`ಇಡೀ ವಿಶ್ವವೇ ನನ್ನ ಮನೆ’ ಎಂಬ ಉದಾತ್ತ ಚಿಂತನೆಯನ್ನು ಹಿಂದೂ ಧರ್ಮವೇ ಜಗತ್ತಿಗೆ ನೀಡಿದೆ ! – ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ

ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘One Humanity Many Paths’ ಈ ವಿಶೇಷ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಹಭಾಗ 

ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಸನಾತನ ಸಂಸ್ಥೆಯ ಶ್ರೀಮತಿ. ಲಕ್ಷ್ಮಿ ಪೈ, ಮತ್ತು ಹಿಂದೆ ಕುಳಿತಿರುವ ಇತರ ಧರ್ಮದ ಪ್ರತಿನಿಧಿಗಳು

ಮಂಗಳೂರು – ಜನವರಿ 12 ರಂದು ‘ಮಹಾತ್ಮ ಗಾಂಧಿ ಸೆಂಟಿನೆಲ್ ಪಿ.ಯು. ಕಾಲೇಜಿನಲ್ಲಿ ‘One Humanity Many Paths’ (‘ಒಂದು ಮಾನವೀಯತೆ ಹಲವು ಮಾರ್ಗಗಳು’) ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸನಾತನ ಸಂಸ್ಥೆಯ ಶ್ರೀಮತಿ. ಲಕ್ಷ್ಮೀ ಪೈ ಅವರನ್ನು ಆಹ್ವಾನಿಸಲಾಯಿತು. ಬೋಂದೆಲ್ ಚರ್ಚ್ ನ ಫಾದರ್ ಗೊನ್ಸಾಲ್ವಿಸ್ ಇವರು ಕ್ರೈಸ್ತ ಧರ್ಮದ ಪ್ರತಿನಿಧಿಯಾಗಿ ಹಾಗೂ ಶಂಶಾದ್ ಇವರು ಇಸ್ಲಾಂನ ಪ್ರತಿನಿಧಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೌ. ಲಕ್ಷ್ಮೀ ಪೈ ಅವರು, ಸನಾತನ ಹಿಂದೂ ಧರ್ಮವು ಅನಾದಿ ಮತ್ತು ಅನಂತವಾಗಿದೆ. `ಇಡೀ ವಿಶ್ವವೇ ನನ್ನ ಮನೆ’ ಎಂಬ ಉದಾತ್ತ ಚಿಂತನೆಯನ್ನು ಹಿಂದೂ ಧರ್ಮವೇ ವಿಶ್ವಕ್ಕೆ ನೀಡಿದೆ. ‘ಸರ್ವೇತ್ರ ಸುಖಿಂ: ಸಂತು ಸರ್ವೇ ಸಂತು ನಿರಾಮಯ : ಸರ್ವೇ ಭದ್ರಾಣಿ ಪಶ್ಯನ್ತು ಮಾ ಕಶ್ಚಿದ್ ದುಃಖಮಾಪ್ನುಯಾತ್. (ಅರ್ಥ: ಹೇ ಭಗವಂತ, ಎಲ್ಲಾ ಜೀವಿಗಳು ಸಂತೋಷವಾಗಿರಲ್ಲಿ, ಎಲ್ಲರೂ ಆರೋಗ್ಯವಂತರಾಗಿರಲ್ಲಿ, ಎಲ್ಲರೂ ಪರಸ್ಪರರ ಕ್ಷೇಮವನ್ನು ಕಾಣಲಿ. ಯಾರಿಗೂ ಎಂದಿಗೂ ದುಃಖವಾಗದಿರಲ್ಲಿ.) ಎಂಬುದು ಭಾರತೀಯ ಪ್ರಾಚೀನ ಋಷಿ-ಮುನಿಗಳ ಪ್ರಾರ್ಥನೆಯಾಗಿದೆ. ಪುಣ್ಯಭೂಮಿ ಭಾರತವು ಎಲ್ಲ ಧರ್ಮಗಳಿಗೆ ಆಶ್ರಯ ನೀಡಿದ ತಾಣವಾಗಿದೆ. ಪ್ರತಿಯೊಬ್ಬರು ಧರ್ಮಾಚರಣೆಯನ್ನು ಮಾಡುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣ ಮಾಡುವುದು ಇಂದು ಅವಶ್ಯಕತೆವಿದೆ ಎಂದು ಹೇಳಿದರು.

ಈ ವೇಳೆ ಕ್ರೈಸ್ತ ಹಾಗೂ ಇಸ್ಲಾಂ ಧರ್ಮದ ಪ್ರತಿನಿಧಿಗಳು ತಮ್ಮ ವಿಚಾರವನ್ನು ಮಂಡಿಸಿದರು. ಸುಮಾರು ೪೦೦ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡಿದ್ದಾರೆ.