ಸದ್ಗುರು ಜಗ್ಗಿ ವಾಸುದೇವ್ ಇವರ ಆಶ್ರಮದಲ್ಲಿ ಪೊಲೀಸರ ವಿಚಾರಣೆ

ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶದ ನಂತರ ಕ್ರಮ

ಚೆನ್ನೈ (ತಮಿಳುನಾಡು) – ಪೊಲೀಸರು ಈಶಾ ಫೌಂಡೇಶನ್ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಇವರ ಕೊಯಿಮತ್ತೂರ್ ಇಲ್ಲಿಯ ಆಶ್ರಮಕ್ಕೆ ಹೋಗಿ ಕೆಲವರ ವಿಚಾರಣೆ ನಡೆಸಿದ್ದಾರೆ. ಓರ್ವ ಮಾಜಿ ಪ್ರಾಧ್ಯಾಪಕರು ಅವರ ೨ ಹುಡುಗಿಯರನ್ನು ಆಶ್ರಮದಲ್ಲಿ ಕೂಡಿ ಹಾಕಿರುವ ಆರೋಪ ಮಾಡುತ್ತಾ ಮದ್ರಾಸ್ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ನ್ಯಾಯಾಲಯವು ಈ ಪ್ರಕರಣದ ಕುರಿತು ಗಮನಹರಿಸಿ ಈಶಾ ಪೌಂಡೇಶನ್ ಗೆ ಸಂಬಂಧಿತ ಎಲ್ಲಾ ಪ್ರಕರಣಗಳ ಒಂದು ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಪ್ರಸ್ತುತಪಡಿಸುವ ಆದೇಶ ನೀಡಿತ್ತು.

೧. ಎಸ್. ಕಾಮರಾಜ ಎಂಬ ವ್ಯಕ್ತಿಯು ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ಈಶಾ ಫೌಂಡೇಶನ್ ಮೇಲೆ ಗಂಭೀರ ಆರೋಪ ಮಾಡಿದ್ದರು. ಎಸ್. ಕಾಮರಾಜ ಇವರು ಅವರ ಇಬ್ಬರು ಹುಡುಗಿಯರು ಗೀತಾ ಕಾಮರಾಜ ಅಲಿಯಾಸ್ ಮಾ ಮಾಥಿ (ವಯಸ್ಸು ೪೨ ವರ್ಷ) ಮತ್ತು ಲತಾ ಕಾಮರಾಜ ಅಲಿಯಾಸ್ ಮಾ ಮಾಯೂ (ವಯಸ್ಸು ೩೯ ವರ್ಷ) ಇವರಿಗೆ ಆಶ್ರಮದಲ್ಲಿ ಕೂಡಿ ಹಾಕಿ ಸನ್ಯಾಸ ತೆಗೆದುಕೊಳ್ಳಲು ಅನಿವಾರ್ಯಗೊಳಿಸಿರುವುದಾಗಿ ಅರ್ಜಿಯ ಮೂಲಕ ಆರೋಪಿಸಲಾಗಿತ್ತು.

೨. ‘ನಮಗೆ ಈಶ ಫೌಂಡೇಶನ್ ನಿಂದ ಬಲವಂತವಾಗಿ ಕೂಡಿ ಹಾಕಿರಲಿಲ್ಲ ಮತ್ತು ನಾವು ಇಲ್ಲಿ ಸ್ವ ಇಚ್ಛೆಯಿಂದ ವಾಸಿಸುತ್ತಿದ್ದೇವೆ ಎಂದು ಈ ಇಬ್ಬರು ಮಹಿಳೆಯರು ವಿಚಾರಣೆಯ ವೇಳೆಯಲ್ಲಿ ನ್ಯಾಯಾಲಯದಲ್ಲಿ ಹೇಳಿದ್ದರು.

೩. ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣ್ಯಂ ಮತ್ತು ವಿ. ಶಿವಗ್ನಂ ಇವರು ಸದ್ಗುರು ಜಗ್ಗಿ ವಾಸುದೇವ್ ಇವರ ಕಾರ್ಯಕಲಾಪದ ಕುರಿತು ಆಕ್ಷೇಪಿಸಿದ್ದರು ಮತ್ತು ಈಶಾ ಫೌಂಡೇಶನ್ ಗೆ ಸಂಬಂಧಿತ ಎಲ್ಲಾ ಪ್ರಕರಣಗಳ ಸಮೀಕ್ಷೆ ನಡೆಸಲು ಪೊಲೀಸರಿಗೆ ಆದೇಶ ನೀಡಿದ್ದರು. ಅದರ ನಂತರ ಅಕ್ಟೋಬರ್ ೧ ರಂದು ಸುಮಾರು ೧೫೦ ಪೊಲೀಸರು ಕೊಯಿಮತ್ತೂರು ಇಲ್ಲಿಯ ಈಶಾ ಯೋಗ ಕೇಂದ್ರದಲ್ಲಿ ತಪಾಸಣೆ ನಡೆಸಿತು.

೪. ‘ಪೊಲೀಸರು ತಪಾಸಣೆ ನಡೆಸಿಲ್ಲ ಕೇವಲ ವಿಚಾರಣೆಗಾಗಿ ಬಂದಿದ್ದರು, ಎಂದು ಯೋಗ ಕೇಂದ್ರವು ಮಾಹಿತಿ ನೀಡಿದೆ. ಕೇಂದ್ರದಲ್ಲಿನ ನಿವಾಸಿ ಮತ್ತು ಸ್ವಯಂಸೇವಕರ ಮಾಹಿತಿ, ಅವರ ಜೀವನ ಶೈಲಿ, ಅವರು ಇಲ್ಲಿಗೆ ಹೇಗೆ ಬಂದರು? ಇದರ ಕುರಿತು ಮಾಹಿತಿ ಪಡೆಯಲಾಗಿದೆ ಎಂದು ಸಂಸ್ಥೆಯಿಂದ ಪ್ರಸಿದ್ಧಿಗೊಳಿಸಿರುವ ಮನವಿಯಲ್ಲಿ ಹೇಳಲಾಗಿದೆ.