ಬೌದ್ಧರನ್ನು ಉದ್ದೇಶಿಸಿ ಹಿಂದೂದ್ವೇಷಿ ಹೇಳಿಕೆ ನೀಡಿದ ಸಾಹಿತಿ ಕೆ.ಎಸ್. ಭಗವಾನ್
ಮೈಸೂರು – ಮಾನ ಮರ್ಯಾದೆ ಇದ್ದರೆ, ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಬೇಕು. ನಾನು ದೇವಸ್ಥಾನಕ್ಕೆ ಹೋಗಿ ೫೦ ವರ್ಷಗಳು ಕಳೆದಿದೆ. ದೇವಸ್ಥಾನಕ್ಕೆ ಹೋಗುವುದರಿಂದ ಏನು ಆಗುವುದಿಲ್ಲ, ಎಂದು ಸಾಹಿತಿ ಪ್ರಾ. ಕೆ.ಎಸ್. ಭಗವಾನ್ ಬೌದ್ಧರನ್ನು ಉದ್ದೇಶಿಸಿ ಹೇಳಿದ್ದಾರೆ.
ಪ್ರಾ.ಭಗವಾನ್ ಹೇಳಿದ್ದು;
೧. ಹಿಂದೂ ಎಂದರೆ ಹಿಂದುಳಿದ ವರ್ಗ. ಹಿಂದೂ ಎಂದರೆ ಯಾರು ಮುಂದೆ ಬರುವುದಿಲ್ಲ ಮತ್ತು ಇತರರನ್ನೂ ಮುಂದೆ ಬರಲು ಬಿಡುವುದಿಲ್ಲ ಅಂತವರು.
೨. ಹಿಂದೂ ಧರ್ಮ ಎಂದರೆ ಬ್ರಾಹ್ಮಣರ ಧರ್ಮವಾಗಿದೆ. ಕೇವಲ ಪುರುಷರನ್ನು ಬ್ರಾಹ್ಮಣ ಎನ್ನುತ್ತಾರೆ. ಸ್ತ್ರೀಯರು ಬ್ರಾಹ್ಮಣರಲ್ಲ, ಅವರನ್ನು ಶೂದ್ರರು ಎನ್ನುತ್ತಾರೆ. ಶೂದ್ರರು ದೇವಸ್ಥಾನ ಕಟ್ಟುತ್ತಾರೆ. ದೇವಸ್ಥಾನದ ಒಳಗೆ ಬ್ರಾಹ್ಮಣರಿರುತ್ತಾರೆ. ದೇವಸ್ಥಾನ ಕಟ್ಟುವವರು ಶೂದ್ರರು. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ಅವರು ದೇವಸ್ಥಾನಕ್ಕೆ ಹೋಗಬಾರದು. ಮನು ಸ್ಮೃತಿಯಲ್ಲಿ ಶೂದ್ರ ಎಂದರೆ ವೇಶ್ಯಯ ಉದರದಿಂದ ಜನಿಸಿದವರು ಎಂದು ಹೇಳಲಾಗಿದೆ.(ಮನಸುೃತಿಯಲ್ಲಿ ಈ ರೀತಿಯ ಯಾವುದೇ ಹೇಳಿಕೆ ಇಲ್ಲದಿರುವಾಗಲೂ ‘ಸುಳ್ಳನ್ನು ಒತ್ತಿ ಒತ್ತಿ ಹೇಳಿದರೆ ಅದು ಸತ್ಯವಾಗುವುದು’ ಎಂಬ ಪ್ರವೃತ್ತಿಯ ಹಿಂದೂದ್ವೇಷಿ ಸಾಹಿತಿ ! – ಸಂಪಾದಕರು) ನಾವು ಶೂದ್ರರಾಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಬೇಕೇ?
