ಕೊರೊನಾದ ಮೂರನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು ! – ತಜ್ಞರ ಅಂದಾಜು

ನವ ದೆಹಲಿ – ಭಾರತೀಯರು ಕೊರೊನಾದ ನಿಯಮಗಳನ್ನು ಪಾಲಿಸದಿದ್ದರೆ ಕೊರೊನಾದ ೩ ನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು; ಆದರೆ ಎರಡನೇ ಅಲೆಯಲ್ಲಿ ಪ್ರತಿದಿನ ಎಷ್ಟು ರೋಗಿಗಳ ಸಂಖ್ಯೆ ನಮೂದಾಗಿತ್ತೋ ಅದರ ತುಲನೆಯಲ್ಲಿ ಮೂರನೇ ಅಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೊರೊನಾದ ಕುರಿತು ಸರಕಾರಿ ಗುಂಪಿನ ವಿಜ್ಞಾನಿಯು ಹೇಳಿದ್ದಾರೆ. ಅಂದರೆ ಮೂರನೆಯ ಅಲೆಯಲ್ಲಿ ದೇಶದಲ್ಲಿ ಒಂದುವರೆಯಿಂದ ೨ ಲಕ್ಷ ಕೊರೋನಾ ರೋಗಿಗಳು ಕಂಡುಬರುವ ಸಾಧ್ಯತೆ ಇದೆ. ಆಗಸ್ಟ್ ಮಧ್ಯದ ತನಕ ಎರಡನೆ ಅಲೆ ನಗಣ್ಯವಾಗುವ ಸಾಧ್ಯತೆಯಿದೆ ನಿರೀಕ್ಷಿಸಲಾಗಿದೆ.