ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ವಿವಿಧ ಸಾಹಿತ್ಯಗಳನ್ನು ಇಡಲು ಫೋಂಡಾ (ಗೋವಾ)ದ ಪರಿಸರದಲ್ಲಿ ೫೦ ರಿಂದ ೨೦೦ ಚದರ ಮೀಟರ್ ವಾಸ್ತುವಿನ ಆವಶ್ಯಕತೆ ಇದೆ !

ಗೋವಾದ ರಾಮನಾಥಿ ಆಶ್ರಮದಲ್ಲಿನ ಹೆಚ್ಚುತ್ತಿರುವ ಕಾರ್ಯದ ವ್ಯಾಪ್ತಿಯನ್ನು ನೋಡಿದರೆ ವಿವಿಧ ರೀತಿಯ ಸಾಹಿತ್ಯ, ಉದಾ. ಧಾನ್ಯ, ಪೀಠೋಪಕರಣಗಳು, ಕಟ್ಟಡಕಾಮಗಾರಿ ಮತ್ತು ದುರಸ್ತಿಯ ಸಾಮಗ್ರಿಗಳು ಮುಂತಾದವುಗಳನ್ನು ಇಡಲು ಅಲ್ಲಿನ ಸ್ಥಳವು ಸಾಕಾಗುತ್ತಿಲ್ಲ. ಅದಕ್ಕಾಗಿ ಗೋವಾದ ಫೋಂಡಾದಲ್ಲಿನ ಪರಿಸರದಲ್ಲಿ ೫೦ ರಿಂದ ೨೦೦ ಚದರ ಮೀಟರ್ ವಾಸ್ತು, ಉದಾ. ಗೋದಾಮು (ಗೋಡೌನ್), ಅಂಗಡಿಯ ಒಂದು ಕೊಠಡಿ, ನೆಲಮಾಳಿಗೆ, ಚಪ್ಪರ, ಮನೆ, ಮನೆಯ ಪಕ್ಕದಲ್ಲಿರುವ ಪ್ರತ್ಯೇಕ ಕೋಣೆ ಬೇಕಾಗಿದೆ.

ಧರ್ಮಾಧಿಷ್ಠಿತ ‘ಹಿಂದೂ ರಾಷ್ಟ್ರ’ದ ಸ್ಥಾಪನೆಗಾಗಿ ಯೋಗದಾನ ನೀಡುವುದರ ಆವಶ್ಯಕತೆ !

‘ರಾಷ್ಟ್ರಭಾವನೆ ಮತ್ತು ಧರ್ಮಭಾವನೆ ಜಾಗೃತವಾಗದೇ ಕೃತಿಯಾಗಲಾರದು’ ಎಂಬ ತತ್ತ್ವಕ್ಕನುಸಾರ ಧರ್ಮಸಂಸ್ಥಾಪನೆಗಾಗಿ ಹಿಂದೂಗಳಿಗೆ ಪ್ರಬೋಧನೆ ಮಾಡಿ ಅವರನ್ನು ಕೃತಿ ಮಾಡಲು ಪ್ರವೃತ್ತಗೊಳಿಸುವುದು, ಉದಾ.ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಬೋಧನಾತ್ಮಕ ಲೇಖನಗಳನ್ನು ಬರೆಯುವುದು, ವ್ಯಾಖ್ಯಾನ ನೀಡುವುದು ಇತ್ಯಾದಿ. ಇದಕ್ಕೂ ಕಾಲಾನುಸಾರ ಶೇ. ೧೦ ರಷ್ಟು ಮಹತ್ವವಿದೆ.

ಢೋಂಗಿ ಜಾತ್ಯತೀತವಾದಿಗಳ ವಿರೋಧವನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ಪ್ರಧಾನಮಂತ್ರಿ ಮೋದಿಯವರು ಅಧಿಕೃತವಾಗಿ ರಾಮಮಂದಿರದ ಭೂಮಿಪೂಜೆಗಾಗಿ ಹೋಗುವುದು ಅವರು ಸಂವಿಧಾನಬದ್ಧವಾಗಿ ಸ್ವೀಕರಿಸಿದ ಪ್ರಮಾಣವಚನದ ಉಲ್ಲಂಘನೆಯಾಗುವುದು. ‘ಜಾತ್ಯತೀತತೆ’ಯು ಸಂವಿಧಾನದ ಮೂಲ ಅಂಗವಾಗಿದೆ, ಎಂದು ಟ್ವೀಟ್ ಮಾಡಿ ಅಸದುದ್ದೀನ ಓವೈಸಿಯವರು ಪ್ರಧಾನಮಂತ್ರಿ ಮೋದಿಯವರನ್ನು ವಿರೋಧಿಸಿದ್ದಾರೆ.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ಆಪತ್ಕಾಲದಲ್ಲಿ ಮನೆಯಲ್ಲಿನ ಫ್ಯಾನ್, ನಲ್ಲಿ, ಮಿಕ್ಸರ್ ಇವುಗಳಂತಹ ವಸ್ತುಗಳು ಹಾಳಾಗಬಹುದು. ಅವುಗಳ ದುರಸ್ತಿಗಾಗಿ ತಗಲುವ ಬಿಡಿಭಾಗಗಳು ಆಪತ್ಕಾಲದಲ್ಲಿ ಪೇಟೆಯಲ್ಲಿ ಸಿಗುವುದು ಕಠಿಣವಾಗುವುದು ಮತ್ತು ದುರಸ್ತಿ ಮಾಡುವ ತಂತ್ರಜ್ಞರೂ (ಮೆಕ್ಯಾನಿಕ್) ಸಿಗುವುದು ಕಠಿಣವಾಗುವುದು. ಇದಕ್ಕಾಗಿ ಇಂತಹ ವಸ್ತುಗಳ ಬಿಡಿ ಭಾಗಗಳನ್ನು ಮೊದಲೇ ಖರೀದಿಸಿಡಬೇಕು, ಹಾಗೆಯೇ ಆ ವಸ್ತುಗಳ ದುರುಸ್ತಿ ಮಾಡುವುದನ್ನು ಸಾಧ್ಯವಿದ್ದಷ್ಟು ಕಲಿತುಕೊಳ್ಳಬೇಕು.

