ಅಲವರ(ರಾಜಸ್ಥಾನ)ದಲ್ಲಿರುವ ಶಿವನ ದೇವಾಲಯದ ನಂತರ ಇಗ ಗೋಶಾಲೆಯನ್ನು ಅನಧಿಕೃತವೆಂದು ಹೇಳಿ ಕೆಡವಲಾಯಿತು !

ಇಲ್ಲಿಯ ಆಡಳಿತವು ರಸ್ತೆ ಅಗಲಿಕರಣದ ಹೆಸರಿನಲ್ಲಿ ಎಪ್ರಿಲ ೧೭ ರಂದು ೩೦೦ ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯ ಮತ್ತು ಇತರ ಎರಡು ದೇವಾಲಯಗಳನ್ನು ಕೆಡವಲಾಗಿತ್ತು. ಇದೀಗ ಕಠುಮರ ಪ್ರದೇಶದ ಹನುಮಾನ ಗೋಶಾಲೆ ಅನಧಿಕೃತ ಇರುವದೆಂದು ಹೇಳಿ ಅದರ ವಿರುದ್ದ ಕ್ರಮ ಕ್ಯಗೊಳ್ಳಲಾಯಿತು.

ಅಲವರ (ರಾಜಸ್ಥಾನ) ಇಲ್ಲಿಯ ೩೦೦ ವರ್ಷ ಹಳೆಯ ಶಿವಮಂದಿರ ಅನಧಿಕೃತವೆಂದು ಹೇಳಿ ನೆಲಸಮ !

ಅಲವರ ಜಿಲ್ಲೆಯ ರಾಜಗಡನಲ್ಲಿ ೩೦೦ ವರ್ಷ ಹಳೆಯದಾಗಿರುವ ಶಿವ ಮಂದಿರವನ್ನು ಅಕ್ರಮವೆಂದು ಹೇಳುತ್ತಾ ಅದರ ಛಾವಣಿ ಮತ್ತು ಗೋಡೆಗಳನ್ನು ಕೆಡವಲಾಯಿತು. ಈ ಕಾರ್ಯಾಚರಣೆಯಲ್ಲಿ ದೇವಸ್ಥಾನದಲ್ಲಿರುವ ದೇವತೆಗಳ ಮೂರ್ತಿಯನ್ನು ಧ್ವಂಸಗೊಳಿಸಿ ಶಿವಲಿಂಗವನ್ನು ಯಂತ್ರದ ಮೂಲಕ ತುಂಢರಿಸಿದ್ದಾರೆ.

ಅಮೇರಿಕಾ ಕಾಂಗ್ರೆಸ ಸದಸ್ಯರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸವನ್ನು ನಿಶೇಧಿಸಿದ ಭಾರತ

ನವ ದೆಹಲಿ – ಅಮೇರಿಕಾದ ಕಾಂಗ್ರೆಸನ ಮಹಿಳಾ ಸದಸ್ಯರಾದ ಇಲ್ಹನ ಒಮರರವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸ ಕೈಗೊಂಡಿದ್ದು ಭಾರತವು ಅದನ್ನು ನಿಷೇಧಿಸಿದೆ. ‘ಇದರಿಂದ ಒಮರವರ ಸಂಕುಚಿತ ಮಾನಸಿಕತೆ ಕಂಡು ಬರುತ್ತದೆ’, ಎಂದು ಭಾರತವು ಹೇಳಿದೆ. ಭಾರತದ ವಿದೇಶಾಂಗ ಖಾತೆಯ ವಕ್ತಾರರಾದ ಅರಿಂದಮ ಬಾಗಚಿಯವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಒಮರರವರ ಪ್ರವಾಸವನ್ನು ಟೀಕಿಸಿದ್ದಾರೆ. On April 21, India condemned the visit of US Congresswoman Ilhan Omar to Pakistan-occupied-Kashmir. Criticizing Omar, MEA spokesperson … Read more

ಮಥುರಾದಲ್ಲಿ ಶ್ರೀಕೃಷ್ಣಜನ್ಮಭೂಮಿಯ ಮೇಲೆ ಶ್ರೀಕೃಷ್ಣ ದೇವಾಲಯದ ಮೇಲಿರುವ ಧ್ವನಿವರ್ಧಕಗಳ ಸದ್ದನ್ನು ಕಡಿಮೆ ಮಾಡಲಾಗುವುದು !

ಇಲ್ಲಿಯ ಶ್ರೀಕೃಷ್ಣಜನ್ಮಭೂಮಿಯಲ್ಲಿನ ಶ್ರೀಕೃಷ್ಣ ದೇವಾಲಯದ ಮೇಲೆ ಹಾಕಲಾಗುವ ಧ್ವನಿವರ್ಧಕಗಳ ಶಬ್ಧವನ್ನು ಕಡಿಮೆಗೊಳಿಸುವಂತೆ ಸರಕಾರವು ತೀರ್ಮಾನ ತೆಗೆದುಕೊಂಡಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ರಾಜ್ಯದಲ್ಲಿರುವ ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ಧವನ್ನು ನ್ಯೂನ ಮಾಡಲು ಕರೆ ನೀಡಿದ್ದರು.

