ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರ ಅಸ್ಸಾಂ ಪೊಲೀಸರಿಂದ ಬಂಧನ

ಪ್ರಧಾನಮಂತ್ರಿ ಮೋದಿಯವರ ವಿರುದ್ಧ ಟ್ವೀಟ್‌ ಮಾಡಿದ್ದರಿಂದ ಕಾರ್ಯಾಚರಣೆ

ಪಾಲನಪುರ (ಗುಜರಾತ) – ಗುಜರಾತಿನ ಶಾಸಕರಾದ ಜಿಗ್ನೇಶ ಮೇವಾಣಿಯವರನ್ನು ಅಸ್ಸಾಮಿನ ಪೊಲೀಸರು ಏಪ್ರಿಲ್‌ ೨೦ರ ರಾತ್ರಿ ಇಲ್ಲಿಂದ ಬಂಧಿಸಿದಿದ್ದಾರೆ. ಅವರನ್ನು ಅಸ್ಸಾಮಿಗೆ ಕರೆದೊಯ್ಯಲಾಗುವುದು. ಮೇವಾಣಿಯವರ ವಿರುದ್ಧ ಅಸ್ಸಾಮಿನಲ್ಲಿ ಅನೇಕ ಅಪರಾಧಗಳು ದಾಖಲಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ಸಿನ ನೇತಾರರಾದ ಕನ್ಹೈಯಾ ಕುಮಾರ ಟ್ವೀಟ್‌ ಮಾಡಿ ‘ಅಸ್ಸಾಮಿನ ಪೊಲೀಸರು ಯಾವುದೇ ರೀತಿಯ ಪೂರ್ವಕಲ್ಪನೆಯನ್ನು ನೀಡದೇ ಮೇವಾಣಿಯವರನ್ನು ಬಂಧಿಸಿದ್ದಾರೆ. ಹಾಗೆಯೇ ಕಾನೂನುಬದ್ಧ ಕಾರ್ಯಾಚರಣೆಯ ಬಗ್ಗೆ ದಾಖಲಿಸಲಾದ ಅಪರಾಧದ ಪ್ರತಿಯನ್ನು ತೋರಿಸಲಿಲ್ಲ’, ಎಂದು ಹೇಳಿದ್ದಾರೆ.

ಅಸ್ಸಾಮಿನ ಕೊಕರಾಝಾರದ ಪೊಲೀಸ ಅಧೀಕ್ಷಕರಾದ ಪ್ರತೀಕ ವಿಜಯ ಕುಮಾರರವರು ಜಿಗ್ನೇಶ ಮೇವಾಣಿಯವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರಿಂದಲೇ ಈ ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ಮೇವಾಣಿಯವರು ಒಂದು ಟ್ವೀಟ್‌ನಲ್ಲಿ ‘ಗೋಡಸೆಯನ್ನು (ನಥುರಾಮ ಗೋಡಸೆಯವರನ್ನು) ದೇವರೆಂದು ತಿಳಿಯುವ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನಲ್ಲಿ ಜಾತೀಯ ಸಂಘರ್ಷದ ವಿರುದ್ಧ ಶಾಂತಿ ಮತ್ತು ಸೌಹಾರ್ದವನ್ನು ಕಾಯ್ದುಕೊಳ್ಳುವ ಬಗ್ಗೆ ಕರೆ ನೀಡಬೇಕು’, ಎಂದು ಹೇಳಿದ್ದರು.