ದೆಹಲಿಯಲ್ಲಿ ಭಾಜಪದ ಮುಖಂಡನ ಮೇಲೆ ಗುಂಡು ಹಾರಿಸಿ ಕೊಲೆ

ನವ ದೆಹಲಿ – ರಾಜಧಾನಿ ದೆಹಲಿಯ ಮಯೂರ ವಿಹಾರ ಪರಿಸರದಲ್ಲಿ ಭಾಜಪದ ಜಿಲ್ಲಾ ಸಚಿವರಾದ ಜೀತೂ ಚೌಧರಿಯವರನ್ನು ಗುಂಡಾಗಳು ಗುಂಡಿಕ್ಕಿ ಕೊಲೆ ಮಾಡಿದುರ. ಜೀತೂ ಚೌಧರಿಯವರು ಮಯೂರ ವಿಹಾರದಲ್ಲಿರುವ ತಮ್ಮ ಮನೆಯಿಂದ ಹೊರಗೆ ಬಂದ ತಕ್ಷಣ ಗುಂಡಾಗಳು ಅವರ ಮೇಲೆ ಗುಂಡು ಹಾರಿಸಿದರು. ಗುಂಡು ಹಾರಿಸಿದ ಬಳಿಕ ಗುಂಡಾಗಳು ಘಟನಾಸ್ಥಳದಿಂದ ಓಡಿ ಹೋದರು.

ಕುಟುಂಬದವರು ಜೀತೂ ಚೌಧರಿಯವರನ್ನು ಗಂಭೀರ ಸ್ಥಿತಿಯಲ್ಲಿ ನೊಯಡಾದ ಮೆಟ್ರೋ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು; ಆದರೆ ವೈದ್ಯರು ಅವರನ್ನು ಮೃತಪಟ್ಟಿದ್ದಾರೆಂದು ಹೇಳಿದರು. ಅವರಿಗೆ ೪-೫ ಗುಂಡುಗಳು ತಗುಲಿರುವುದಾಗಿ ಹೇಳಲಾಗುತ್ತಿದೆ. ಹಾಡು ಹಗಲಿನಲ್ಲಿಯೇ ಭಾಜಪದ ಮುಖಂಡರ ಮೇಲೆ ಗುಂಡು ಹಾರಿಸಿದ್ದರಿಂದ ಸಂಪೂರ್ಣ ಪರಿಸರದಲ್ಲಿ ಭಯದ ವಾತಾವರಣವಿದೆ. ಘಟನೆಯ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರು ಘಟನಾಸ್ಥಳಕ್ಕೆ ತಲುಪಿದರು. ಪೊಲೀಸರು ಕೊಲೆಯ ಪ್ರಕರಣದ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

ಸಂಪಾದಕೀಯ ನಿಲುವು

ರಾಜಧಾನಿ ದೆಹಲಿಯಿಂದ ದೇಶದ ಕಾರುಬಾರು ನಡೆಯುತ್ತಿರುವಾಗ ಅದೇ ನಗರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮುಖಂಡರ ಹಾಡು ಹಗಲಿನಲ್ಲೇ ಕೊಲೆ ನಡೆಯುತ್ತದೆ, ಎಂಬುದು ಸರಕಾರಿ ವ್ಯವಸ್ಥೆಗೆ ಲಜ್ಜಾಸ್ಪದ !