ಅವಧಿ ಮುಕ್ತಾಯದ ಬಳಿಕ ಉಪಕರಣವನ್ನು ಗುಜರಿಗೆ ವಿಲೇವಾರಿ ಮಾಡಬೇಕಾಗುತ್ತದೆ ! – ಕೇಂದ್ರ ಸರಕಾರ

ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯವು 134 ವಿದ್ಯುತ್ ಉಪಕರಣಗಳ ಬಳಕೆಯ ಅವಧಿಯನ್ನು ನಿಗದಿಪಡಿಸಿದೆ. ಈ ಅವಧಿ ಮುಗಿದ ನಂತರ, ಈ ವಸ್ತುಗಳನ್ನು ‘ಇ-ತ್ಯಾಜ್ಯ’ (ಇ-ವೇಸ್ಟ) ಎಂದು ನಿರ್ಧರಿಸಿ ನಾಶಪಡಿಸಲು ಆದೇಶಿಸಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಕುಖ್ಯಾತ ಭಯೋತ್ಪಾದಕನ ಹತ್ಯೆ

ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ನ ಆಪ್ತ ಸಹಾಯಕನಾಗಿದ್ದ ಅಬು ಖಾಸಿಮ್‌ನನ್ನು ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್‌ನಲ್ಲಿರುವ ಮಸೀದಿಯೊಂದರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು.

ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ ಭಾರತೀಯ ಯೋಧ ನಾಪತ್ತೆ

ಕಾಶ್ಮೀರದ ಬಾಲಾಕೋಟ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಭದ್ರತಾ ಪಡೆಯ ಯೋಧ ನಾಪತ್ತೆಯಾಗಿದ್ದಾರೆ. ಆತನನ್ನು ಪತ್ತೆಹಚ್ಚಲು ಭದ್ರತಾ ಪಡೆಗಳಿಂದ ಪ್ರಯತ್ನಗಳು ನಡೆಯುತ್ತಿವೆ; ಆದರೆ ಅವರು ಇನ್ನೂ ಯಶಸ್ವಿಯಾಗಲಿಲ್ಲ. ಈ ಯೋಧನ ಹೆಸರು ಅಮಿತ್ ಪಾಸ್ವಾನ್ ಎಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ.

ರಾಜಸ್ಥಾನದ ಕಾಂಗ್ರೆಸ್ ಸರಕಾರದ ವಜಾಗೊಂಡ ಸಚಿವ ರಾಜೇಂದ್ರ ಗುಧಾ ಅವರು ಶಿವಸೇನೆ (ಶಿಂಧೆ ಗುಂಪು) ಗೆ ಸೇರ್ಪಡೆ

ರಾಜಸ್ಥಾನದ ಕಾಂಗ್ರೆಸ್ ಸರಕಾರದಲ್ಲಿ ಅವರು ಸಚಿವರಾಗಿದ್ದಾಗ ಸರಕಾರದ ವಿರುದ್ಧ ಭ್ರಷ್ಟಾಚಾರದ ಕುರಿತು ಪ್ರತಿಭಟಿಸಿ ಸಚಿವ ಸ್ಥಾನದಿಂದ ವಜಾಗೊಂಡ ಶಾಸಕ ರಾಜೇಂದ್ರ ಗುಧಾ ಇವರು ಶಿವಸೇನೆ (ಶಿಂಧೆ ಗುಂಪು) ಪಕ್ಷವನ್ನು ಸೇರಿದರು.

ಪರಮಾಣು ಅಸ್ತ್ರ ಹೊಂದ್ದಿದ್ದರೂ ‘ಜಿ-20’ ಸಭೆಗೆ ಆಹ್ವಾನ ಸಿಗದೇ ಇದ್ದರಿಂದ ನಾಚಿಕೆ ಅನಿಸುತ್ತದೆ ! – ಪಾಕಿಸ್ತಾನಿ ನಾಗರಿಕರು

