ಮತಾಂತರಿಸುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಥವಾ ಜೈಲಿಗೆ ಅಟ್ಟಬೇಕು ! – ಜಗದ್ಗುರು ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

  • ಮತಾಂತರ ಗೊಳಿಸುವವರಿಗೆ ರಾಜಕಾರಣಿಗಳಿಂದ ರಕ್ಷಣೆ ದೊರೆಯುತ್ತದೆ !

  • ಮತಾಂತರಗೊಳಿಸುವವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹ !

ಬಿಲಾಸಪುರ (ಛತ್ತೀಸ್ಗಡ) – ಮತಾಂತರಗೊಳಿಸುವವರಿಗೆ ರಾಜಕಾರಣಿಗಳಿಂದ ರಕ್ಷಣೆ ದೊರೆಯುತ್ತದೆ. ತಾಲಿಬಾನದ ಆಡಳಿತದಲ್ಲಿ ೪ ಕ್ರೈಸ್ತರು ಮುಸಲ್ಮಾನರನ್ನು ಮತಾಂತರಿಸಲು ಹೋಗಿದ್ದರು; ಆದರೆ ಅವರಿಗೆ ತಾಲಿಬಾನಿ ಮುಸಲ್ಮಾನರಿಂದ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಯಾವ ರೀತಿ ತಾಲಿಬಾನ್ ಮತ್ತು ಜಗತ್ತಿನಲ್ಲಿನ ಇತರ ದೇಶಗಳು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುತ್ತದೆ, ಅದೇ ರೀತಿ ಇಂತಹ ಜನರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಥವಾ ಜೈಲಿಗೆ ಅಟ್ಟಬೇಕೆಂದು ಪುರಿಯ ಪೂರ್ವಾಮ್ನಾಯ ಪೀಠದ ಜಗದ್ಗುರು ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರು ಇಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು. ಶಂಕರಾಚಾರ್ಯರು ಈಗ ಬಿಲಾಸಪುರದ ೩ ದಿನದ ಪ್ರವಾಸದಲ್ಲಿದ್ದಾರೆ.

ಶಂಕರಾಚಾರ್ಯರು ಮಂಡಿಸಿರುವ ಅಂಶಗಳು

೧. ಎಲ್ಲಿಯವರೆಗೆ ಸಂಪೂರ್ಣ ಮಾಹಿತಿ ದೊರೆಯುತ್ತಿಲ್ಲ, ಅಲ್ಲಿಯವರೆಗೆ ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದ ಪ್ರಕರಣದ ಕುರಿತು ಮಾತನಾಡುವುದು ಯೋಗ್ಯವಲ್ಲ.

೨. ಶಂಕರಾಚಾರ್ಯರಿಗೆ ಭಾಜಪದ ಅಧಿಕಾರದಲ್ಲಿ ಕಾಂಗ್ರೆಸ್ಸಿನ ಜನರು ನಮ್ಮನ್ನು ‘ಭಾಜಪದವರು’ ಹಾಗೂ ಕಾಂಗ್ರೆಸ್ಸಿನ ಅಧಿಕಾರದಲ್ಲಿ ಭಾಜಪದ ಜನರು ನಮ್ಮನ್ನು ‘ಕಾಂಗ್ರೆಸ್ಸಿಗರು’ ಎನ್ನುತ್ತಾರೆ. ಶಂಕರಾಚಾರ್ಯ ಇವರು ಯಾರನ್ನೂ ಬೆಂಬಲಿಸುವುದಿಲ್ಲ. ಯಾರು ಈ ಸ್ಥಾನಕ್ಕೆ ಕಳಂಕ ತರುವರು, ಅದು ಅವರಗೆ ಕಳಂಕವಾಗುವುದು.

೩. ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಇವರ ಬಗ್ಗೆ ಅವರು, ನನ್ನದು ಯಾರ ಜೊತೆಗೂ ವೈರತ್ವ ಇಲ್ಲ ಮತ್ತು ನಾನು ಯಾರ ಶತ್ರು ಕೂಡ ಅಲ್ಲ. ಯಾರು ವಿರೋಧಿಸಿದ್ದಾರೆ ಅವರು ವಿಭಜನೆ ಆಗಿದ್ದಾರೆ ಎಂದು ಹೇಳಿದರು.

ಜನರು ಹೆಚ್ಚು ಮಹತ್ವಕಾಂಕ್ಷಿ ಇರಬಾರದು !

ಶಂಕರಾಚಾರ್ಯರು ಮಾತು ಮುಂದುವರಿಸಿ, ಪ್ರಧಾನಮಂತ್ರಿಗೆ ಗಡ್ಡ ಇದೆ, ಅವರು ತಮ್ಮನ್ನು ಸಂತರು ಎಂದು ತಿಳಿದುಕೊಳ್ಳಬಹುದು; ಆದರೆ ವಾಸ್ತವದಲ್ಲಿ, ಅವರು ತಮ್ಮನ್ನು ಯಾರಿಗಿಂತಲೂ ಕಡಿಮೆ ಇಲ್ಲ ಎಂದು ತಿಳಿದುಕೊಳ್ಳುತ್ತಾರೆ. ಮೋದಿ ಇವರ ‘ಗ್ಯಾರೆಂಟಿ’ ಈಗ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರ ಬೆಂಬಲದಿಂದ ನಡೆಯುತ್ತಿದೆ ಎಂದು ಹೇಳಿದರು.

ಬೆಲೆ ಏರಿಕೆಯ ಹಿಂದೆ ‘ಮಧ್ಯವರ್ತಿಗಳು’ ಇದೇ ಮುಖ್ಯ ಕಾರಣ !

ಹಿಂದೆ ಕೇಜಿಗೆ ೨೫ ರೂಪಾಯಿ ಬೆಲೆಯಿಂದ ತಯಾರಿಸಿರುವ ವಸ್ತುಗಳು ೨೭ ರೂಪಾಯಿಗೆ ಸಾಮಾನ್ಯ ಜನರವರೆಗೆ ತಲುಪುತ್ತಿತ್ತು; ಆದರೆ ಈಗ ೨೫ ಕೇಜಿ ಬೆಲೆಯ ವಸ್ತುಗಳು ಮಾರುಕಟ್ಟೆಯಲ್ಲಿ ೨೫೦ ರೂಪಾಯಿಗೆ ಸಿಗುತ್ತದೆ. ಇದರ ಮೂಲ ‘ಮಧ್ಯವರ್ತಿ’ಗಳು ಆಗಿದೆ. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಸಂಖ್ಯೆ ಹೆಚ್ಚಾಗಿದೆ ಎಮದು ಹೇಳಿದರು.