೧. ‘ಭಾರತ’ದ ಉತ್ಥಾನದ ಕಾರ್ಯವು ಹಿಂದೂ ಧರ್ಮದಲ್ಲಿ ಎಷ್ಟಾಗುತ್ತದೆಯೋ, ಅಷ್ಟು ಇತರ ಯಾವುದೇ ಧರ್ಮದಲ್ಲಿ ಆಗುವುದಿಲ್ಲ.
೨. ಧರ್ಮರಕ್ಷಣೆಗಾಗಿ ಪ್ರಾಣದ ಆಹುತಿ ಕೊಡುವ ಎಷ್ಟು ಉದಾಹರಣೆಗಳು ಹಿಂದೂ ಧರ್ಮದಲ್ಲಿ ನೋಡಲು ಸಿಗುತ್ತವೆಯೋ, ಅಷ್ಟು ಇತರ ಯಾವುದೇ ಧರ್ಮದಲ್ಲಿ ನೋಡಲು ಸಿಗುವುದಿಲ್ಲ, ಉದಾ. ಪೃಥ್ವಿರಾಜ ಚೌಹಾಣ್, ಛತ್ರಪತಿ ಶಿವಾಜಿ ಮಹಾರಾಜ, ಗುರು ಗೋವಿಂದ ಸಿಂಹ, ರಾಣಿ ಲಕ್ಷ್ಮೀಬಾಯಿ ಇತ್ಯಾದಿ.
೩. ಹಿಂದೂ ಸಮಾಜದಲ್ಲಿ ವ್ಯಕ್ತಿಗಳು ತುಂಬಾ ದಯಾಳು ಆಗಿರುತ್ತಾರೆ. ಅವರು ಪಶುಗಳಿಗೂ ದಯೆ ತೋರಿಸಲು ಮಹತ್ವ ಕೊಡುತ್ತಾರೆ.
೪. ಹಿಂದೂ ಸಮಾಜದಲ್ಲಿ ಎಷ್ಟು ಮಹಾನ ಪುರುಷರಾಗಿ ಹೋದರೋ, ಎಷ್ಟು ಜನ ತಪಸ್ವಿಗಳು, ಋಷಿಮುನಿಗಳು, ಮಹರ್ಷಿಗಳಾಗಿ ಹೋದರೋ, ಅವರೆಲ್ಲರೂ ಪರಸ್ಪರ ಆಧ್ಯಾತ್ಮಿಕತೆಯಿಂದ ಜೋಡಿಸಲ್ಪಟಿದ್ದಾರೆ. ಅವರು ಎಲ್ಲರಿಗೂ ತಮ್ಮ ಅನುಭವದ ಜ್ಞಾನ ನೀಡಿದರು.
೫. ಹಿಂದೂ ಧರ್ಮವು ರಾಷ್ಟ್ರ ಕರ್ತವ್ಯಗಳ ಬೋಧನೆ ನೀಡುತ್ತದೆ.
೬. ಇಂತಹ ಅನೇಕ ಉದಾಹರಣೆಗಳಿವೆ. ವಾಸ್ತವದಲ್ಲಿ ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ. ನಾವು ಹಿಂದೂಗಳು, ನಮ್ಮ ಜನ್ಮ ಹಿಂದೂ ಪರಿವಾರದಲ್ಲಿ ಆಗಿದೆ, ಇದರ ಬಗ್ಗೆ ಅಭಿಮಾನ ಅನಿಸಬೇಕು.
– ರಶ್ಮಿ ಅಗ್ರವಾಲ. ಸಾಪ್ತಾಹಿಕ ‘ಹಿಂದೂ ಸಭಾ ವಾರ್ತಾ’