ಅವಧಿ ಮುಕ್ತಾಯದ ಬಳಿಕ ಉಪಕರಣವನ್ನು ಗುಜರಿಗೆ ವಿಲೇವಾರಿ ಮಾಡಬೇಕಾಗುತ್ತದೆ ! – ಕೇಂದ್ರ ಸರಕಾರ

  • ಗೃಹೋಪಯೋಗಿ ವಸ್ತುಗಳ ಕಾಲಾವಕಾಶ ನಿಗದಿ ಪಡಿಸಿದ ಕೇಂದ್ರ ಸರಕಾರದ !

  • ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಲ್ಯಾಪ್ ಟಾಪ್, ಮೊಬೈಲ್, ಕಂಪ್ಯೂಟರ್, TV ಸೆಟ್ ಇತ್ಯಾದಿಗಳು ಸೇರಿವೆ !

ನವ ದೆಹಲಿ – ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯವು 134 ವಿದ್ಯುತ್ ಉಪಕರಣಗಳ ಬಳಕೆಯ ಅವಧಿಯನ್ನು ನಿಗದಿಪಡಿಸಿದೆ. ಈ ಅವಧಿ ಮುಗಿದ ನಂತರ, ಈ ವಸ್ತುಗಳನ್ನು ‘ಇ-ತ್ಯಾಜ್ಯ’ (ಇ-ವೇಸ್ಟ) ಎಂದು ನಿರ್ಧರಿಸಿ ನಾಶಪಡಿಸಲು ಆದೇಶಿಸಿದೆ. ಈ ಅವಧಿಯ ಮುಕ್ತಾಯದ ನಂತರ, ಗ್ರಾಹಕರು ಸರಕುಗಳನ್ನು ಜಮೆ ಮಾಡಿ ಆ ರೀತಿ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಈ ಉಪಕರಣಗಳಲ್ಲಿ ವಾಶಿಂಗ ಮಶೀನ, ರೆಫ್ರಿಜರೇಟರ್, ಲ್ಯಾಪ್ ಟಾಪ್, ಮೊಬೈಲ್, ಕಂಪ್ಯೂಟರ್, TV ಸೆಟಗಳು ಇತ್ಯಾದಿಗಳನ್ನು ಒಳಗೊಂಡಿವೆ. ಮೊದಲ ಇ-ತ್ಯಾಜ್ಯ ವಿಲೇವಾರಿ ಅಥವಾ ಸಂಸ್ಕರಣಾ ಯೋಜನೆಯನ್ನು ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸ್ಥಾಪಿಸಲಾಗಿದೆ. ಈ ಯೋಜನೆಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಭೋಪಾಲ್ ಸ್ಥಳೀಯ ಆಡಳಿತ ನಡೆಸುತ್ತಿದೆ.

ಕೇಂದ್ರ ಸರಕಾರವು ದೇಶದಲ್ಲಿ ಇ-ತ್ಯಾಜ್ಯ ವಿಲೇವಾರಿಗಾಗಿ ಎಪ್ರಿಲ್ 1, 2023 ರಂದು ಕಾಯಿದೆಯನ್ನು ಅಂಗೀಕರಿಸಿದೆ. ಇದರ ಪ್ರಕಾರ ಇ-ತ್ಯಾಜ್ಯ ಉತ್ಪಾದಿಸುವ ವ್ಯಕ್ತಿಯೇ ಅದನ್ನು ವಿಲೇವಾರಿ ಮಾಡಬೇಕಾಗಿದೆ. ಕಂಪನಿಯಿಂದ ತಯಾರಿಸಿದ ವಾಷಿಂಗ್ ಮಷೀಂಗ್ ಗೆ 10 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ವಾಷಿಂಗ್ ಮಷೀಂಗ್ ನ ಹೊಸ ಆವೃತ್ತಿಯನ್ನು ತಯಾರಿಸಲು, ಕಂಪನಿಗೆ 10 ವರ್ಷಗಳ ಹಿಂದೆ ತಯಾರಿಸಿದ ಶೇ. 60 ರಷ್ಟು ವಾಷಿಂಗ್ ಮಷೀಂಗ್ ಗಳನ್ನು ನಾಶಪಡಿಸಿರುವ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ. ಈ ನಿಯಮದ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆ ಆಗಬಹುದು. ಈ ಕಾರಣದಿಂದಾಗಿ, ಈ ಸಾಧನಗಳನ್ನು ಬಳಸುವ ಗ್ರಾಹಕರು ಅವಧಿ ಮುಕ್ತಾಯವಾದ ಬಳಿಕ ಈ ಉಪಕರಣಗಳನ್ನು ಗುಜರಿಗೆ ವಿಲೇವಾರಿ ಮಾಡಬೇಕಾಗುತ್ತದೆ.

ಸಲಕರಣೆಗಳು  ಅವುಗಳ ಅವಧಿ
ಫ್ರಿಜ್ 10 ವರ್ಷ
ಸೀಲಿಂಗ್ ಫ್ಯಾನ್ 10 ವರ್ಷ
ವಾಶಿಂಗ್ ಮಶೀನ್ 10 ವರ್ಷ
ರೆಡಿಯೋ ಸೆಟ್ 8  ವರ್ಷ
ಸ್ಮಾರ್ಟ್ ಫೋನ್/ ಲ್ಯಾಪ್ ಟಾಪ್ 5 ವರ್ಷ
ಟ್ಯಾಬ್ ಲೆಟ್/ಐಪೇಡ್ 5 ವರ್ಷ
ಸ್ಯಾನರ್ 5 ವರ್ಷ