ಸಮಾಜವಿರೋಧಿ ಪಿಡುಗುಗಳ ವಿರೋಧ ಮತ್ತು ‘ಸುರಾಜ್ಯ ಅಭಿಯಾನ’ ಈ ವಿಷಯದ ಬಗ್ಗೆ ‘ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಗಣ್ಯರ ಭಾಷಣಗಳು

೨೦೧೩ ರಲ್ಲಿ ಅಂದಿನ ಕಾಂಗ್ರೇಸ್ ಸರಕಾರವು ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಅಪಾರ ಅಧಿಕಾರವನ್ನು ನೀಡಿತು. ಇದರಿಂದ ಇಂದು ಭಾರತದಲ್ಲಿ ರಕ್ಷಣಾದಳ ಹಾಗೂ ರೇಲ್ವೆ ಇಲಾಖೆಯ ನಂತರ ಎಲ್ಲಕ್ಕಿಂತ ಹೆಚ್ಚು (೬ ಲಕ್ಷ ಎಕರೆ) ಭೂಮಿಯ ಒಡೆತನ ವಕ್ಫ್ ಬೋರ್ಡ್ ಬಳಿ ಇದೆ. ಹಿಂದೂಗಳಿಗೆ ಈ ಕಾನೂನಿನ ಬಗ್ಗೆ ಇರುವ ಅಜ್ಞಾನ ಹಾಗೂ ಉದಾಸೀನತೆಯಿಂದಾಗಿ ವಕ್ಫ್ ಬೋರ್ಡ್ ದೇಶದಾದ್ಯಂತ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಅಕ್ಷರಶಃ ಕಬಳಿಸಲು ಪ್ರಯತ್ನಿಸುತ್ತಿದೆ

ನೆರೆಯ ಬಗ್ಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಎರಡೂ ರಾಜ್ಯಗಳಲ್ಲಿ ಸಮನ್ವಯವಿದೆ

ಸಾರ್ವಜನಿಕ ಆರೋಗ್ಯ ರಾಜ್ಯ ಸಚಿವ ರಾಜೇಂದ್ರ ಪಾಟಿಲ್-ಯಡ್ರಾವಕರ ಹಾಗೂ ಕರ್ನಾಟಕದ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿಯವರು ಆಗಸ್ಟ್ ೮ ರಂದು ಶಿರೋಳ ತಾಲೂಕಿನ ಶಿರದವಾಡದ ಪಂಚಗಂಗಾ ನದಿಯ ನೀರಿನ ಮಟ್ಟ ಹಾಗೂ ನದಿ ತೀರದ ನೆರೆ ಪರಿಸ್ಥಿತಿಯ ಬಗ್ಗೆ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದರು.

ಮಥುರಾದ ಶ್ರೀಕೃಷ್ಣಜನ್ಮಭೂಮಿ ಮುಕ್ತಿಗಾಗಿ ಸಾಧುಗಳಿಂದ ‘ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ ನ್ಯಾಸ’ದ ಸ್ಥಾಪನೆ

ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರವನ್ನು ನಿರ್ಮಾಣ ಮಾಡಲು ಭೂಮಿಪೂಜೆಯನ್ನು ಮಾಡಿದ ಕೇಲವೇ ದಿನಗಳಲ್ಲಿ ಮಥುರಾದ ಶ್ರೀಕೃಷ್ಣಜನ್ಮಭೂಮಿ ಮುಕ್ತ ಮಾಡಲು ಸಾಧುಗಳು ‘ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ’ನಂತೆಯೇ ‘ಶ್ರೀಕೃಷ್ಣಜನ್ಮಭೂಮಿ ನಿರ್ಮಾಣ ನ್ಯಾಸ’ವನ್ನು ಸ್ಥಾಪಿಸಿದ್ದಾರೆ.

