ಸಂಸ್ಕೃತ ಕಲಿಯಲು ಇಸ್ರೇಲ್ ನಿಂದ ಕರ್ನಾಟಕಕ್ಕೆ ಬಂದ ವಿದ್ಯಾರ್ಥಿ ತಂಡ !

ಚಿಕ್ಕಮಗಳೂರು – ಸಂಸ್ಕೃತ ಕಲಿಯುವುದಕ್ಕಾಗಿ ಇಸ್ರೇಲ್ ನಿಂದ ವಿದ್ಯಾರ್ಥಿಗಳ ಒಂದು ತಂಡವು ಚಿಕ್ಕಮಗಳೂರಿಗೆ ಬಂದಿದೆ. ಇಸ್ರೇಲ್ ನಲ್ಲಿ ಜನಿಸಿರುವ ಈ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಆಚಾರ ವಿಚಾರಗಳ ಅಧ್ಯಯನ ಮಾಡುತ್ತಿದ್ದಾರೆ.

ವಾಲ್ಮೀಕಿ ರಾಮಾಯಣದಲ್ಲಿನ ಶ್ಲೋಕಗಳ ಅಧ್ಯಯನ !

ಚಿಕ್ಕಮಗಳೂರಿನ ಹಿರೇಮಗಳೂರು ಶ್ರೀ ಕೋದಂಡರಾಮ ದೇವಾಲಯದಲ್ಲಿ ಈ ವಿದ್ಯಾರ್ಥಿಗಳ ವಸತಿ ವ್ಯವಸ್ಥೆ ಮಾಡಲಾಗಿದೆ. ಸಂಸ್ಕೃತದಲ್ಲಿ ಪಿಹೆಚ್‌ಡಿ ಮಾಡಿರುವ ಇಸ್ರೇಲಿ ಪ್ರಾಧ್ಯಾಪಕ ರಫಿ ಅವರು ತಮ್ಮ ೬ ವಿದ್ಯಾರ್ಥಿಗಳ ಜೊತೆಗೆ ಇಲ್ಲಿಗೆ ಬಂದಿದ್ದಾರೆ. ಈ ವಿದ್ಯಾರ್ಥಿಗಳು ಇಸ್ರೇಲ್ ನಲ್ಲಿ ಕಲಾ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದು ಈಗ ಈ ತಂಡ ಹಿರೇಮಗಳೂರಿನಲ್ಲಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದ ಸುಂದರಕಾಂಡದಲ್ಲಿನ ಕೆಲವು ಶ್ಲೋಕಗಳನ್ನು ಕಲಿಯುತ್ತಿದ್ದಾರೆ.

ಸಂಸ್ಕೃತದಲ್ಲಿ ಸಂಭಾಷಣೆ ನಡೆಸಲು ಪ್ರಯತ್ನ !

ಸಂಸ್ಕೃತದ ಶಿಕ್ಷಣ ಪಡೆಯುತ್ತಿರುವ ಈ ವಿದ್ಯಾರ್ಥಿಗಳು ಸದ್ಯ ಸಂಪೂರ್ಣವಾಗಿ ಸಂಸ್ಕೃತದಲ್ಲಿ ಮಾತನಾಡಲು ಸಮರ್ಥರಾಗಿದ್ದಾದ್ದು ಭಾರತದ ಭವ್ಯ ಪರಂಪರೆಯಿಂದ ಪ್ರಭಾವಿತರಾಗಿದ್ದಾರೆ ಎಂದು ಶಿಕ್ಷಕ ವೈಷ್ಣವಿ ಅವರು ಹೇಳಿದರು.

ಸಂಪಾದಕೀಯ ನಿಲುವು

ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಸಂಸ್ಕೃತ ಕಲಿಯುತ್ತಾರೆ, ಹಾಗೂ ಭಾರತದಲ್ಲಿ ಕಾಂಗ್ರೆಸ್ಸಿನಂತ ಪಕ್ಷವು ಸಂಸ್ಕೃತವನ್ನು ‘ಮೃತ ಭಾಷೆ’ ಎಂದು ಹೇಳಿ ಅದನ್ನು ಅಂತಗೊಳಿಸುವ ಪ್ರಯತ್ನ ಮಾಡುತ್ತವೆ ಎಂಬುದು ಅಸಮಾಧಾನಕರ ವಿಷಯ !