Bangladeshi Hindu : ‘ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ‘ಹಿಂದು’ಗಳೆಂದು ಯಾರ ಮೇಲೆ ದಾಳಿ ನಡೆದಿಲ್ಲ !(ವಂತೆ) – ಮೊಹಮ್ಮದ್ ತೌಹಿದ್ ಹುಸೇನ್

  • ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ವಿದೇಶಾಂಗ ವ್ಯವಹಾರ ಸಲಹೆಗಾರ ಮೊಹಮ್ಮದ್ ತೌಹಿದ್ ಹುಸೇನ್ ಇವರ ದಾವೆ !

  • ಆವಾಮಿ ಲೀಗ್‌ನ ಬೆಂಬಲಿಗರ ಮೇಲೆ ದಾಳಿ ನಡೆಯಲಾಯಿತು ಎಂದು ದಾವೆ !

ಮೊಹಮ್ಮದ್ ತೌಹಿದ್ ಹುಸೇನ್

ಢಾಕಾ (ಬಾಂಗ್ಲಾದೇಶ) – ಶೇಖ್ ಹಸೀನಾ ಬಾಂಗ್ಲಾದೇಶದಿಂದ ಹೊರಗೆ ಬಂದ ನಂತರ ತಕ್ಷಣ ಆಡಳಿತ ಟೊಳ್ಳಾಗಿತ್ತು ಮತ್ತು ಪೊಲೀಸರ ಸಮಸ್ಯೆಗಳು ನಿರ್ಮಾಣವಾಗಿದ್ದವು; ಕಾರಣ ಪೊಲೀಸರು ಯುವ ಪೀಳಿಗೆಯ ವಿರುದ್ಧ ನಿಂತಿದ್ದರು. ಆದ್ದರಿಂದ ಶೇಖ ಹಸೀನಾ ಹೋದ ನಂತರ ಹೆಚ್ಚಿನ ಒತ್ತಡ ಇತ್ತು. ಆದ್ದರಿಂದ ಕೆಲವು ಘಟನೆಗಳು ಘಟಿಸಿವೆ; ಆದರೆ ಅದನ್ನು ‘ಹಿಂದೂ ವಿರೋಧಿ ಪ್ರತಿಭಟನೆ’ ಎನ್ನುವುದು ತಪ್ಪು. ಈ ಹಿಂಸಾಚಾರ ಆವಾಮಿ ಲೀಗ್ ನ ನಿಷ್ಠಾವಂತರ ವಿರುದ್ಧವಾಗಿತ್ತು, ಎಂದು ಬಾಂಗ್ಲಾದೇಶದಲ್ಲಿನ ಮಧ್ಯಂತರ ಸರಕಾರದ ವಿದೇಶಾಂಗ ವ್ಯವಹಾರ ಸಲಹೆಗಾರ ಮಹಮ್ಮದ್ ತೌಹಿದ್ ಹುಸೇನ್ ಇವರು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದಿರುವ ದಾಳಿಗಳ ಕುರಿತು ಸ್ಪಷ್ಟನೆ ನೀಡುವ ಪ್ರಯತ್ನಿಸಿದರು.

ಮಹಮ್ಮದ್ ತೌಹಿದ್ ಹುಸೇನ್ ಮಾತು ಮುಂದುವರೆಸಿ, ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರ ನಡೆದಿದೆ; ಆದರೆ ಅದು ಹಿಂದೂ ಅಥವಾ ಮುಸಲ್ಮಾನ ಈ ಆಧಾರದಲ್ಲಿ ಇರಲಿಲ್ಲ. ತದ್ವಿರುದ್ಧ ಆ ಸಮಯದಲ್ಲಿ ಹಿಂದುಗಳಿಗಿಂತಲೂ ಮುಸಲ್ಮಾನರ ಮೇಲೆ ಹೆಚ್ಚಿನದಾಳಿಗಳು ನಡೆದಿದ್ದವು.

