|
ಆಲವರ (ರಾಜಸ್ಥಾನ) – ಅಲವರ ಜಿಲ್ಲೆಯ ರಾಜಗಡನಲ್ಲಿ ೩೦೦ ವರ್ಷ ಹಳೆಯದಾಗಿರುವ ಶಿವ ಮಂದಿರವನ್ನು ಅಕ್ರಮವೆಂದು ಹೇಳುತ್ತಾ ಅದರ ಛಾವಣಿ ಮತ್ತು ಗೋಡೆಗಳನ್ನು ಕೆಡವಲಾಯಿತು. ಈ ಕಾರ್ಯಾಚರಣೆಯಲ್ಲಿ ದೇವಸ್ಥಾನದಲ್ಲಿರುವ ದೇವತೆಗಳ ಮೂರ್ತಿಯನ್ನು ಧ್ವಂಸಗೊಳಿಸಿ ಶಿವಲಿಂಗವನ್ನು ಯಂತ್ರದ ಮೂಲಕ ತುಂಢರಿಸಿದ್ದಾರೆ. ಈ ಸಮಯದಲ್ಲಿ ಒಟ್ಟು ೩ ದೇವಸ್ಥಾನಗಳನ್ನು ಕೆಡವಲಾಯಿತು. ಅಲ್ಲಿಯ ರಸ್ತೆ ಅಗಲೀಕರಣದ ಸಮಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಸಮಯದಲ್ಲಿ ೮೫ ಅಂಗಡಿಗಳು ಹಾಗೂ ಮನೆಗಳು ಕೆಡವಲಾಯಿತು. ಭಾಜಪವು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಟೀಕಿಸಿದರೇ ಕಾಂಗ್ರೆಸ್‌ನ ಶಾಸಕ ಜೌಹರಿ ಲಾಲ ಮೀಣ ಇವರು ‘ಪಾಲಿಕೆಯಲ್ಲಿ ಭಾಜಪ ಅಧಿಕಾರ ಇರುವುದರಿಂದ ಅವರಿಂದ ಈ ಕ್ರಮ ಕೈಗೊಳ್ಳಲಾಗಿದೆ’, ಎಂದು ಹೇಳಿದ್ದಾರೆ.
Congress-style secularism…
300-year-old Lord Shiva temple demolished in the name of development in Rajasthan’s Alwar. pic.twitter.com/05IcQcHbBC
— Bhupender Yadav (@byadavbjp) April 22, 2022
ಭಾಜಪದ ೩೪ ನಗರಸೇವಕರನ್ನು ನನ್ನ ಹತ್ತಿರ ಕರೆದುಕೊಂಡು ಬಂದರೆ ಕಾಯಾಧಚರಣೆ ನಿಲ್ಲುವುದು !(ಅಂತೆ) – ಕಾಂಗ್ರೆಸ್‌ನ ಶಾಸಕ ಜೌಹರಿ ಲಾಲ ಮೀಣಾ ಇವರ ಬೇಡಿಕೆ
ಈ ಪಾಲಿಕೆಯಲ್ಲಿ ೩೫ ರಲ್ಲಿ ೩೪ ನಗರಸೇವಕರು ಭಾಜಪದವರಾಗಿದ್ದಾರೆ. ಈ ವಿಷಯವಾಗಿ ಮಿಣಾ ಇವರನ್ನು ಸ್ಥಳಿಯ ನಾಗರಿಕರು ಭೇಟಿ ಮಾಡಿದಾಗ ಅವರು, ‘ನಗರಪಾಲಿಕೆಯಲ್ಲಿ ಭಾಜಪಾದ ಅಧಿಕಾರ ಇರುವಾಗ ನೀವು ನಮ್ಮ ಹತ್ತಿರ ಹೇಗೆ ದೂರು ನೀಡುತ್ತಿದ್ದಿರಿ ? ಕಾಂಗ್ರೆಸ್‌ನ ಅಧಿಕಾರ ಇದ್ದರೆ, ಆಗ ಹೀಗೆ ಆಗುತ್ತಿರಲಿಲ್ಲ. ನಾನು ನಿಮಗೆ ೨೪ ಗಂಟೆಯ ಸಮಯ ನೀಡುತ್ತೇನೆ. ನೀವು ಭಾಜಪದ ೩೪ ನಗರ ಸೇವಕರನ್ನು ನನ್ನ ಮನೆಗೆ ಕರೆತನ್ನಿ, ಆಗ ಕಾರ್ಯಾಚರಣೆ ನಿಲ್ಲುವುದು. ಇಲ್ಲವಾದರೆ ನಾನು ಕಾರ್ಯಾಚರಣೆ ನಿಲ್ಲಿಸಲು ಸಾಧ್ಯವಿಲ್ಲ’, ಎಂದು ಹೇಳಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಪ್ರಕರಣದಲ್ಲಿ ಇಲ್ಲಿಯ ಬ್ರಜ ಭೂಮಿ ಕಲ್ಯಾಣ ಪರಿಷತ್‌ನಿಂದ ಶಾಸಕ ಮಿಣಾ, ಜಿಲ್ಲಾಧಿಕಾರಿ ಮತ್ತು ಪಾಲಿಕೆಯ ಅಧಿಕಾರಿ ಇವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ.
ದೆಹಲಿಯಲ್ಲಿ ಜಹಾಂಗೀರಪುರಿಯಲ್ಲಿ ಮುಸಲ್ಮಾನರು ಅಕ್ರಮವಾಗಿ ಕಟ್ಟಿರುವ ಕಟ್ಟಡಗಳ ಮೇಲೆ ಕ್ರಮ ಕೈಗೊಂಡ ನಂತರ ಧಾವಿಸಿ ಬರುವ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರು ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂಗಳ ಹಳೆಯ ಮಂದಿರ ಧ್ವಂಸಗೊಳಿಸಿದ ನಂತರ ಏಕೆ ಮೌನವಾಗಿದ್ದಾರೆ ?
ಕಾಂಗ್ರೆಸ್‌ಗೆ ಮತ ಹಾಕದೇ ಇದ್ದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ, ಎಂದರೆ ಇದು ದೇಶದ್ರೋಹವೇ ಆಗಿದೆ ! |