ಏಕನಾಥ ಶಿಂದೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ !

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯದಲ್ಲಿ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಶಿವಸೇನೆಯಿಂದ ಬೇರ್ಪಟ್ಟ ನಾಯಕ ಏಕನಾಥ ಶಿಂದೆ ಅವರು ಜೂನ್ ೩೦ ರಂದು ಮಹಾರಾಷ್ಟ್ರದ ೩೦ ನೇ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ರೀತಿ ಉಪಮುಖ್ಯಮಂತ್ರಿ ಎಂದು ದೇವೇಂದ್ರ ಫಡಣವಿಸ ಇವರು ಪ್ರಮಾಣವಚನ ಸ್ವೀಕರಿಸಿದರು.

ಕಾಶ್ಮೀರಿ ಹಿಂದೂಗಳಿಗೆ ಮಹಾರಾಷ್ಟ್ರದ ಬಾಗಿಲು ಯವಾಗಲೂ ತೆರೆದಿರುತ್ತದೆ ! – ಆದಿತ್ಯ ಠಾಕರೆ

ಕಾಶ್ಮೀರಿ ಹಿಂದೂಗಳಿಗೆ ಮಹಾರಾಷ್ಟ್ರದ ಬಾಗಿಲು ಯವಾಗಲೂ ತೆರೆದಿರುತ್ತದೆ, ಎಂದು ಶಿವಸೇನೆಯ ನಾಯಕ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕರೆ ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳು ಮತ್ತು ಹಿಂದೂಗಳ ‘ಉದ್ದೇಶಿತ ಹತ್ಯೆ’ ಹಿನ್ನೆಲೆಯಲ್ಲಿ ಶಿವಸೇನಾ ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಚತುರ್ವೇದಿ ಕಾಶ್ಮೀರ ಕಣಿವೆಗೆ ಹೋಗಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದರು.

ಭಾಜಪ ಪ್ರವೇಶಿಸಿದ ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷ ರಾಧಾಕೃಷ್ಣನ್

ಶಿವಸೇನೆಯ ತಮಿಳುನಾಡು ರಾಜ್ಯಾಧ್ಯಕ್ಷರ ಶ್ರೀ. ರಾಧಾಕೃಷ್ಣನ್ ಇವರೊಂದಿಗೆ ಇತರ ಸದಸ್ಯರು ಭಾಜಪಗೆ ಪ್ರವೇಶ ಮಾಡಿದರು.