‘ಲವ್ ಜಿಹಾದ್’ಗೆ ವಿದೇಶಗಳಿಂದ ಆರ್ಥಿಕ ಸಹಾಯ ! – ಬರೇಲಿ (ಉತ್ತರ ಪ್ರದೇಶ) ತ್ವರಿತ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ

  • ಬರೇಲಿ (ಉತ್ತರ ಪ್ರದೇಶ) ತ್ವರಿತ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ ಅವರ ಸ್ಪಷ್ಟನೆ.

  • ಲವ್ ಜಿಹಾದ್ ಬಗ್ಗೆ ವ್ಯಾಖ್ಯಾನ

  • ಲವ್ ಜಿಹಾದ್‌ ಆರೋಪಿಗೆ ಜೀವಾವಧಿ ಶಿಕ್ಷೆ

ಬರೇಲಿ (ಉತ್ತರ ಪ್ರದೇಶ) – ಜನಸಂಖ್ಯೆಯಲ್ಲಿ ಬದಲಾವಣೆ ಮಾಡುವುದು ಮತ್ತು ಅಂತರರಾಷ್ಟ್ರೀಯ ಸ್ಥರದಲ್ಲಿ ಸಂಚಲನ ಮೂಡಿಸುವುದು ‘ಲವ್ ಜಿಹಾದ್’ ನ ಮುಖ್ಯ ಉದ್ದೇಶವಾಗಿದೆ. ಧಾರ್ಮಿಕ ಗುಂಪುಗಳು ಕಟ್ಟರವಾದಿ ಗುಂಪುಗಳಿಂದ ಪ್ರೇರೇಪಿಸಲ್ಪಟ್ಟಿವೆ. ಮುಸ್ಲಿಮೇತರ ಮಹಿಳೆಯರನ್ನು ಮೋಸದ ವಿವಾಹದ ಮೂಲಕ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ. ‘ಲವ್ ಜಿಹಾದ್ ಗೆ ವಿದೇಶಿ ಆರ್ಥಿಕ ನೆರವು ಸಿಗುತ್ತಿರುವುದರಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ’ ಎಂದು ಹೇಳುತ್ತಾ, ತ್ವರಿತ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ರವಿಕುಮಾರ ದಿವಾಕರ ಅವರು ‘ಲವ್ ಜಿಹಾದ್’ ಪ್ರಕರಣದ ಆರೋಪಿ ಮಹಮ್ಮದ್ ಆಲಿಂ ಎಂಬವನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದಾರೆ. 42 ಪುಟಗಳ ಆದೇಶದಲ್ಲಿ ‘ಲವ್ ಜಿಹಾದ್’ನ ಸ್ವರೂಪ, ಉದ್ದೇಶ ಮತ್ತು ಅದಕ್ಕೆ ಸಿಗುವ ಧನಸಹಾಯವನ್ನು ಕೂಡ ನ್ಯಾಯಾಧೀಶರು ಸ್ಪಷ್ಟಗೊಳಿಸಿದ್ದಾರೆ.

ನ್ಯಾಯಾಧೀಶ ರವಿಕುಮಾರ ದಿವಾಕರ ಅವರು ತೀರ್ಪು ನೀಡುವಾಗ ಹೇಳಿದ್ದು,

1. ಇದು ಲವ್ ಜಿಹಾದ್ ಮೂಲಕ ನಡೆದ ಅಕ್ರಮ ಮತಾಂತರದ ಪ್ರಕರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮೊದಲನೆಯದಾಗಿ, ‘ಲವ್ ಜಿಹಾದ್’ ಎಂದರೇನು? ಎಂದು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಲವ್ ಜಿಹಾದ್ ನಲ್ಲಿ ಒಂದು ನಿರ್ದಿಷ್ಟ ಸಮಾಜದ ಪುರುಷರು ಇನ್ನೊಂದು ಸಮಾಜದ ಮಹಿಳೆಯರನ್ನು ವಿವಾಹವಾಗಿ ಆ ಮೂಲಕ ತಮ್ಮ ಧರ್ಮವನ್ನು ಸ್ವೀಕರಿಸುವಂತೆ ವ್ಯವಸ್ಥಿತವಾಗಿ ಪ್ಲಾನ್ ಮಾಡುತ್ತಾರೆ. ಒಂದು ನಿರ್ದಿಷ್ಟ ಸಮಾಜದ ಈ ಜನರು, ಪ್ರೀತಿಯ ನೆಪದಿಂದ ಮತಾಂತರಗೊಳಿಸಲು ಮಹಿಳೆಯರೊಂದಿಗೆ ವಿವಾಹವಾಗುತ್ತಾರೆ. ಆದರೆ ಈ ಮದುವೆ ಸುಳ್ಳಿನ ಆಧಾರದ ಮೇಲಿರುತ್ತದೆ.

