ತೆಲ್ ಅವಿವ – ಇಸ್ರೇಲಿ ಪಡೆಗಳು ಲೆಬನಾನ್ ಗೆ ನುಗ್ಗಿವೆ. ಇಸ್ರೇಲ್ ರಕ್ಷಣಾ ಪಡೆಯು (ಐ.ಡಿ.ಎಫ್.) ಅಕ್ಟೋಬರ್ 1 ರಂದು ಬೆಳಿಗ್ಗೆ ಈ ಮಾಹಿತಿಯನ್ನು ನೀಡಿದೆ. ಐ.ಡಿ.ಎಫ್. ಸೆಪ್ಟೆಂಬರ್ 30 ರ ರಾತ್ರಿ ದಕ್ಷಿಣ ಲೆಬನಾನ್‌ನಲ್ಲಿ ಹಿಜಬುಲ್ಲಾದ ಸ್ಥಾನಗಳು ಮತ್ತು ಮೂಲಸೌಕರ್ಯಗಳನ್ನು ನಾಶಮಾಡಲು ಗಡಿ ಭಾಗದ ಗ್ರಾಮಗಳಲ್ಲಿ ಸೀಮಿತ ಮಿಲಿಟರಿ ಕಾರ್ಯಾಚರಣೆಯನ್ನುಪ್ರಾರಂಭಿಸಿದೆ.
ಗಡಿಯ ಸಮೀಪದಿಂದ ಹಿಜಬುಲ್ಲಾವು ಇಸ್ರೇಲ್ ಮೇಲೆ ದಾಳಿ ಮಾಡುತ್ತದೆ. ಹಿಜಬುಲ್ಲಾ ಮೇಲೆ ಈ ರೀತಿಯಾಗಿ ದಾಳಿ ಮಾಡಲು ಸೈನಿಕರಿಗೆ ತರಬೇತಿ ನೀಡಲಾಗಿತ್ತು. ಇದಕ್ಕೆ ಪ್ರತ್ಯುತ್ತರವೆಂದು ಇಸ್ರೇಲಿ ಸೈನಿಕರು ಗುಪ್ತ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರಲ್ಲಿ ಇಸ್ರೇಲಿ ವಾಯುಪಡೆಯು ಸೇನೆಗೆ ಬೆಂಬಲ ನೀಡುತ್ತಿದೆ. 2006ರ ನಂತರ ಇಸ್ರೇಲಿ ಪಡೆಗಳು ಲೆಬನಾನ್ ನಲ್ಲಿ ಪ್ರವೇಶಿಸಿರುವುದು ಇದೇ ಮೊದಲಬಾರಿಯಾಗಿದೆ. ಈ ಸಂದರ್ಭದಲ್ಲಿ ಇಸ್ರೇಲ್ ಮತ್ತು ಹಿಜಬುಲ್ಲಾ ನಡುವೆ 33 ದಿನಗಳ ಯುದ್ಧ ನಡೆಯಿತು. ಇದರಲ್ಲಿ 1 ಸಾವಿರದ 100 ಕ್ಕೂ ಹೆಚ್ಚು ಲೆಬನಾನಿಗಳು ಕೊಲ್ಲಲ್ಪಟ್ಟರು ಹಾಗೂ 165 ಇಸ್ರೇಲಿಗಳ ಸಾವನ್ನಪ್ಪಿದರು.