ಮುಂಬಯಿ – ಕಾಂಗ್ರೆಸ್‌ಗೆ ಮಹಾತ್ಮಾ ಗಾಂಧಿ ಬಗ್ಗೆ ಗೌರವವಿಲ್ಲ. ಮಹಾತ್ಮಾ ಗಾಂಧಿಯನ್ನು ಕಾಂಗ್ರೆಸ್ ಗೌರವಿಸುತ್ತಿದ್ದರೆ, ಅದು ಇಲ್ಲಿಯವರೆಗೆ ಅವರ ಸೂಚನೆಯಂತೆ ಕ್ರಮವನ್ನು ತೆಗೆದುಕೊಂಡಿರುತ್ತಿತ್ತು. ಮಹಾತ್ಮ ಗಾಂಧಿಯವರು, ‘ಸ್ವಾತಂತ್ರ್ಯ ಸಿಕ್ಕಿದೆ. ಕಾಂಗ್ರೆಸ್ಸಿನ ಆವಶ್ಯಕತೆ ಈಗ ಮುಕ್ತಾಯವಾಗಿದೆ. ಈಗ ಕಾಂಗ್ರೆಸ್ ವಿಸರ್ಜಿಸಬೇಕು. ಹೀಗೆ ಮಾಡದಿದ್ದರೆ, ಕಾಂಗ್ರೆಸ ಪಕ್ಷ ಈ ದೇಶದ ಅಭಿವೃದ್ಧಿಗೆ ಅಡಚಣೆಯಾಗಲಿದೆ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಮಹಾತ್ಮಾ ಗಾಂಧಿಯವರ ಈ ಸೂಚನೆಯನ್ನು ಪಾಲಿಸಿ ಕಾಂಗ್ರೆಸ ಪಕ್ಷವನ್ನು ವಿಸರ್ಜಿಸಬೇಕು. ತದನಂತರ ಅವರಿಗೆ ಮಹಾತ್ಮಾ ಗಾಂಧಿಯವರ ಬಗ್ಗೆ ಮಾತನಾಡುವ ಅಧಿಕಾರ ಸಿಗುತ್ತದೆ ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಅವರು ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ಸಂದರ್ಭದಲ್ಲಿ ಪ್ರಸಾರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದರು.