೨೫೦ ಕೋಟಿ ರೂಪಾಯಿಯ ಕೌಶಲ್ಯ ಅಭಿವೃದ್ಧಿ ಹಗರಣದ ಪ್ರಕರಣ
ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲಗು ದೇಸಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ರವರನ್ನು ಸೆಪ್ಟ್ಂಬರ್ ೯ ರ ಮುಂಜಾನೆ ಕೌಶಲ್ಯ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಯಿತು, ತಡರಾತ್ರಿ ಅವರಿಗೆ ಬಂಧನದ ವಾರೆಂಟ್ ಜಾರಿಯಾಗಿತ್ತು, ಆನಂತರ ಚಂದ್ರಬಾಬುರವರ ಕಾರ‍್ಯಕರ್ತರು ಅವರ ಬಂಧನವನ್ನು ವಿರೋಧಿಸಿದರು; ಆದರೆ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಲಾಯಿತು, ೨೦೨೧ ರಲ್ಲಿ ಚಂದ್ರಬಾಬು ನಾಯ್ಡು ವಿರುದ್ಧ ಕೌಶಲ್ಯ ವಿಕಾಸ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ದೂರನ್ನು ದಾಖಲಿಸಲಾಗಿತ್ತು, ೨೫೦ ಕೋಟಿ ರೂಪಾಯಿಗಳ ಹಗರಣದಲ್ಲಿ ಚಂದ್ರಬಾಬು ನಾಯ್ಡು ಮೊದಲನೇ ಆರೋಪಿಯಾಗಿದ್ದಾರೆ. ಅವರ ಮೇಲೆ ಹೇರಲಾಗಿರುವ ಕಲಂಗಳು ಜಾಮೀನುರಹಿತವಾಗಿವೆ,
ಇಡೀ ರಾತ್ರಿ ಡ್ರಿಲ್.. ಚಂದ್ರಬಾಬು ನಾಯ್ಡು ಸುಸ್ತು! | Former CM Chandrababu Naidu Arrested | Vistara News #vistaranews #chandrababunaidu #chandrababunaidulive pic.twitter.com/iT4ySpFZXS
— Vistara News (@VistaraNews) September 9, 2023
ಸಂಪಾದಕೀಯ ನಿಲುವುಮೋಸಗಾರರನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸುವುದು ಅವಶ್ಯಕ ! |