೩. ನಮಗೆ ಹಿಂದೂ ಧರ್ಮದ ಅವಶ್ಯಕತೆ ಇಲ್ಲ. ಎಲ್ಲರೂ ಬೌದ್ದ ಗುರುಗಳ ಮೇಲೆ ವಿಶ್ವಾಸವಿಡಿ. ನನ್ನ ವಿಚಾರಗಳ ಮೇಲೆ ವಿಶ್ವಾಸವಿಡಿ ಎಂದು ಬುದ್ಧನು ಹೇಳಿಲ್ಲಾ. ನಾನು ಏನು ಹೇಳುತ್ತೇನೆ ಅದನ್ನು ಕೇಳಲೇಬೇಕು, ಇಲ್ಲವಾದರೆ ನಿಮಗೆ ಸ್ವರ್ಗ ಸಿಗುವುದಿಲ್ಲ ಎಂದು ಏಸು ಹೇಳುತ್ತಾನೆ. ನೀವು ನನ್ನ ಮಾತು ಕೇಳದಿದ್ದರೆ ನಿಮಗೆ ಮೋಕ್ಷ ಸಿಗುವುದಿಲ್ಲ ಎಂದು ಪೈಗಂಬರ್ ಹೇಳುತ್ತಾರೆ. ನೀವು ನನ್ನ ಮಾತು ಕೇಳದಿದ್ದರೆ ನೀವು ನರಕಕ್ಕೆ ಹೋಗುವಿರಿ ಎಂದು ಕೃಷ್ಣ ಹೇಳುತ್ತಾನೆ. (ಭಗವಾನ್ ಶ್ರೀ ಕೃಷ್ಣನು ಹೀಗೆ ಎಲ್ಲಿಯೂ ಹೇಳಿಲ್ಲ ಆದರೂ ಸುಳ್ಳು ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ನೋವನ್ನುಂಟುಮಾಡುವವರ ವಿರುದ್ಧ ದೂರು ದಾಖಲಿಸಿ ಅವರನ್ನು ಜೈಲಿಗೆ ಕಳುಹಿಸಬೇಕು ! – ಸಂಪಾದಕರು)
೪. ಯಾರು ಹೀನನಾಗಿರುತ್ತಾರೋ ಅವರೇ ಹಿಂದೂಗಳಾಗಿದ್ದಾರೆ. ಹಿಂದೂ ಎಂದರೆ ಹೀನ ಎಂದರ್ಥವಾಗುತ್ತದೆ. ಯಾರೂ ಹಿಂದೂಗಳಾಗಿ ಉಳಿಯಬಾರದು. (ಯಾರು ಹೀನ ಗುಣಗಳನ್ನ ನಾಶ ಮಾಡುತ್ತಾನೋ ಅವನು ಹಿಂದೂ ಎಂದು ಹಿಂದೂ ವ್ಯಾಖ್ಯೆ ಇರುವಾಗ ಹಿಂದೂ ದ್ವೇಷಕ್ಕಾಗಿ ಸುಳ್ಳು ಪ್ರಚಾರ ಮಾಡುವ ಸಾಹಿತಿಗಳು ! -ಸಂಪಾದಕರು).
ಸಂಪಾದಕೀಯ ನಿಲುವುಭಾರತ ಜಾತ್ಯತೀತ ದೇಶವಾಗಿದೆ. ಭಾರತದಲ್ಲಿ ಎಲ್ಲಾ ರಾಜಕೀಯ ಪಕ್ಷ ಹಿಂದುಗಳಿಗೆ ಸರ್ವಧರ್ಮ ಸಮಭಾವದ ಪಾಲನೆ ಮಾಡಲು ಹೇಳುತ್ತವೆ ಮತ್ತು ಹಿಂದುಗಳು ಹಾಗೆಯೇ ವರ್ತಿಸುತ್ತಾರೆ ; ಆದರೆ ಆಪಾದಿತ ಜಾತ್ಯಾತೀತವಾದಿ ಮತ್ತು ಪ್ರಗತಿ(ಅಧೋಗತಿ)ಪರರು ಯಾವ ರೀತಿ ವರ್ತಿಸುತ್ತಾರೆ ಮತ್ತು ಎಂತಹ ವಿಚಾರಗಳನ್ನು ಹಬ್ಬಿಸುತ್ತಾರೆ ಎಂಬುದನ್ನು ಹಿಂದುಗಳು ಅರಿಯಬೇಕು ! |