ಶ್ರೀರಾಮಮಂದಿರವನ್ನು ಭೂಕಂಪ ನಿರೋಧಕವಾಗಿ ನಿರ್ಮಿಸುವುದರಿಂದ ಅದು ಸಾವಿರಾರು ವರ್ಷ ಬಾಳಲಿದೆ! – ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್

ಇಲ್ಲಿ ನಿರ್ಮಿಸಲಾಗುವ ಶ್ರೀರಾಮಮಂದಿರವು ಬಲವಾದ ಭೂಕಂಪವನ್ನೂ ಎದುರಿಸಬಲ್ಲದಂತೆ ನಿರ್ಮಿಸಲಾಗುವುದು. ಈ ದೇವಸ್ಥಾನವು ಕಡಿಮೆ ಪಕ್ಷ ೨ ಸಾವಿರ ವರ್ಷಗಳ ತನಕ ಸಹಜವಾಗಿ ಬಾಳಿಕೆ ಬರುವುದು, ಎಂದು ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಇವರು ಹೇಳಿದರು. ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ದೇವಸ್ಥಾನದ ಅಡಿಪಾಯ ೨೦೦ ಅಡಿಯಷ್ಟು ಆಳವಿರಲಿದೆ.

ಚೀನಾದ ೨ ಸಾವಿರದ ೫೦೦ ‘ಯೂ-ಟ್ಯೂಬ್ ಚಾನೆಲ್’ಗಳನ್ನು ತೆಗೆದುಹಾಕಿದ ಗೂಗಲ್

ಗೂಗಲ್ ಸಂಸ್ಥೆಯು ಚೀನಾದ ೨ ಸಾವಿರದ ೫೦೦ ಕ್ಕೂ ಹೆಚ್ಚು ‘ಯೂ-ಟ್ಯೂಬ್ ಚಾನೆಲ್’ಗಳನ್ನು ತೆಗೆದು ಹಾಕಿದೆ. ಎಪ್ರಿಲ್ ಮತ್ತು ಜೂನ್ ಈ ಕಾಲಾವಧಿಯಲ್ಲಿ ಈ ‘ಚಾನೆಲ್ಸ್’ಗಳನ್ನು ತೆಗೆದು ಹಾಕಿದೆ; ಆದರೆ ಗೂಗಲ್ ಅವುಗಳ ಹೆಸರುಗಳನ್ನು ಮಾತ್ರ ಬಹಿರಂಗಪಡಿಸಿಲ್ಲ. ತಂತ್ರಜ್ಞಾನ ಕ್ಷೇತ್ರದಲ್ಲಿನ ತಜ್ಞರು ನೀಡಿದ ಮಾಹಿತಿಗನುಸಾರ, ‘ದಾರಿ ತಪ್ಪಿಸುವ ಮಾಹಿತಿ ಹಾಗೂ ತಪ್ಪಾದ ಅಂಶಗಳನ್ನು ಹಬ್ಬಿಸುತ್ತಿರುವ ಈ ‘ಚಾನೆಲ್ಸ್’ ತೆಗೆಯಲಾಗಿದೆ.

ಜಮಶೆದಪುರ(ಝಾರಖಂಡ) ಇಲ್ಲಿ ಶ್ರೀರಾಮಮಂದಿರದ ಭೂಮಿಪೂಜೆಯ ನಿಮಿತ್ತ ಹನುಮಾನ್ ದೇವಸ್ಥಾನದಲ್ಲಿ ರಾಮಧುನ್ ಹಾಕಿದ್ದರಿಂದ ಧ್ವನಿವರ್ಧಕವನ್ನು ತೆಗೆಸಿದ ಪೊಲೀಸರು

ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯ ಮೇಲೆ ನಿರ್ಮಿಸಲಾಗುವ ಶ್ರೀರಾಮನ ಭೂಮಿಪೂಜೆಯು ಆಗಸ್ಟ್ ೫ ರಂದು ನಡೆಯುತ್ತಿರುವಾಗ ಸಂಪೂರ್ಣ ದೇಶದಲ್ಲಿ ಆನಂದದ ವಾತಾವರಣವಿತ್ತು. ಈ ದಿನದಂದು ಪಟ್ಟಣದ ಶಾಸ್ತ್ರೀನಗರದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಧ್ವನಿವರ್ಧಕದಿಂದ ರಾಮಧುನ್ ಹಾಕಾಲಾಗಿತ್ತು; ಆದರೆ ಅಲ್ಲಿಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಧ್ವನಿವರ್ಧಕವನ್ನು ಕೆಳಗಿಳಿಸಿದ ಘಟನೆ ಬೆಳಕಿಗೆ ಬಂದಿದೆ.