ಜಹಾಂಗೀರಪುರಿಯಲ್ಲಿನ ಕಾನೂನುಬಾಹಿರ ಕಟ್ಟಡಕಾಮಗಾರಿಯ ಮೇಲಿನ ಕಾರ್ಯಾಚರಣೆಯ ಮೇಲೆ ತಡೆಯಾಜ್ಞೆ !

೨ ವಾರಗಳ ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಮುಂದಿನ ಆಲಿಕೆ

ನವದೆಹಲಿ – ಸರ್ವೋಚ್ಚ ನ್ಯಾಯಾಲಯವು ಇಲ್ಲಿನ ಜಹಾಂಗೀರಪುರಿಯಲ್ಲಿನ ಅನಧೀಕೃತ ಕಟ್ಟಡಕಾಮಗಾರಿಯ ಮೇಲೆ ದೆಹಲಿ ಮಹಾನಗರಪಾಲಿಕೆಯಿಂದ ಮಾಡಲಾದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಏಪ್ರಿಲ್‌ ೨೦ರ ತೀರ್ಪನ್ನು ಮುಂದುವರಿಸಿದೆ. ‘ಕಾನೂನುಬಾಹಿರ ಕಟ್ಟಡಗಳನ್ನು ಬುಲ್ಡೋಜರಗಳಿಂದ ಕೆಡವಲಾಗುತ್ತಿದೆ ಮತ್ತು ಇಂತಹ ಕಾರ್ಯಾಚರಣೆಯನ್ನು ಸಂಪೂರ್ಣ ದೇಶದಲ್ಲಿ ನಡೆಸಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ಏಪ್ರಿಲ್‌ ೨೦ರಂದು ಜಹಾಂಗೀರಪುರಿಯಲ್ಲಿನ ಕಾರ್ಯಾಚರಣೆಯನ್ನು ಆರಂಭಿಸಿದ್ದರಿಂದ ಇದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ ನಂತರ ನ್ಯಾಯಾಲಯವು ಇದರ ಮೇಲೆ ತಡೆಯಾಜ್ಞೆಯನ್ನು ನೀಡುತ್ತ ಮುಂದಿನ ಆಲಿಕೆಯನ್ನು ೨ ವಾರಗಳಲ್ಲಿ ತೆಗೆದುಕೊಳ್ಳುವುದಾಗಿ ಆದೇಶಿಸಿದೆ. ನ್ಯಾಯಾಲಯದ ಈ ತೀರ್ಪಿನಿಂದ ಉತ್ತರಪ್ರದೇಶ, ಮಧ್ಯಪ್ರದೇಶಗಳೊಂದಿಗೆ ಸಂಪೂರ್ಣ ದೇಶದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕಟ್ಟಡಗಳ ಮೇಲಿನ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.