2. ಲವ್ ಜಿಹಾದ್ ಮೂಲಕ ಮಹಿಳೆಯರ ಅಕ್ರಮ ಮತಾಂತರವನ್ನು ಕೆಲವು ಕಟ್ಟರವಾದಿ ವ್ಯಕ್ತಿಗಳ ಮೂಲಕ ಮಾಡಲಾಗುತ್ತದೆ. ಈ ಜನರು ಒಂದೋ ಇಂತಹ ಕೃತ್ಯಗಳಲ್ಲಿ ಮುಳುಗಿರುತ್ತಾರೆ ಅಥವಾ ಅವರಿಗೆ ಬೆಂಬಲ ಸಿಗುತ್ತಿರುತ್ತದೆ. ಆದಾಗ್ಯೂ ಈ ಕೃತ್ಯವು ಸಂಪೂರ್ಣ ಧಾರ್ಮಿಕ ಸಮುದಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

3. ‘ಲವ್ ಜಿಹಾದ್’ ಪ್ರಕ್ರಿಯೆಯಲ್ಲಿ ಉಪಯೋಗಿಸಲಾಗುವ ಹಣವು ವಿದೇಶದಿಂದ ಪೂರೈಕೆಯಾಗುತ್ತದೆ.

4. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತೆ ಭಾರತವನ್ನು ಅಸ್ಥಿರಗೊಳಿಸುವ ಸಂಚನ್ನು ರೂಪಿಸಲಾಗಿದೆ. ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವ ಇವುಗಳಿಗೆ ಇದು ಅಪಾಯಕಾರಿಯಾಗಿದೆ.

ಏನಿದು ಪ್ರಕರಣ?

ಆರೋಪಿ ಮಹಮ್ಮದ್ ಆಲಿಂ ಇವನು 2022 ರಲ್ಲಿ ತನ್ನ ಹೆಸರು ಆನಂದ ಎಂದು ಹೇಳಿ ಸಂತ್ರಸ್ತೆಗೆ ಮೋಸಗೊಳಿಸಿದನು ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಅವಳ ಮೇಲೆ ಬಲಾತ್ಕಾರ ಮಾಡಿದನು. ನಂತರ ಆಕೆಯ ಛಾಯಾಚಿತ್ರ ಮತ್ತು ವಿಡಿಯೋ ತಯಾರಿಸಿ, ಅವಳ ಮಾನಹಾನಿ ಮಾಡುವ ಬೆದರಿಕೆ ಹಾಕಿ ಅನೇಕ ಸಾರಿ ಅವಳ ಮೇಲೆ ಬಲಾತ್ಕಾರ ಮಾಡಿದನು. ಮೇ 2023ರಲ್ಲಿ ಈ ವಿಷಯ ಬೆಳಕಿಗೆ ಬಂದಿತು.

ನ್ಯಾಯಾಧೀಶ ರವಿಕುಮಾರ ದಿವಾಕರ ಯಾರು?

ನ್ಯಾಯಾಧೀಶ ರವಿಕುಮಾರ ದಿವಾಕರ ಅವರು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿರುವಾಗ ಕಾಶಿ ವಿಶ್ವನಾಥ ಮಂದಿರದ ಬಳಿ ಇರುವ ಜ್ಞಾನವಾಪಿಯ ವೀಡಿಯೊಗ್ರಾಫಿಕ್ ಸಮೀಕ್ಷೆಯನ್ನು ನಡೆಸುವ ಮತ್ತು ಅಲ್ಲಿನ ವಜುಖಾನಾಗೆ (ಮಸೀದಿಯಲ್ಲಿ ನಮಾಜ ಪಠಣದ ಮೊದಲು ಕೈಕಾಲು ತೊಳೆಯುವ ಸ್ಥಳ) ಬೀಗ ಹಾಕುವಂತೆ 2022 ರಲ್ಲಿ ತೀರ್ಪು ನೀಡಿದ್ದರು.

ಸಂಪಾದಕೀಯ ನಿಲುವು

ಲವ್ ಜಿಹಾದ್ ಇದೆಯೆಂದು ಒಪ್ಪಿಕೊಂಡು ಅದರ ವ್ಯಾಖ್ಯಾನ ಮಾಡಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೇಶದ ಇದು ಮೊದಲ ನ್ಯಾಯಾಲಯವಾಗಿದೆ. ಕಾನೂನಿನ ಚೌಕಟ್ಟಿನಲ್ಲಿದ್ದು ಇಂತಹ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿದ್ದರೆ ಈ ಹಿಂದೆ ಬೆಳಕಿಗೆ ಬಂದಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಏಕೆ ಕೈಗೊಳ್ಳಲಿಲ್ಲ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.