ಚಾರಧಾಮ ಯಾತ್ರೆಯಲ್ಲಿ ಸಹಭಾಗಿಯಾಗುವ ಪ್ರತಿಯೊಬ್ಬರ ತಪಾಸಣೆಯಾಗಲಿದೆ !

ಚಾರಧಾಮ ಯಾತ್ರೆಯಲ್ಲಿ ಅಹಿಂದೂಗಳಿಗೆ ಪ್ರವೇಶವನ್ನು ನಿರಾಕರಿಸುವ ಸಂತರ ಮನವಿಗೆ ಸ್ಪಂದಿಸಿದ ಉತ್ತರಾಖಂಡ ಸರಕಾರದ ನಿರ್ಣಯ

ಸಂತರು ಹೇಳಿದ ನಂತರ ನಿರ್ಣಯ ತೆಗೆದುಕೊಂಡ ಉತ್ತರಾಖಂಡ ಸರಕಾರಕ್ಕೆ ಅಭಿನಂದನೆಗಳು ! ಜಿಹಾದಿ ಭಯೋತ್ಪಾದಕರು ಹಿಂದೂಗಳ ಯಾತ್ರೆಗಳನ್ನು ಗುರಿಯಾಗಿಸುವ ಷಡ್ಯಂತ್ರವನ್ನು ರಚಿಸುತ್ತಾರೆ. ಇದನ್ನು ಗಮನದಲ್ಲಿಟ್ಟು ಸರಕಾರವು ಅಸಾಮಾಜಿಕ ಘಟಕಗಳು ಯಾತ್ರಿಕರಲ್ಲಿ ಬೆರೆತು ಸಮಾಜಘಾತಕ ಕಾರ್ಯಗಳನ್ನು ಮಾಡಬಾರದು, ಎಂಬುದಕ್ಕಾಗಿ ಸ್ವತಃ ಈ ಹೆಜ್ಜೆಯನ್ನಿಡುವುದು ಅಪೇಕ್ಷಿತವಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಡೆಹರಾಡೂನ (ಉತ್ತರಾಖಂಡ) – ರಾಜ್ಯದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿಯವರು ಚಾರಧಾಮದ ಯಾತ್ರೆಯನ್ನು ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರ ತಪಾಸಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ‘ಈ ಯಾತ್ರೆಗಾಗಿ ಬರುವ ಪ್ರತಿಯೊಬ್ಬರ ಮೇಲೆ ತೀವೃ ನಿಗಾ ಇಡಲಾಗುವುದು’ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಂತರು ಚಾರಧಾಮ ಯಾತ್ರೆಯಲ್ಲಿ ಅಹಿಂದೂಗಳಿಗೆ ಪ್ರವೇಶವನ್ನು ನಿರಾಕರಿಸಬೇಕು’ ಎಂದು ವಿನಂತಿಸಿದ್ದರು. ರಾಜ್ಯದಲ್ಲಿ ಬರುವ ಅಹಿಂದೂಗಳನ್ನು ಗುರುತಿಸಲು ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಬರುವ ಮೇ ೩ರಿಂದ ಚಾರಧಾಮ ಯಾತ್ರೆಯು ಆರಂಭವಾಗಲಿದೆ.

ಮುಖ್ಯಮಂತ್ರಿ ಧಾಮಿಯವರು ಮಾತನಾಡುತ್ತ, ನಮ್ಮ ರಾಜ್ಯವು ಶಾಂತವಾಗಿರಬೇಕು. ನಮ್ಮ ಧರ್ಮ ಮತ್ತು ಸಂಸ್ಕೃತಿಯು ಉಳಿಯಬೇಕು. ಇದಕ್ಕಾಗಿ ಸರಕಾರಿ ಮಟ್ಟದಲ್ಲಿ ಈ ಯಾತ್ರೆಗಾಗಿ ಬರುವ ಪ್ರತಿಯೊಬ್ಬರ ತಪಾಸಣೆ ಮಾಡಲಾಗುವುದು. ಹೊರಗಿನ ಯಾವುದೇ ವ್ಯಕ್ತಿಯಿಂದ ರಾಜ್ಯದ ಸ್ಥಿತಿ ಹದಗೆಡಬಾರದು ಎಂಬುದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ, ಎಂದು ಹೇಳಿದರು.