ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ ಫೋನಿನಲ್ಲಿ ಜೋರಾಗಿ ಹಾಡು ಕೇಳುವುದು ಅಥವಾ ಮಾತನಾಡುವುದು ಅಪರಾಧ

ರೈಲ್ವೇಯ ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣಿಸುವಾಗ ಯಾವುದೇ ಪ್ರಯಾಣಿಕರು ಮೊಬೈಲ್ ಫೋನಿನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಜೋರಾಗಿ ಹಾಡು ಕೇಳುವಂತಿಲ್ಲ. ಇತರೆ ಪ್ರಯಾಣಿಕರಿಂದ ಅಂತಹ ದೂರು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಗೋಮುತ್ರ ಚಿಮುಕಿಸಿದರೆ ಪ್ರೇತ, ವಾಸ್ತುದೋಷ ನಿವಾರಣೆ! – ಉತ್ತರ ಪ್ರದೇಶ ಸಚಿವ ಧರಂಪಾಲ ಸಿಂಗ

ಹಸುಗಳಿಂದಾಗಿ ನಾವು ಹಾಲು, ಮೊಸರು, ತುಪ್ಪ, ಸೆಗಣಿ ಮತ್ತು ಗೋಮುತ್ರದಂತಹ ೫ ಪದಾರ್ಥಗಳನ್ನು ಪಡೆಯುತ್ತೇವೆ. ಸೆಗಣಿಯಲ್ಲಿ ಲಕ್ಷ್ಮಿ ಮತ್ತು ಗೋಮುತ್ರದಲ್ಲಿ ಗಂಗೆ ನೆಲೆಸಿದ್ದಾರೆ. ಗೋಮುತ್ರ ಸಿಂಪಡಣೆ ಮಾಡುವುದರಿಂದ ರಾಕ್ಷಸ ಅಥವಾ ವಾಸ್ತುದೋಷಗಳಂತಹ ಸಮಸ್ಯೆ ನಿವಾರಣೆಯಾಗುತ್ತದೆ

ಮೊರಬಿ (ಗುಜರಾತ) ನಲ್ಲಿ ೧೦೮ ಅಡಿ ಎತ್ತರದ ಶ್ರೀ ಹನುಮಾನ ಮುರ್ತಿಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ

ಇಲ್ಲಿ ಹನುಮಾನ ಜಯಂತಿಯ ದಿನದಂದು ಶ್ರೀ ಹನುಮಾನನ ೧೦೮ ಅಡಿ ಎತ್ತರದ ಮೂರ್ತಿಯನ್ನು ಪ್ರಧಾನಿ ಮೋದಿಯವರ ಹಸ್ತದಿಂದ ಆನ್‌ಲೈನ್ ಮೂಲಕ ಅನಾವರಣ ಮಾಡಲಾಯಿತು. ಪ್ರಧಾನಿ ಕಾರ್ಯಾಲಯ ನೀಡಿರುವ ಮಾಹಿತಿ ಪ್ರಕಾರ ಹನುಮಾನ ದೇವರಿಗೆ ಸಂಬಂಧಿಸಿದ ಚಾರ್ಧಾಮ ಯೋಜನೆಯಡಿ ದೇಶದ ನಾಲ್ಕೂ ದಿಕ್ಕುಗಳಲ್ಲಿ ಹನುಮಾನನ ಮೂರ್ತಿಗಳನ್ನು ಸ್ಥಾಪಿಸಲಾಗುವುದು.

ಭೋಪಾಲ್‌ನಲ್ಲಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಿಂದ ಹೋಗುವ ಹನುಮ ಜಯಂತಿಯ ಮೆರವಣಿಗೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ !

ಇಲ್ಲಿಯ ಖೇಡಾಪತಿ ಹನುಮಾನ್ ಮಂದಿರದಿಂದ ಹಳೆ ಭೋಪಾಲ್‌ವರೆಗಿನ ರಸ್ತೆಯಲ್ಲಿ ಹನುಮ ಜಯಂತಿಯಂದು ಮೆರವಣಿಗೆ ನಡೆಸಬೇಕೆಂಬ ಬೇಡಿಕೆಯನ್ನು ಭದ್ರತಾ ಕಾರಣಗಳಿಗಾಗಿ ಪೊಲೀಸರು ತಿರಸ್ಕರಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬ್ಯಾನ್ ಮಾಡಲು ಕೇಂದ್ರ ಸರಕಾರ ಸಿದ್ಧತೆಯಲ್ಲಿ !

ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಯನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನಿಷೇಧಿಸಲಿದ್ದು, ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಕೆಲವೆಡೆ ಶ್ರೀರಾಮ ನವಮಿಯ ಮೆರವಣಿಗೆಗಳ ಮೇಲೆ ನಡೆದ ದಾಳಿಯ ಹಿಂದೆ ಇದೇ ಸಂಘಟನೆಯ ಕೈವಾಡವಿದೆ ಎಂಬುದಕ್ಕೆ ಪುರಾವೆಗಳು ಲಭ್ಯವಾಗುತ್ತಿವೆ.

‘ಗೋಶಾಲೆಗಳ ಆರ್ಥಿಕವ್ಯವಸ್ಥೆ’ಯ ಬಗ್ಗೆ ನೀತಿ ಆಯೋಗವು ವಿಚಾರ ಮಾಡುತ್ತಿದೆ !

