ರಾಜಸ್ಥಾನದ ಕಾಂಗ್ರೆಸ್ ಸರಕಾರದ ವಜಾಗೊಂಡ ಸಚಿವ ರಾಜೇಂದ್ರ ಗುಧಾ ಅವರು ಶಿವಸೇನೆ (ಶಿಂಧೆ ಗುಂಪು) ಗೆ ಸೇರ್ಪಡೆ

ಜೈಪುರ/ಉದಯಪುರ (ರಾಜಸ್ಥಾನ) – ರಾಜಸ್ಥಾನದ ಕಾಂಗ್ರೆಸ್ ಸರಕಾರದಲ್ಲಿ ಅವರು ಸಚಿವರಾಗಿದ್ದಾಗ ಸರಕಾರದ ವಿರುದ್ಧ ಭ್ರಷ್ಟಾಚಾರದ ಕುರಿತು ಪ್ರತಿಭಟಿಸಿ ಸಚಿವ ಸ್ಥಾನದಿಂದ ವಜಾಗೊಂಡ ಶಾಸಕ ರಾಜೇಂದ್ರ ಗುಧಾ ಇವರು ಶಿವಸೇನೆ (ಶಿಂಧೆ ಗುಂಪು) ಪಕ್ಷವನ್ನು ಸೇರಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಗುಧಾ ಅವರು ತಮ್ಮ ಸ್ವಗ್ರಾಮದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಮುಖ್ಯಮಂತ್ರಿ ಶಿಂಧೆ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು, ‘ಒಂದು ವರ್ಷದ ಹಿಂದೆ ಗೆಹ್ಲೋಟ್ ಅವರು “ಗುಡಾದ ಕಾರಣದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ” ಎಂದು ಹೇಳಿದ್ದರು. ಈಗ ಗೆಹ್ಲೋಟ್ ಗೂಧಾ ಅವರನ್ನು ವಜಾ ಮಾಡಿದ್ದಾರೆ. ಗೆಹ್ಲೋಟ್ ಮಾಡಿದ್ದಕ್ಕೆ ಜನ ಉತ್ತರಿಸುತ್ತಾರೆ.’ ಎಂದು ಟೀಕಿಸಿದರು.

ರಾಜೇಂದ್ರ ಗೂಢಾ ಅವರು ಶಾಸಕಾಂಗ ಸಭೆಯಲ್ಲಿ ಕೆಂಪು ಡೈರಿ ತೋರಿಸಿ, ‘ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮೇಂದ್ರ ಸಿಂಗ್ ರಾಥೋಡ್ ಅವರ ಮನೆ ಮೇಲೆ ಆದಾಯ ತೆರಿಗೆ ದಾಳಿ ನಡೆಸುವ ಮೊದಲು ಈ ಡೈರಿಯನ್ನು ತರಲಾಗಿತ್ತು’ ಎಂದು ಪ್ರತಿಪಾದಿಸಿದ್ದರು. ಅಂದು ದೊಡ್ಡ ಗಲಾಟೆಯೇ ನಡೆದಿತ್ತು. ಕೆಂಪು ಡೈರಿಗೆ ಸಂಬಂಧಿಸಿದಂತೆ ಗೂಢಾ ಅವರು ಗೆಹ್ಲೋಟ್ ಸರಕಾರದ ವಿರುದ್ಧ ನಿರಂತರವಾಗಿ ಬಣ್ಣ ಬಯಲು ಮಾಡಿದ್ದಾರೆ. ಗುಧಾ ಅವರು ಲಾಲ್ ಡೈರಿಯ 3 ಪುಟಗಳನ್ನು ಬಿಡುಗಡೆ ಮಾಡಿದ್ದರು, ಇದರಲ್ಲಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಚುನಾವಣೆಯ ವ್ಯವಹಾರಗಳನ್ನು ಉಲ್ಲೇಖಿಸಲಾಗಿದೆ. ಭಾಜಪ ನಿರಂತರವಾಗಿ ಕೆಂಪು ಡೈರಿಯನ್ನು ಚುನಾವಣಾ ಸೂತ್ರವನ್ನಾಗಿ ಮಾಡಿಕೊಂಡಿದೆ. ಅಮಿತ್ ಶಾ ಅವರಿಂದ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ತನಕದ ಪ್ರತಿಯೊಬ್ಬ ನಾಯಕರು ಕೆಂಪು ಡೈರಿ ಆಧಾರದ ಮೇಲೆ ಗೆಹ್ಲೋಟ್ ಸರಕಾರವನ್ನು ಟೀಕಿಸಿದ್ದರು.

(ಸೌಜನ್ಯ – Sach Bedhadak)