ಬಾಂಗ್ಲಾದೇಶದಲ್ಲಿ ನಡೆಯುವ ದುರ್ಗಾ ಪೂಜೆಯ ಉತ್ಸವ

ಮಹಮ್ಮದ್ ತೌಹಿಧ ಹುಸೇನ್ ಇವರು ದೇಶದಲ್ಲಿ ದುರ್ಗಾ ಪೂಜೆ ಆಚರಿಸಲಾಗುವುದೇ ?, ಎಂದು ಕೇಳಿದಾಗ ಅವರು, ಇದು ಬಹಳ ವಿಚಿತ್ರ ವಿಷಯವಾಗಿದೆ. ಕೆಲವು ಜನರಿಗೆ ದುರ್ಗಾ ಪೂಜೆ ಹಿಡಿಸುವುದಿಲ್ಲ; ಆದರೆ ಈ ದೇಶದಲ್ಲಿ ನೂರಾರು ವರ್ಷಗಳಿಂದ ದುರ್ಗಾ ಪೂಜೆ ನಡೆಯುತ್ತಿದ್ದು ಅದು ನಡೆದಿಲ್ಲ, ಹೀಗೆ ಒಂದು ವರ್ಷ ಕೂಡ ಆಗಿಲ್ಲ. ಯಾರಿಗೆ ದುರ್ಗಾ ಪೂಜೆ ಮಾಡುವುದಿದೆ, ಅವರು ಖಂಡಿತವಾಗಿಯೂ ಮಾಡಬಹುದು ಎಂದು ಹೇಳಿದರು.

ಭಾರತ ಬಾಂಗ್ಲಾದೇಶದ ಸಂಬಂಧ ಉತ್ತಮವಾಗಿರುವುದು ಆವಶ್ಯಕ !

ಭಾರತ-ಬಾಂಗ್ಲಾದೇಶದ ಸಂಬಂಧದ ಕುರಿತು ಮಹಮ್ಮದ್ ತೌಹೇದ ಇವರು, ಎರಡು ದೇಶದಲ್ಲಿ ಒಳ್ಳೆಯ ಸಂಬಂಧ ಇರಲೇಬೇಕು. ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಇವರ ಜೊತೆಗೆ ನ್ಯೂಯಾರ್ಕ್ ನಲ್ಲಿ ನನ್ನ ಸಭೆ ನಡೆದಿದೆ. ಇದರಲ್ಲಿ ಉಭಯ ದೇಶದಲ್ಲಿನ ಕಾರ್ಯಕಲಾಪದ ಕುರಿತು ಚರ್ಚೆ ನಡೆಸಲಾಗಿದೆ. ಇದರಲ್ಲಿ ಶೇಖ್ ಹಸೀನಾ ಇವರ ಸಂದರ್ಭದಲ್ಲಿ ಅವರ ಜೊತೆಗೆ ಯಾವುದೇ ಚರ್ಚೆ ನಡೆದಿಲ್ಲ. ಉಭಯ ದೇಶದಲ್ಲಿನ ವ್ಯಾಪಾರ ನಡೆಯುತ್ತಿದೆ. ಕೆಲವು ವ್ಯತ್ಯಯ ಬಂದಿತ್ತು; ಆದರೆ ಈಗ ಉಭಯ ದೇಶದಲ್ಲಿನ ವ್ಯವಹಾರಕ್ಕೆ ಮತ್ತೊಮ್ಮೆ ವೇಗ ದೊರೆತಿದೆ. ಉಭಯ ದೇಶಗಳ ಪರಸ್ಪರಲ್ಲಿ ಹಿತ ಸಂಬಂಧವಿದೆ. ಆದರೂ ಭಾರತದಲ್ಲಿನ ವೀಸಾ ಕೇಂದ್ರ ಸಂಪೂರ್ಣವಾಗಿ ಕಾರ್ಯನಿರತವಾಗಿಲ್ಲ; ಆದರೆ ಇದು ಸಂಪೂರ್ಣವಾಗಿ ಭಾರತ ಸರಕಾರದ ನಿರ್ಣಯವಾಗಿದೆ ಎಂದು ಹೇಳಿದರು.

