ಟ್ವಿಟರ್ ಕಾನೂನು ಪಾಲಿಸದಿದ್ದಲ್ಲಿ ಸರಕಾರವು ಕ್ರಮ ಕೈಗೊಳ್ಳಬಲ್ಲದು ! – ದೆಹಲಿ ಉಚ್ಚ ನ್ಯಾಯಾಲಯ
ಟ್ವಿಟರ್ ತಾನು ಮಾಹಿತಿ ಮತ್ತು ತಂತ್ರಜ್ಞಾನದ ಕಾನೂನನ್ನು ಪಾಲಿಸುತ್ತಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ಇನ್ನು ನಾವು ಟ್ವಿಟರ್ ಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲ. ಸರಕಾರವು ಟ್ವಿಟರ್ ಮೇಲೆ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸುವಾಗ ತಿಳಿಸಿದೆ.