ಅಮೇರಿಕಾ ಕಾಂಗ್ರೆಸ ಸದಸ್ಯರ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸವನ್ನು ನಿಶೇಧಿಸಿದ ಭಾರತ

ನವ ದೆಹಲಿ – ಅಮೇರಿಕಾದ ಕಾಂಗ್ರೆಸನ ಮಹಿಳಾ ಸದಸ್ಯರಾದ ಇಲ್ಹನ ಒಮರರವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರವಾಸ ಕೈಗೊಂಡಿದ್ದು ಭಾರತವು ಅದನ್ನು ನಿಷೇಧಿಸಿದೆ. ‘ಇದರಿಂದ ಒಮರವರ ಸಂಕುಚಿತ ಮಾನಸಿಕತೆ ಕಂಡು ಬರುತ್ತದೆ’, ಎಂದು ಭಾರತವು ಹೇಳಿದೆ. ಭಾರತದ ವಿದೇಶಾಂಗ ಖಾತೆಯ ವಕ್ತಾರರಾದ ಅರಿಂದಮ ಬಾಗಚಿಯವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಒಮರರವರ ಪ್ರವಾಸವನ್ನು ಟೀಕಿಸಿದ್ದಾರೆ.

ಈಗ ಒಮರರವರು ೪ ದಿನಗಳ ಪಾಕಿಸ್ತಾನದ ಪ್ರವಾಸದಲ್ಲಿದ್ದಾರೆ. ಬಾಗಚಿರವರು, ಭಾರತೀಯ ಸಂಘರಾಜ್ಯದ ಭಾಗವಾಗಿರುವ ಜಮ್ಮೂ-ಕಾಶ್ಮೀರದ ಕೆಲವು ಭಾಗವನ್ನು ಪಾಕಿಸ್ತಾನವು ಕಬಳಿಸದೆ ಹಾಗೂ ಆ ಭಾಗದಲ್ಲಿ ಒಮರರವರು ಪ್ರವಾಸ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಪ್ರವಾಸದಿಂದ ಭಾರತದ ಪ್ರಾದೇಶಿಕ ಏಕಾತ್ಮತೆ ಹಾಗೂ ಸಾರ್ವಭೌಮತ್ವದ ಉಲ್ಲಂಘನೆಯಾಗುತ್ತಿರುವುದರಿಂದ ನಾವು ಅದನ್ನು ನಿಷೇಧಿಸುತ್ತಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಇನ್ನೂ ಎಷ್ಟು ದಿನಗಳವರೆಗೆ ಈ ರೀತಿ ನಿಶೇಧಿಸಲಿದೆ ? ಈಗ ಮಾತಿನಲ್ಲಿ ವಿರೋಧಕ್ಕೆ ಸೀಮಿತರಾಗದೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ನಿಯಂತ್ರಣ ಪಡೆದುಕೊಳ್ಳಲು ಭಾರತವು ತೀವ್ರ ಕ್ರಮಕೈಗೊಳ್ಳಬೇಕೆಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !