‘ಸನಾತನ ರಕ್ಷಕ ದಳ’ದಿಂದ ವಾರಣಾಸಿಯಲ್ಲಿ 10 ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳ ತೆರವು

ವಾರಣಾಸಿ (ಉತ್ತರ ಪ್ರದೇಶ) – ಸನಾತನ ರಕ್ಷಕ ದಳದ ಕಾರ್ಯಕರ್ತರು ಇಲ್ಲಿನ 10 ದೇವಸ್ಥಾನಗಳಿಂದ ಸಾಯಿಬಾಬಾರ ಮೂರ್ತಿಗಳನ್ನು ತೆಗೆದಿದ್ದಾರೆ. ಕಾರ್ಯಕರ್ತರು ಮೂರ್ತಿಗಳ ಮೇಲೆ ಬಟ್ಟೆ ಹೊದಿಸಿ ದೇವಸ್ಥಾನದಿಂದ ಹೊರ ತೆಗೆದರು. ಇದರಲ್ಲಿ ಪ್ರಸಿದ್ಧ ಗಣೇಶ ದೇವಾಲಯ ಮತ್ತು ಪುರುಷೋತ್ತಮ ದೇವಾಲಯ ಇವುಗಳ ಸಮಾವೇಶ ಇದೆ. ಇದರಿಂದ ಕಾಶಿಯಲ್ಲಿ ವಿವಾದ ಸೃಷ್ಟಿಯಾಗಿದೆ. ಇದನ್ನು’ ಸನಾತನ ರಕ್ಷಕ ದಳವು ಉದ್ದೇಶಪೂರ್ವಕವಾಗಿ ಮಾಡುತ್ತಿದೆ’, ಎಂದು ಸಮಾಜವಾದಿ ಪಕ್ಷವು ಆರೋಪಿಸಿದೆ. ಇದರೊಂದಿಗೆ ಇನ್ನೂ ಕೆಲವು ನಾಯಕರು ಈ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದಾರೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ ದೇವಸ್ಥಾನದಲ್ಲಿ ಮಾನವರ ವಿಗ್ರಹಗಳನ್ನು ಪೂಜಿಸಬಾರದು! – ಸನಾತನ ರಕ್ಷಕ ದಳ

ಸನಾತನ ರಕ್ಷಕ ದಳದ ಹೇಳಿಕೆ ಪ್ರಕಾರ, ಶಾಸ್ತ್ರಗಳಲ್ಲಿ ಹಳಿದಂತೆ ಹಿಂದೂ ದೇವಾಲಯಗಳಲ್ಲಿ ಪೂಜೆಯನ್ನು ಮಾಡಬೇಕು. ಯಾವುದೇ ಮನುಷ್ಯರ ವಿಗ್ರಹಗಳನ್ನು ದೇವಾಲಯಗಳಲ್ಲಿ ಇಟ್ಟು ಪೂಜಿಸಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ನಾವು ಈ ವಿಗ್ರಹಗಳನ್ನು ತೆಗೆಯುತ್ತಿದ್ದೇವೆ; ಆದರೆ ನಾವು ಸಾಯಿಬಾಬಾರ ವಿರೋಧಿ ಅಲ್ಲ. ನಾವು ಈ ವಿಗ್ರಹಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದಿದ್ದಾರೆ. ಬಾಗೇಶ್ವರ ಧಾಮ ಸರಕಾರ್ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಇವರೂಸಹ ಕೆಲ ದಿನಗಳ ಹಿಂದೆ ‘ಸಾಯಿಬಾಬಾರ ಪೂಜೆ ಮಾಡಬೇಡಿ’ ಎಂದು ಹೇಳಿದ್ದರು ಎಂದು ಹೇಳಿದರು.