ಆಯುಷ್ಯದ ಕೊನೆಯ ವರ್ಷಗಳನ್ನು ಆರೋಗ್ಯ ಕ್ಷೇತ್ರಕ್ಕಾಗಿ ಸಮರ್ಪಿಸುವೆನು! – ಉದ್ಯಮಿ ರತನ ಟಾಟಾ

ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಅರ್ಬುದ ರೋಗ ಚಿಕಿತ್ಸಾ ಕೇಂದ್ರದ ಉದ್ಘಾಟನೆ ನೆರವೇರಿತು. ಈ ಕೇಂದ್ರವು ಆಸ್ಸಾಂ ಕ್ಯಾನ್ಸರ ಕೇರ ಫೌಂಡೇಶನ, ಟಾಟಾ ಟ್ರಸ್ಟ ಮತ್ತು ಆಸ್ಸಾಂ ಸರಕಾರದ ಜಂಟಿ ಸಹಯೋಗದಿಂದ ನಿರ್ಮಿಸಲ್ಪಟ್ಟಿದೆ.

ದೇಶದ ನ್ಯಾಯಾಲಯದಲ್ಲಿ ಕೈಯಲ್ಲಿ ತಕ್ಕಡಿ ಹಿಡಿದಿರುವ ಮಹಿಳೆಯ ಮೂರ್ತಿ ತೆರವುಗೊಳಿಸಿ ಭಗವಾನ್ ಚಿತ್ರಗುಪ್ತನ ಮೂರ್ತಿ ಸ್ಥಾಪಿಸಿ !

ಭಾರತದ ಎಲ್ಲ ನ್ಯಾಯಾಲಯಗಳಲ್ಲಿ ಕೈಯಲ್ಲಿ ತಕ್ಕಡಿ ಹಿಡಿದಿರುವ ಹಾಗೂ ಕಣ್ಣಿನ ಮೇಲೆ ಕಪ್ಪುಪಟ್ಟಿ ಕಟ್ಟಿರುವ ಮಹಿಳೆಯ ಮೂರ್ತಿ ಇರುತ್ತದೆ. ಈ ಮೂರ್ತಿ ಗ್ರೀಕ್ ಸಮಾಜ ಸೇವಕಿ ಡಿಕಿ ಇವರದ್ದಾಗಿದೆ. ಈ ಮೂರ್ತಿ ತೆರವುಗೊಳಿಸಿ ಆ ಸ್ಥಾನದಲ್ಲಿ ಹಿಂದೂಗಳ ದೇವತೆ ಭಗವಾನ್ ಚಿತ್ರಗುಪ್ತ ಇವರ ಮೂರ್ತಿ ಸ್ಥಾಪಿಸಬೇಕು

ಉತ್ತರಪ್ರದೇಶದಲ್ಲಿ ಧಾರ್ಮಿಕ ಸ್ಥಳಗಳ ಮೇಲಿರುವ ೧೧ ಸಾವಿರ ಧ್ವನಿವರ್ಧಕಗಳು ತೆರವು !

ಉತ್ತರಪ್ರದೇಶದ ಧಾರ್ಮಿಕ ಸ್ಥಳಗಳ ಮೇಲೆ ಇರುವ ೧೧ ಸಾವಿರ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಯಿತು. ಹಾಗೂ ೩೫ ಸಾವಿರ ಧಾರ್ಮಿಕ ಸ್ಥಳಗಳ ಮೇಲೆ ಧ್ವನಿವರ್ಧಕದ ಧ್ವನಿಯ ಮಾಪನ ನಿಶ್ಚಯಿಸಿಕೊಡಲಾಗಿದೆ. ಕಳೆದ ೪ ದಿನಗಳಿಂದ ಪೊಲೀಸರು ಈ ಕ್ರಮ ಕೈಗೊಳ್ಳುತ್ತಿದ್ದಾರೆ.

ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳು ಪಲಾಯನಗೈದರು.- ಕೇಂದ್ರ ಸರಕಾರ

ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಅನ್ಯ ಸ್ಥಳಗಳಲ್ಲಿ ಪಲಾಯನ ಮಾಡಲು ಅನಿವಾರ್ಯವಾಯಿತು.

ತಮಿಳುನಾಡುನಲ್ಲಿ ರಥಯಾತ್ರೆಯ ಸಮಯದಲ್ಲಿ ವಿದ್ಯುತ್ ಅವಘಡದಿಂದ ೧೧ ಜನರ ಸಾವು ಮತ್ತು ೧೫ ಜನರಿಗೆ ಗಾಯ

ಲ್ಲಿಯ ಒಂದು ಧಾರ್ಮಿಕ ರಥಯಾತ್ರೆಯ ಸಮಯದಲ್ಲಿ ನಡೆದಿರುವ ಅಪಘಾತದಲ್ಲಿ ೧೧ ಜನರು ಸಾವನ್ನಪ್ಪಿದ್ದಾರೆ ಮತ್ತು ೧೫ ಜನರು ಗಾಯಗೊಂಡಿದ್ದಾರೆ. ಈ ಘಟನೆ ಬೆಳಿಗ್ಗಿನ ಜಾವ ೩ ಗಂಟೆಯ ಸಮಯದಲ್ಲಿ ನಡೆದಿದೆ. ರಥಯಾತ್ರೆಯಲ್ಲಿ ರಥದ ಕಳಸ ವಿದ್ಯುತ್ ತಂತಿಗೆ ತಾಗಿದ್ದರಿಂದ ಈ ಘಟನೆ ನಡೆದಿದೆ. ಈ ಅವಘಡದಲ್ಲಿ ೭ ಜನರು ಸಾವನ್ನಪ್ಪಿದ್ದರೆ, ೪ ಜನರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.

ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಮಜಾರ ಮಾಲಿಕತ್ವದ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ

ಇಲ್ಲಿನ ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಬಾಬಾ ಭೂರೆ ಶಾಹ ಮಜಾರ್ ಕಟ್ಟಡದ ಮಾಲಿಕತ್ವದ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಆಡಳಿತವು ನೋಟಿಸ್ ಕಳುಹಿಸಲಾಗಿದೆ. ಮೇ ೧೩ ರವರೆಗೂ ಆ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿದೆ.

ಉತ್ತರಾಖಂಡದಲ್ಲಿ ಆಡಳಿತವು ಹಿಂದೂ ಮಹಾಪಂಚಾಯತಕ್ಕೆ ಅನುಮತಿ ನಿರಾಕರಿಸಿತು !

ಉತ್ತರಾಖಂಡದಲ್ಲಿ ಡಾಡಾ ಜಲಾಲಪೂರ ಎಂಬ ಗ್ರಾಮದಲ್ಲಿ ಆಯೋಜಿಸಲಾದ ಹಿಂದು ಮಹಾಪಂಚಾಯತಕ್ಕೆ ಹರಿದ್ವಾರ ಜಿಲ್ಲಾಡಳಿತವು ಅನುಮತಿಯನ್ನು ನಿರಾಕರಿಸಿದೆ. ಅಲ್ಲಿ ಅನುಚ್ಛೇದ ೧೪೪ (ಸಂಚಾರ ನಿಶೇಧಾಜ್ಞೆ) ಅನ್ನು ಜಾರಿಗೊಳಿಸಲಾಗಿದೆ.

ಅಲವರನಲ್ಲಿ ಶಿವನ ಮಂದಿರ ಕೆಡವಿದ ವಿರುದ್ಧ ಬಿಜೆಪಿ ನಡೆಸಿದ ಪಾದಯಾತ್ರೆಯಲ್ಲಿ ಸಾಧು-ಸಂತರು ಭಾಗಿ !

ರಸ್ತೆ ಅಗಲಿಕರಣದ ನೆಪದಲ್ಲಿ ರಾಜಗಡದ ೩೦೦ ವರ್ಷಗಳಷ್ಟು ಹಳೆಯದಾದ ಶಿವನ ದೇವಸ್ಥಾನ ಮತ್ತು ಇತರ ಎರಡು ದೇವಾಲಯಗಳನ್ನು ಕೆಡವಿರುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾಧಿಕಾರಿ ಕಚೇರಿಗೆ ‘ಪ್ರತಿಭಟನಾ ಮೆರವಣಿಗೆ’ ನಡೆಸಿತು.

ಉತ್ತರಪ್ರದೇಶದ ೭ ಸಾವಿರ ೪೪೨ ಮದರಸಾಗಳ ವಿಚಾರಣೆಗಾಗಿ ಸಮಿತಿ ಸ್ಥಾಪನೆ

ಉತ್ತರ ಪ್ರದೇಶದ ಮದರಸಾಗಳ ಆಧುನೀಕರಣದ ಯೋಜನೆಯಲ್ಲಿ ಸಹಭಾಗಿಯಾಗಿರುವ ೭ ಸಾವಿರ ೪೪೨ ಮದರಸಾಗಳ ವಿಚಾರಣೆಗಾಗಿ ಸಮಿತಿ ನೇಮಿಸಲಾಗಿದೆ. ಮೆ ೧೫ ರ ವರೆಗೆ ಸಮಿತಿ ತನ್ನ ವರದಿ ಪ್ರಸ್ತುತ ಪಡಿಸಬೇಕೆಂದು ಹೇಳಲಾಗಿದೆ.

ನ್ಯೂಸ ೧೮ ಪತ್ರಕರ್ತ ಅಮನಚೋಪ್ರಾ ವಿರುದ್ಧ ರಾಜಸ್ಥಾನದಲ್ಲಿ ೨ ಅಪರಾಧಗಳು ದಾಖಲು

ಹಿಂದಿ ನ್ಯೂಸ ವಾಹಿನಿ ‘ನ್ಯೂಸ೧೮’ ನಿರೂಪಕ ಅಮನ ಚೋಪ್ರಾ ವಿರುದ್ಧ ರಾಜಸ್ಥಾನದ ಬುಂದಿ ಮತ್ತು ಡುಂಗರಪುರದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ರಾಜಸ್ಥಾನದ ಅಲವರ ಜಿಲ್ಲೆಯ ರಾಜಗಡನಲ್ಲಿರುವ ೩೦೦ ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯ ಮತ್ತು ಇತರ ಎರಡು ದೇವಾಲಯಗಳನ್ನು ರಸ್ತೆ ವಿಸ್ತರಣೆಗಾಗಿ ಕೆಡವಲಾಯಿತು.