ದೆಹಲಿಯಲ್ಲಿ ಭಾಜಪದ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆ

ರಾಜಧಾನಿ ದೆಹಲಿಯ ಮಯೂರ ವಿಹಾರ ಪರಿಸರದಲ್ಲಿ ಭಾಜಪದ ಜಿಲ್ಲಾ ಸಚಿವರಾದ ಜೀತೂ ಚೌಧರಿಯವರನ್ನು ಗುಂಡಾಗಳು ಗುಂಡಿಕ್ಕಿ ಕೊಲೆ ಮಾಡಿದುರ. ಜೀತೂ ಚೌಧರಿಯವರು ಮಯೂರ ವಿಹಾರದಲ್ಲಿರುವ ತಮ್ಮ ಮನೆಯಿಂದ ಹೊರಗೆ ಬಂದ ತಕ್ಷಣ ಗುಂಡಾಗಳು ಅವರ ಮೇಲೆ ಗುಂಡು ಹಾರಿಸಿದರು.

ಜಹಾಂಗೀರಪುರಿಯಲ್ಲಿನ ಕಾನೂನುಬಾಹಿರ ಕಟ್ಟಡಕಾಮಗಾರಿಯ ಮೇಲಿನ ಕಾರ್ಯಾಚರಣೆಯ ಮೇಲೆ ತಡೆಯಾಜ್ಞೆ !

ಸರ್ವೋಚ್ಚ ನ್ಯಾಯಾಲಯವು ಇಲ್ಲಿನ ಜಹಾಂಗೀರಪುರಿಯಲ್ಲಿನ ಅನಧೀಕೃತ ಕಟ್ಟಡಕಾಮಗಾರಿಯ ಮೇಲೆ ದೆಹಲಿ ಮಹಾನಗರಪಾಲಿಕೆಯಿಂದ ಮಾಡಲಾದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಏಪ್ರಿಲ್‌ ೨೦ರ ತೀರ್ಪನ್ನು ಮುಂದುವರಿಸಿದೆ. ‘ಕಾನೂನುಬಾಹಿರ ಕಟ್ಟಡಗಳನ್ನು ಬುಲ್ಡೋಜರಗಳಿಂದ ಕೆಡವಲಾಗುತ್ತಿದೆ.

ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರ ಅಸ್ಸಾಂ ಪೊಲೀಸರಿಂದ ಬಂಧನ

ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರನ್ನು ಅಸ್ಸಾಮಿನ ಪೊಲೀಸರು ಏಪ್ರಿಲ್‌ ೨೦ರ ರಾತ್ರಿ ಇಲ್ಲಿಂದ ಬಂಧಿಸಿದಿದ್ದಾರೆ. ಅವರನ್ನು ಅಸ್ಸಾಮಿಗೆ ಕರೆದೊಯ್ಯಲಾಗುವುದು. ಮೇವಾಣಿಯವರ ವಿರುದ್ಧ ಅಸ್ಸಾಮಿನಲ್ಲಿ ಅನೇಕ ಅಪರಾಧಗಳು ದಾಖಲಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ.

ದೆಹಲಿಯ ಜಹಾಂಗೀರಪುರಿಯಲ್ಲಿ ಅನಧಿಕೃತ ಕಟ್ಟಡಗಳ ಮೇಲೆ ದೊಡ್ಡ ಕಾರ್ಯಾಚರಣೆ

ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಹುಳ ಭಾಗದಲ್ಲಿರುವ ಮಸೀದಿಯಿಂದ ಕಲ್ಲುತೂರಾಟ ನಡೆಸಿದ ಬಳಿಕ ಆದ ಹಿಂಸಾಚಾರದಲ್ಲಿ ಅನೇಕ ಪೊಲೀಸ ಸಿಬ್ಬಂದಿಗಳು ಗಾಯಗೊಂಡಿದ್ದರು.

ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳ ಶಬ್ದವನ್ನು ಆವರಣದ ವರೆಗೆ ಸೀಮಿತಗೊಳಿಸಿ !

ಉತ್ತರಪ್ರದೇಶ ಸರಕಾರವು ಧ್ವನಿವರ್ಧಕಗಳ ವಿಷಯದಲ್ಲಿ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿಯನ್ನು ನೀಡಲಾಗಿದ್ದರೆ, ಧ್ವನಿವರ್ಧಕಗಳ ಶಬ್ದವು ಧಾರ್ಮಿಕ ಕ್ಷೇತ್ರಗಳ ಆವರಣಕ್ಕೆ ಮಾತ್ರ ಸೀಮಿತವಾಗಿರಬೇಕು.

ಚಾರಧಾಮ ಯಾತ್ರೆಯಲ್ಲಿ ಸಹಭಾಗಿಯಾಗುವ ಪ್ರತಿಯೊಬ್ಬರ ತಪಾಸಣೆಯಾಗಲಿದೆ !

ರಾಜ್ಯದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು ಚಾರಧಾಮದ ಯಾತ್ರೆಯನ್ನು ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರ ತಪಾಸಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ‘ಈ ಯಾತ್ರೆಗಾಗಿ ಬರುವ ಪ್ರತಿಯೊಬ್ಬರ ಮೇಲೆ ತೀವೃ ನಿಗಾ ಇಡಲಾಗುವುದು’ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.