ಗಿಲಗಿಟ-ಬಾಲ್ಟಿಸ್ತಾನದಲ್ಲಿ ಭಾರತದ ರಾಷ್ಟ್ರ ಧ್ವಜ ಹಾರಾಟ : ಜನರಿಂದ ಪಾಕಿಸ್ತಾನ ಮುರ್ದಾಬಾದ್ ಘೋಷಣೆ

ಇಸ್ಲಾಮಾಬಾದ – ಗಿಲಗಿಟ-ಬಾಲ್ಟಿಸ್ತಾನದ ಜನರು ಈಗ ಪಾಕಿಸ್ತಾನದ ಜೊತೆಗೆ ಇರಲು ಸಾಧ್ಯವಿಲ್ಲ. ಕಳೆದ ಅನೇಕ ದಿನಗಳಿಂದ ಅವರು ಬೀದಿಗೆ ಇಳಿದು ಪಾಕಿಸ್ತಾನದ ಸರಕಾರವನ್ನು ನಿಷೇಧಿಸುತ್ತಿದ್ದಾರೆ. ಪ್ರತಿಭಟನಾಕಾರರು ‘ಪಾಕಿಸ್ತಾನ ಮುರ್ದಾಬಾದ’ ಎಂದು ಘೋಷಣೆ ನೀಡುತ್ತಿದ್ದು ಅನೇಕ ನಾಗರೀಕರು ತಮ್ಮ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಪಾಕಿಸ್ತಾನವು ಗಿಲಗಿಟ-ಬಾಲ್ಟಿಸ್ತಾನದಲ್ಲಿನ ಬಹಳಷ್ಟು ಭೂಮಿಯನ್ನು ಚೀನಾಗೆ ಗಣಿಗಾರಿಕೆಗಾಗಿ ನೀಡಿದೆ. ಆದ್ದರಿಂದ ಅಲ್ಲಿಯ ಜನರಿಗೆ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಪರಿಹಾರ ನೀಡದೆ ಅವರ ಭೂಮಿಗಳನ್ನು ಕಸಿದುಕೊಳ್ಳಲಾಗಿದೆ. ಗಿಲಗಿಟ-ಬಾಲ್ಟಿಸ್ತಾನದ ಜನರ ಜೀವನ ನರಕವಾಗಿದೆ. ಆದ್ದರಿಂದ ಅವರು ಪಾಕಿಸ್ತಾನದ ಸರಕಾರದ ಮೇಲೆ ಆಕ್ರೋಶಗೊಳ್ಳುತ್ತಿದ್ದು ಅವರಿಗೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಬೇಕಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಜನರು ಭಾರತದೊಂದಿಗೆ ಸೇರಿಸಲು ಆಗ್ರಹ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಜನರು ಅನೇಕ ದಿನಗಳಿಂದ ಪಾಕಿಸ್ತಾನ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ‘ಪಾಕಿಸ್ತಾನ ಮುರ್ದಾಬಾದ, ಹಿಂದೂಸ್ಥಾನ ಜಿಂದಾಬಾದ’ನ ಘೋಷಣೆಗಳನ್ನು ನೀಡುತ್ತಿದ್ದಾರೆ. ಅವರು ಭಾರತಕ್ಕೆ ಸೇರಲು ಒತ್ತಾಯಿಸುತ್ತಿದ್ದಾರೆ. ‘ಪಾಕಿಸ್ತಾನ ಸರಕಾರವು ಇಸ್ಲಾಂ ಹೆಸರಿನಲ್ಲಿ ನಮ್ಮನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು, ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಜನರು ಸರಕಾರಕ್ಕೆ ಕರೆ ನೀಡಿದ್ದಾರೆ.

(ಸೌಜನ್ಯ – News18 India)