ಗೋಶಾಲೆಗಳ ವ್ಯಾವಸಾಯಿಕ ವ್ಯಾವಹಾರಿಕತೆಯನ್ನು ಪರಿಶೀಲಿಸಲು ಅವುಗಳ ಅರ್ಥಶಾಸ್ತ್ರಾಧಾರಿತ ವರದಿಯನ್ನು ತಯಾರಿಸುವ ಸೂಚನೆಯನ್ನು ನೀತೀ ಆಯೋಗವು ‘ನೆಶನಲ್‌ ಕೌನ್ಸಿಲ್‌ ಆಫ್‌ ಅಪ್ಲೈಡ್ ಇಕಾನಾಮಿಕ ರಿಸರ್ಚ’ಗೆ (‘ಎನ್‌ಸಿಎಐಆರ್‌’ಗೆ) ನೀಡಿದೆ.

ಅಲೀಗಡದಲ್ಲಿ ಮಸೀದಿಗಳ ಎದುರು ಧ್ವನಿಕ್ಷೇಪಕಗಳಿಂದ ಹನುಮಾನ ಚಾಲಿಸಾ ಕೇಳಿಸಲಾಗುತ್ತಿದೆ !

ಅಲೀಗಡದಲ್ಲಿ ಯುವಾ ಕ್ರಾಂತಿ ಮಂಚ್‌ನ ಕಾರ್ಯಕರ್ತರು ಗಾಂಧಿ ಪಾರ್ಕನಲ್ಲಿ ಧ್ವನಿಕ್ಷೇಪಕದಲ್ಲಿ ಹನುಮಾನ ಚಾಲಿಸಾದ ಪಠಣ ಮಾಡಿದರು. ‘ನಾವು ಈ ಹಿಂದೆಯೂ ಮಸೀದಿಗಳ ಮೇಲಿನ ಧ್ವನಿಕ್ಷೇಪಕಗಳನ್ನು ತೆಗೆಸಲು ಪತ್ರ ಬರೆದಿದ್ದೆವು; ಆದರೆ ಇದರ ಮೇಲೆ ಯಾವುದೇ ನಿರ್ಣಯ ಬರಲಿಲ್ಲ. ಆದುದರಿಂದಲೇ ನಾವು ಹನುಮಾನ ಚಾಲಿಸಾ ಪಠಣ ಮಾಡಿದೆವು’, ಎಂದು ಈ ಮಂಚ್‌ ಹೇಳಿದೆ.

ಬರೇಲಿ (ಉತ್ತರಪ್ರದೇಶ) ಇಲ್ಲಿ ಮತಾಂಧನು ಮೊಬೈಲನಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆ ಹೇಳುವ ಹಾಡನ್ನು ಹಚ್ಚಿದ ಖೇದಕರ ಘಟನೆ !

ಮತಾಂಧ ಅಂಗಡಿಯವನು ಮೊಬೈಲ್‌ನಲ್ಲಿ ಹಾಡನ್ನು ಹಾಕಿ ಅದರಲ್ಲಿ ‘ಪಾಕಿಸ್ತಾನ ಜಿಂದಾಬಾದ’ದ ಘೋಷಣೆ ಮಾಡುತ್ತಿರುವ ಒಂದು ವೀಡಿಯೊ ಪ್ರಸಾರ ವಾಗಿದೆ. ಈ ಪ್ರಕರಣದ ಕುರಿತು ಪೊಲೀಸರಲ್ಲಿ ದೂರು ನೀಡಲಾಗಿದೆ.

ಎಟಾ (ಉತ್ತರಪ್ರದೇಶ) ಇಲ್ಲಿ ಹಿಂದೂಗಳು ಅರ್ಪಣೆ ನೀಡುತ್ತಿದ್ದ ದರ್ಗಾದಲ್ಲಿ ೯೯ ಕೋಟಿ ರೂಪಾಯಿಯ ಅವ್ಯವಹಾರ !

ಜಿಲ್ಲೆಯ ಜಲೇಸರ್‌ನಲ್ಲಿರುವ ‘ಬಡೆ ಮಿಯಾ-ಛೋಟೆ ಮಿಯಾ’ ಹೆಸರಿನ ದರ್ಗಾದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ದರ್ಗಾದ ನಿರ್ವಹಣೆಯನ್ನು ಸರಕಾರಿ ಅಧಿಕಾರಿಗಳು ವಹಿಸಿಕೊಂಡಿದ್ದಾರೆ.

ಜನರು ಕೂಡ ರಾಮರಾಜ್ಯ ಬರಲು ಪ್ರಯತ್ನಿಸಬೇಕು ! – ಡಾ. ಪ್ರಮೋದ್ ಸಾವಂತ್, ಮುಖ್ಯಮಂತ್ರಿ, ಗೋವಾ

ಅಯೋಧ್ಯೆ ಸಮಸ್ಯೆಗೆ ನಿರ್ಣಾಯಕ ಪರಿಹಾರವನ್ನು ತೆಗೆದು ಅನೇಕ ರಾಮಭಕ್ತರ ತ್ಯಾಗದಿಂದ ಇಂದು ಭವ್ಯವಾದ ಶ್ರೀರಾಮಮಂದಿರ ನಿರ್ಮಿಸಲಾಗುತ್ತಿದೆ. ಇದು ಒಂದು ಪ್ರಮುಖ ಅಂಶವಾಗಿದೆ. ರಾಮರಾಜ್ಯ ಬರಬೇಕೆಂದು ಎಲ್ಲರೂ ಬಯಸುತ್ತಾರೆ; ಆದರೆ ಅದಕ್ಕಾಗಿ ಜನರು ಎಲ್ಲಾರೀತಿಯಲ್ಲಿ ಪ್ರಯತ್ನಿಸಬೇಕು.