‘ಬಾಂಗ್ಲಾದೇಶದಲ್ಲಿನ ಪ್ರತಿಭಟನೆಯ ಹಿಂದೆ ಅಮೇರಿಕಾದ ಕೈವಾಡವಿದೆ’, ಹೀಗೆ ಹೇಳುವುದು ತಪ್ಪಾಗಿದೆ !

ಮಾಜಿ ಪ್ರಧಾನಿ ಶೇಖ್ ಹಸೀನಾ ಇವರು ಅವರ ಸರಕಾರ ಬೀಳಿಸುವಲ್ಲಿ ಅಮೇರಿಕಾ ಷಡ್ಯಂತ್ರ ರಚಿಸಿತ್ತು ಎಂದು ಆರೋಪಿಸಿದ್ದರು. ಇದರ ಕುರಿತು ಮಹಮ್ಮದ್ ತೌಹೇದ್ ಹುಸೇನ್ ಇವರಿಗೆ ಕೇಳಿದಾಗ ಅವರು, ಅಧಿಕಾರ ಬದಲಾವಣೆ ಇದು ಷಡ್ಯಂತ್ರ ಎನ್ನುವುದು ಎಂದರೆ ಯುವ ಪೀಳಿಗೆಯ ಬಲಿದಾನಕ್ಕೆ ಮಸಿ ಬಳಿಯುವುದಾಗಿದೆ. ವಿದ್ಯಾರ್ಥಿ ಮತ್ತು ಇತರ ಯುವಕರು ನಿರಂಕುಶ ಆಡಳಿತಕ್ಕೆ ಪ್ರಜಾಪ್ರಭುತ್ವ ಹಾಗೂ ಸಮಗ್ರ ಗಳಿಸಲು ಪ್ರಾಣಗಳ ಆಹುತಿ ನೀಡಿದ್ದಾರೆ. ಯುವ ಪೀಳಿಗೆಯ ಬಲಿದಾನದಿಂದ ಸರಕಾರ ಬದಲಾಗಿದೆ ಮತ್ತು ಶೇಖ್ ಹಸೀನಾ ಇವರು ರಾಜೀನಾಮೆ ನೀಡಿ ದೇಶ ಬಿಟ್ಟು ಪಲಾಯನ ಮಾಡಬೇಕಾಯಿತು. ಇದು ಅನಿರೀಕ್ಷಿತ ಪ್ರತಿಭಟನೆ ಆಗಿತ್ತು ಎಂದು ಹೇಳಿದರು.

ಸಂಪಾದಕೀಯ ನಿಲುವು

ಪ್ರತಿಭಟನೆ ಸಮಯದಲ್ಲಿ ‘ಹಿಂದೂ’ಗಳೆಂದು ದಾಳಿಗಳು ನಡೆದಿಲ್ಲವೆಂದರೆ, ಹಿಂದೆ ಮತ್ತು ಈಗಲೂ ಕೂಡ ಹಿಂದುಗಳ ಮೇಲೆ ದಾಳಿಗಳು ಏಕೆ ನಡೆಯುತ್ತಿವೆ ? ಹಿಂದುಗಳನ್ನು ದುರ್ಗಾ ಪೂಜೆಗೆ ಏಕೆ ತಡೆಯಲಾಗುತ್ತಿದೆ ? ದೇವತೆಗಳ ಮೂರ್ತಿಗಳನ್ನು ಏಕೆ ಧ್ವಂಸಗೊಳಿಸಲಾಗುತ್ತಿದೆ? ‘ಹಿಂದುಗಳನ್ನು ನಾವು ರಕ್ಷಿಸುವೆವು, ಅವರಿಗೆ ಪರಿಹಾರ ನೀಡುವೆವು’ ಎಂದು ಸರಕಾರ ಏಕೆ ಘೋಷಿಸುವುದಿಲ್ಲ ?