ಮೊರಾಕ್ಕೊದಲ್ಲಿ ಪ್ರಬಲ ಭೂಕಂಪ ನೂರಾರು ಸಾವು !

ರಬಾತ (ಮೊರಾಕ್ಕೊ) – ಆಫ್ರಿಕಾ ಖಂಡದ ಮೊರಾಕ್ಕೊದಲ್ಲಿ ಸೆಪ್ಟಂಬರ್ ೯ ರ ಬೆಳಗ್ಗೆ ೬,೮ ರಿಕ್ಟರ್ ನಷ್ಟು ಪ್ರಬಲ ಭೂಕಂಪವಾಗಿ ೮೨೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಹಾಗೆಯೇ ೧೫೩ ಜನ ಗಾಯಗೊಂಡಿದ್ದಾರೆ, ಈ ಭೂಕಂಪದಲ್ಲಿ ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ, ಭೂಕಂಪದ ಕೇಂದ್ರಬಿಂದು ಮೊರೊಕ್ಕಾದ ಮಾರಕೇಶ ಪಟ್ಟಣದಿಂದ ಸುಮಾರು ೭೦ ಕಿ,ಮಿ, ದೂರದಲ್ಲಿತ್ತು.

ಪ್ರಧಾನಿಮೋದಿಯಿಂದ ಸಂತಾಪ

ಪ್ರಧಾನಿ ಮೋದಿಯವರು ಮೊರಾಕ್ಕೊದಲ್ಲಿಯ ಭೂಕಂಪದ ಬಗ್ಗೆ ಟ್ಟೀಟ್ ಮಾಡಿ, ಮೊರೊಕ್ಕೊದಲ್ಲಿ ಭೂಕಂಪದಿಂದ ಅಪಾರ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಈ ವಾರ್ತೆ ಕೇಳಿ ದುಃಖವಾಗಿದೆ, ಈ ದುಃಖದ ಸಂದರ್ಭದಲ್ಲಿ ಮೊರಾಕ್ಕೊದ ಜನರೊಂದಿಗೆ ಸಹಭಾಗಿಯಾಗಿರುವೆ, ಈ ಕಷ್ಟದ ಸಮಯದಲ್ಲಿ ಮೊರಾಕ್ಕೊಗೆ ಎಲ್ಲ ರೀತಿಯ ನೆರವು ನೀಡಲು ಭಾರತ ಬದ್ಧವಾಗಿದೆ ಎಂದು ಹೇಳಿದ್ದಾರೆ.