ಭಾರತದಲ್ಲಿ ನಡೆಯುತ್ತಿರುವ ೨ ದಿನದ ‘ಜಿ-20’ ಸಭೆಗೆ ಜಗತ್ತಿನಾದ್ಯಂತ ೨೮ ದೇಶದ ಮುಖ್ಯಸ್ಥರು ಉಪಸ್ಥಿತರಿದ್ದಾರೆ. ಭಾರತದಿಂದ ಸುಯೋಹಿತವಾಗಿ ಈ ಸಭೆಯ ಆಯೋಜನೆ ಮಾಡಿರುವುದರಿಂದ ಅನೇಕ ದೇಶಗಳು ಶ್ಲಾಘಿಸುತ್ತಿದ್ದೂ ಭಾರತದ ನೆರೆಯ ಮತ್ತು ಶತ್ರು ರಾಷ್ಟ್ರ ಪಾಕಿಸ್ತಾನದ ನಾಗರೀಕರು ಮಾತ್ರ ತಮ್ಮ ದೇಶವನ್ನೆ ಟೀಕಿಸುತ್ತಿದೆ.

ಗಿಲಗಿಟ-ಬಾಲ್ಟಿಸ್ತಾನದಲ್ಲಿ ಭಾರತದ ರಾಷ್ಟ್ರ ಧ್ವಜ ಹಾರಾಟ : ಜನರಿಂದ ಪಾಕಿಸ್ತಾನ ಮುರ್ದಾಬಾದ್ ಘೋಷಣೆ

ಗಿಲಗಿಟ-ಬಾಲ್ಟಿಸ್ತಾನದ ಜನರು ಈಗ ಪಾಕಿಸ್ತಾನದ ಜೊತೆಗೆ ಇರಲು ಸಾಧ್ಯವಿಲ್ಲ. ಕಳೆದ ಅನೇಕ ದಿನಗಳಿಂದ ಅವರು ಬೀದಿಗೆ ಇಳಿದು ಪಾಕಿಸ್ತಾನದ ಸರಕಾರವನ್ನು ನಿಷೇಧಿಸುತ್ತಿದ್ದಾರೆ. ಪ್ರತಿಭಟನಾಕಾರರು ‘ಪಾಕಿಸ್ತಾನ ಮುರ್ದಾಬಾದ’ ಎಂದು ಘೋಷಣೆ ನೀಡುತ್ತಿದ್ದು ಅನೇಕ ನಾಗರೀಕರು ತಮ್ಮ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

ಮೊರಾಕ್ಕೊದಲ್ಲಿ ಪ್ರಬಲ ಭೂಕಂಪ ನೂರಾರು ಸಾವು !

ಆಫ್ರಿಕಾ ಖಂಡದ ಮೊರಾಕ್ಕೊದಲ್ಲಿ ಸೆಪ್ಟಂಬರ್ ೯ ರ ಬೆಳಗ್ಗೆ ೬,೮ ರಿಕ್ಟರ್ ನಷ್ಟು ಪ್ರಬಲ ಭೂಕಂಪವಾಗಿ ೮೨೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಹಾಗೆಯೇ ೧೫೩ ಜನ ಗಾಯಗೊಂಡಿದ್ದಾರೆ, ಈ ಭೂಕಂಪದಲ್ಲಿ ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ, ಭೂಕಂಪದ ಕೇಂದ್ರಬಿಂದು ಮೊರೊಕ್ಕಾದ ಮಾರಕೇಶ ಪಟ್ಟಣದಿಂದ ಸುಮಾರು ೭೦ ಕಿ,ಮಿ, ದೂರದಲ್ಲಿತ್ತು.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ !

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲಗು ದೇಸಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ರವರನ್ನು ಸೆಪ್ಟ್ಂಬರ್ ೯ ರ ಮುಂಜಾನೆ ಕೌಶಲ್ಯ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಯಿತು,

ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22, 2024 ರಂದು ಆಗುವ ಸಾಧ್ಯತೆ !

ಮುಂದಿನ ವರ್ಷ ಅಂದರೆ ಜನವರಿ 22, 2024 ರಂದು ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರದ ಉದ್ಘಾಟನೆಯಾಗಲಿದೆಯೆಂದು ವರದಿಯಾಗಿದೆ. ಅದೇ ದಿನದಂದು ದೇವಸ್ಥಾನದಲ್ಲಿ ಭಗವಾನ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

‘ಉದಯನಿಧಿ ಇವರಿಗೆ ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ ! (ಅಂತೆ) – ನಟ ಕಮಲ ಹಾಸನ

‘ಉದಯನಿಧಿ ಇವರಿಗೆ ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ ! (ಅಂತೆ) – ನಟ ಕಮಲ ಹಾಸನ