ಭಾರತದಲ್ಲಿನ ‘ಜಿ-20’ ಸಭೆಗೆ ಪಾಕಿಸ್ತಾನಕ್ಕೆ ಆಮಂತ್ರಣ ಸಿಗದಿದ್ದರಿಂದ ಅಲ್ಲಿಯ ನಾಗರೀಕರಿಂದಲೇ ಕಂಗೆಂಣ್ಣಿಗೆ ಗುರಿಯಾದ ಪಾಕಿಸ್ತಾನ !
ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದಲ್ಲಿ ನಡೆಯುತ್ತಿರುವ ೨ ದಿನದ ‘ಜಿ-20’ ಸಭೆಗೆ ಜಗತ್ತಿನಾದ್ಯಂತ ೨೮ ದೇಶದ ಮುಖ್ಯಸ್ಥರು ಉಪಸ್ಥಿತರಿದ್ದಾರೆ. ಭಾರತದಿಂದ ಸುಯೋಹಿತವಾಗಿ ಈ ಸಭೆಯ ಆಯೋಜನೆ ಮಾಡಿರುವುದರಿಂದ ಅನೇಕ ದೇಶಗಳು ಶ್ಲಾಘಿಸುತ್ತಿದ್ದೂ ಭಾರತದ ನೆರೆಯ ಮತ್ತು ಶತ್ರು ರಾಷ್ಟ್ರ ಪಾಕಿಸ್ತಾನದ ನಾಗರೀಕರು ಮಾತ್ರ ತಮ್ಮ ದೇಶವನ್ನೆ ಟೀಕಿಸುತ್ತಿದೆ. ಪಾಕಿಸ್ತಾನದಲ್ಲಿ ಒಂದು ‘ಯೂಟ್ಯೂಬ್ ಚಾನೆಲ್’ ‘ರಿಯಲ್ ಎಂಟರ್ಟೈನ್ಮೆಂಟ್’ ನಲ್ಲಿ ಒಂದು ವಿಡಿಯೋ ಪ್ರಸಾರ ಮಾಡಲಾಗಿದೆ. ಈ ವಿಡಿಯೋದಲ್ಲಿ ನಿರೂಪಕ ಜನರಿಗೆ, ‘ಭಾರತ ಇಷ್ಟ ಪ್ರಗತಿ ಸಾಧಿಸಿದೆ ಮತ್ತು ಪಾಕಿಸ್ತಾನ ಹಿಂದೆ ಏಕೆ ಉಳಿದಿದೆ ? ಎಂದು ಪ್ರಶ್ನಿಸಿದಾಗ ಈ ಬಗ್ಗೆ ಪಾಕಿಸ್ತಾನದ ಜನರು ಬೇರೆಬೇರೆ ಉತ್ತರ ನೀಡಿದ್ದಾರೆ. ಒಬ್ಬನು, ‘ನಮಗೆ ಬಹಳ ನಾಚಿಕೆ ಎನಿಸುತ್ತಿದೆ ಏಕೆಂದರೆ ನಾವು (ಪಾಕಿಸ್ತಾನ) ಪರಮಾಣು ಅಸ್ತ್ರ ಹೊಂದಿದ ದೇಶವಾಗಿದ್ದರೂ ಭಾರತ ನಮಗೆ ಈ ಸಭೆಗೆ ಆಹ್ವಾನ ನೀಡಲಿಲ್ಲ; ಆದರೆ ಬಾಂಗ್ಲಾದೇಶಕ್ಕೆ ಆಮಂತ್ರಣ ನೀಡಿದೆ ಎಂದು ಹೇಳಿದನು.
Pakistan: जी20 के भव्य आयोजन को देख तिलमिलाए पाकिस्तानी, बोले- ‘हम परमाणु शक्ति, हमें ही नहीं बुलाया!’#G20SummitDelhi #G20India2023 #G20India #Pakistan #NuclearPower #PakistanEconomicCrisishttps://t.co/ZfohOMWJuc
— Amar Ujala (@AmarUjalaNews) September 9, 2023
೧. ಒಬ್ಬನು, ಪಾಕಿಸ್ತಾನ ತಪ್ಪಿ ಸ್ವತಂತ್ರವಾಗಿದೆ. ಆ ಸಮಯದಲ್ಲಿ ಜನರು ವಿಭಜನೆಗೆ ವಿರೋಧಿಸಿದ್ದರು, ಅದು ಯೋಗ್ಯವೇ ಆಗಿತ್ತು ಎಂದು ಹೇಳಿದ.
೨. ಇನ್ನೊಬ್ಬನು, ‘ಭಾರತ ನಮಗಿಂತಲೂ ಬಹಳ ಮುಂದೆ ಹೋಗಿದೆ. ಭಾರತದಲ್ಲಿನ ಕಾಶ್ಮೀರದ ಜನರಿಗೂ ನಮ್ಮ ದೇಶದ ಜನರಿಗಿಂತಲೂ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಅವರ ಜೊತೆಗೆ ನಮ್ಮ ತುಲನೆ ಆಗಲು ಸಾಧ್ಯವಿಲ್ಲ’, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ.
पाकिस्तान जी20 का हिस्सा क्यों नहीं है? क्या कभी जी20 में शामिल हो सकता है पाकिस्तान? #G20 #G20Summit #Pakistanhttps://t.co/IMxBan6kad
— ABP News (@ABPNews) September 9, 2023
೩. ಇನ್ನೊಬ್ಬನು, ಪಾಕಿಸ್ತಾನ ಹಸಿವೆಯಿಂದ ಕಂಗಾಲಾಗಿರುವ ದೇಶವಾಗಿದ್ದು ಇಂತಹ ದೇಶಗಳ ಜೊತೆಗೆ ಯಾರು ಸಂಬಂಧ ಹೊಂದುವುದಿಲ್ಲ. ಪ್ರತಿಯೊಬ್ಬರಿಗೂ, ಪಾಕಿಸ್ತಾನ ಅವರ ಬಳಿ ಹಣ ಕೇಳಲು ಬಂದಿದೆ ಎಂದು ಅನಿಸುತ್ತಿದೆ ಎಂದು ಹೇಳಿದ.
೪. ಮಾಜಿ ಪ್ರಧಾನಮಂತ್ರಿ ಇಮ್ರಾಂ ಖಾನನ ಬೆಂಬಲಿಗನು, ‘ಇಮ್ರಾನ್ ಖಾನ ಏನಾದ್ರೂ ಪ್ರಧಾನಮಂತ್ರಿ ಆಗಿದ್ದರೆ, ಪಾಕಿಸ್ತಾನದಲ್ಲಿ ಕೂಡ ‘ಜಿ-20′ ಸಭೆ ನಡೆಯಬಹುದಿತ್ತು.’ ಎಂದು ಹೇಳಿದ ಇದರ ಬಗ್ಗೆ ಅವನಿಗೆ ನಿರೂಪಕನು, ಪಾಕಿಸ್ತಾನ ಈ ಸಭೆಯ ಸದಸ್ಯವಾಗಿಲ್ಲ ಆದ್ದರಿಂದ ಅದು ಸಾಧ್ಯವಿಲ್ಲ ಎಂದು ಹೇಳಿದ.