ಕೇರಳ ವಿಧಾನಸಭೆಯಲ್ಲಿ ಹಾನಿಯನ್ನುಂಟು ಮಾಡಿದ ಶಾಸಕರ ಮೇಲಿನ ಖಟ್ಲೆಯನ್ನು ಹಿಂಪಡೆಯಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

* ಇದರಿಂದ ನೀವು(ಶಾಸಕರು) ಜನರಿಗೆ ಯಾವ ಸಂದೇಶವನ್ನು ನೀಡುವವರಿದ್ದೀರಿ ? – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

* ವಿಧಾನಸಭೆಯಲ್ಲಿ ಗೂಂಡಾಗಳಂತೆ ವರ್ತಿಸುವ ಇಂತಹ ಶಾಸಕರಿಗೆ ಸರ್ವೋಚ್ಚ ನ್ಯಾಯಾಲಯವು ಕಠಿಣ ಶಿಕ್ಷೆಯನ್ನು ನೀಡಬೇಕು, ಎಂಬುದು ಜನರ ಅಪೇಕ್ಷೆಯಾಗಿದೆ !

ತಿರುವನಂತಪುರಮ್ (ಕೇರಳ) – ೨೦೧೫ ರಂದು ಕೇರಳ ವಿಧಾನಸಭೆಯಲ್ಲಿ ಲೆಫ್ಟ ಡೆಮೊಕ್ರೆಟಿಕ್ ಫ್ರಂಟ್‍ನ (ಎಲ್.ಡಿ.ಎಫ್.ನ) ಶಾಸಕರಿಂದ ಆಗಿದ್ದ ಹಾನಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಅವರ ಮೇಲಿನ ಖಟ್ಲೆಯನ್ನು ಹಿಂಪಡೆಯುವಂತೆ ಆದೇಶಿಸುವುದನ್ನು ನಿರಾಕರಿಸಿದೆ. ಈ ಬಗ್ಗೆ ಮುಂದಿನ ಆಲಿಕೆ ಜುಲೈ ೧೫ ರಂದು ನಡೆಯಲಿದೆ. ನ್ಯಾಯಾಲಯವು, ‘ಇದೊಂದು ಗಂಭೀರವಾದ ಪ್ರಕರಣವಾಗಿದೆ. ನೀವು(ಶಾಸಕರು) ಜನರ ಆಸ್ತಿಯನ್ನು ನಾಶ ಮಾಡಿದ್ದೀರಿ. ಇದರಿಂದ ನೀವು ಜನರಿಗೆ ಯಾವ ಸಂದೇಶವನ್ನು ನೀಡಲು ಬಯಸಿದ್ದೀರಿ ?’ ಎಂಬ ಪ್ರಶ್ನೆಯನ್ನೂ ಕೇಳಲಾಯಿತು. ಎಲ್.ಡಿ.ಎಫ್. ಪಕ್ಷ ೨೦೧೬ ರಿಂದ ಕೇರಳದಲ್ಲಿ ಅಧಿಕಾರದಲ್ಲಿದೆ.

ಎಲ್.ಡಿ.ಎಫ್. ನ ಶಾಸಕರ ಮೇಲೆ ವಿಧಾನಸಭೆಯಲ್ಲಿ ಧ್ವನಿವರ್ಧಕ ಮುರಿಯುವುದು, ಪರಸ್ಪರ ಹೊಡೆದಾಡಿಕೊಳ್ಳಲು ಪ್ರಯತ್ನಿಸುವುದು ಮತ್ತು ಗೊಂಧಲವನ್ನುಂಟುಮಾಡುವುದು ಈ ಪ್ರಕರಣಗಳ ಬಗ್ಗೆ ಖಟ್ಲೆಯನ್ನು ದಾಖಲಿಸಲಾಗಿದೆ. (ಕಮ್ಯನಿಸ್ಟ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಗೂಂಡಾಗಳಂತೆ ವರ್ತಿಸಿದ ಬಗ್ಗೆ ಅವರಿಗೆ ಶಿಕ್ಷೆಯಾಗಲು ಪ್ರಯತ್ನಿಸುವ ಬದಲು ಅವರ ಮೇಲಿನ ಖಟ್ಲೆ ಹಿಂಪಡೆಯಲು ಅರ್ಜಿ ಸಲ್ಲಿಸುವ ಕೇರಳದ ಕಮ್ಯುನಿಸ್ಟ ಸರಕಾರ ! – ಸಂಪಾದಕರು) ಈ ಹಿಂದೆ ಕೇರಳ ಉಚ್ಚ ನ್ಯಾಯಾಲಯವೂ ಕೂಡ ಅರ್ಜಿಯನ್ನು ಹಿಂಪಡೆಯಲು ನಿರಾಕರಿಸಿತ್ತು.