನಡೆಸುವ ಇಚ್ಛಾಶಕ್ತಿಯು ನಿರ್ಮಾಣವಾಗುವುದಿಲ್ಲವೋ, ಅಷ್ಟರ ವರೆಗೆ ಕೇಂದ್ರವೇ ನಡೆಸಬೇಕು.
ಹಿಂದೂಗಳು ಹಿಂದೂ ಧರ್ಮ ಹಾಗೂ ಸಂಸ್ಕೃತಿಗಳ ರಕ್ಷಣೆಗಾಗಿ ಮಾಡಿದ ಪ್ರಯತ್ನ ಅರಾಷ್ಟ್ರೀಯವಲ್ಲ !ಸ್ವಾತಂತ್ರ್ಯಪೂರ್ವದಲ್ಲಿ ಹಿಂದುಸ್ಥಾನ ಸರಕಾರದ ಮಂತ್ರಿಮಂಡಲದಲ್ಲಿ ಇರುವಂತಹ ‘ಸರ’ ಫಜಲೀ ಹುಸೇನ್ ಇವರು ಉತ್ತರ ಹಿಂದುಸ್ಥಾನದಲ್ಲಿಯ ಅಲ್ಪಸಂಖ್ಯಾತರಲ್ಲಿ ಗುಪ್ತವಾಗಿ ಕರಪತ್ರವೊಂದನ್ನು ದೊಡ್ಡ ಪ್ರಮಾಣದಲ್ಲಿ ಹಂಚಿದ್ದರು. ಅದರಲ್ಲಿ ‘ಕಾಪಾಡಿ ! ಈ ಹಿಂದೂ-ಮುಸಲ್ಮಾನರ ಒಟ್ಟಾಗುವ ಬಲೆಯಲ್ಲಿ ಸಿಲುಕಬೇಡಿರಿ ! ನಮಗೆ ಭಿಕ್ಷುಕ ಹಿಂದೂಗಳೊಂದಿಗೆ ಒಟ್ಟಾಗಿ ಏನು ಲಾಭವಿದೆ ? ನಾವು ಆಂಗ್ಲರೊಂದಿಗೆ ಒಟ್ಟಾಗಿ ನಮ್ಮ ಲಾಭವನ್ನು ಮಾಡಿಕೊಳ್ಳಬೇಕು’ ಎಂದಿತ್ತು. ಅದುದರಿಂದಲೇ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಇವುಗಳ ರಕ್ಷಣೆಗಾಗಿ ಹಿಂದುಸ್ಥಾನದಲ್ಲಿಯ ಹಿಂದೂಗಳು ಮಾಡಿದ ಪ್ರಯತ್ನ ಇದು ಜಾತಿಯ ಹಾಗೂ ಅರಾಷ್ಟ್ರೀಯವಾಗಿರಲು ಸಾಧ್ಯವಿಲ್ಲ. (ಕೃಪೆ : ‘ಲೋಕಜಾಗರ’, ವರ್ಷ ೨ ನೆ, ಸಂಚಿಕೆ ೪೦, ೧೨ ಎಪ್ರಿಲ್ ೨೦೧೩) |