Truth Of Religious Places : ಧಾರ್ಮಿಕ ಸ್ಥಳಗಳ ಮೇಲೆ ಹಿಂದೆ ಆಗಿರುವ ಅತಿಕ್ರಮಣಗಳ ಇತಿಹಾಸ ಮತ್ತು ಸತ್ಯ ಬೆಳಕಿಗೆ ಬರುವುದು ಅಗತ್ಯ ! – ದ ಆರ್ಗನೈಸರ್

ಹಿಂದುತ್ವನಿಷ್ಠ ‘ದ ಆರ್ಗನೈಸರ್’ ನ ನಿಲುವು !

ನವದೆಹಲಿ – ಐತಿಹಾಸಿಕ ದೃಷ್ಟಿಯಿಂದ ಯಾವ ಧಾರ್ಮಿಕ ಸ್ಥಳಗಳ ಮೇಲೆ ಹಿಂದೆ ಅತಿಕ್ರಮಣ ಆಗಿರುವ ಇತಿಹಾಸ ಇದೆಯೋ ಅಂತಹ ಸ್ಥಳಗಳ ಸತ್ಯ ಬೆಳಕಿಗೆ ಬರುವುದು ಅಗತ್ಯವಿದೆ. ಅಂತಹ ಸ್ಥಳಗಳ ನಿಜವಾದ ಇತಿಹಾಸ ತಿಳಿಯುವುದು, ಇದು ಸಂಸ್ಕೃತಿ ನ್ಯಾಯಕ್ಕಾಗಿ ಅಗತ್ಯವಿದೆ, ಎಂದು ‘ದ ಆರ್ಗನೈಸರ್’ ಈ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಧಾರೆಗೆ ಸಂಬಂಧಿಸಿರುವ ನಿಯತಕಾಲಿಕೆಯ ಮುಖ್ಯ ಲೇಖನ ಮತ್ತು ಸಂಪಾದಕೀಯದಲ್ಲಿ ನಿಲುವನ್ನು ಮಂಡಿಸಲಾಗಿದೆ. ಈ ನಿಯತಕಾಲಿಕೆಯಲ್ಲಿ ಮುದ್ರಿಸಿರುವ ಲೇಖನದಲ್ಲಿ ಸಂಭಲನ ಶಾಹಿ ಮಸೀದಿಯ ವಿವಾದದ ಅಂಶ ಪ್ರಸ್ತಾಪಿಸಲಾಗಿದೆ. ಈ ಸ್ಥಳದಲ್ಲಿ ಶಾಹಿ ಜಮಾ ಮಸೀದಿಯ ಜಾಗದಲ್ಲಿ ಶ್ರೀ ಹರಿಹರ ದೇವಸ್ಥಾನವಿತ್ತು, ಎಂದು ಹೇಳಲಾಗಿದೆ. ಸಂಭಲದಲ್ಲಿ ಇಂತಹ ಅನೇಕ ರೀತಿಯ ಸಾಮಾಜಿಕ ಹೋರಾಟದ ಇತಿಹಾಸವಿದೆ’, ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಈ ನಿಯತಕಾಲಿಕೆಯ ಲೇಖನದಲ್ಲಿ ಲೇಖಕ ಆದಿತ್ಯ ಕಶ್ಯಪ್ ಇವರು, ಐತಿಹಾಸಿಕ ದೃಷ್ಟಿಯಿಂದ ಆಗಿರುವ ತಪ್ಪುಗಳು ಒಪ್ಪಿಕೊಳ್ಳುವುದು, ಇದು ಒಂದು ರೀತಿಯಲ್ಲಿ ಆಗಿರುವ ಅನ್ಯಾಯ ಒಪ್ಪಿಕೊಳ್ಳುವ ಭಾಗವಾಗಿದೆ. ಇದರಿಂದ ಮುಂದೆ ಚರ್ಚೆಯ ಮತ್ತು ಗಾಯಗಳು ವಾಸಿಯಾಗುವ ಪ್ರಕ್ರಿಯೆ ಆರಂಭವಾಗಬಹುದು. ಹಾಗೂ ಇದರಿಂದ ಸಮಾಜ ಒಗ್ಗೂಡಿಸುವಲ್ಲಿ ಸಹಾಯ ದೊರೆಯುವುದು; ಕಾರಣ ಪಾರದರ್ಶಕತೆಯಿಂದ ಪರಸ್ಪರ ಸಾಮರಸ್ಯ ಮತ್ತು ಗೌರವ ಹೆಚ್ಚಾಗುವುದು’, ಎಂದು ಹೇಳಿದರು.

ಈ ಹೋರಾಟ ಧಾರ್ಮಿಕ ಪ್ರಭಾವಕ್ಕಾಗಿ ಇರದೆ ನಮ್ಮ ರಾಷ್ಟ್ರೀಯ ಪರಿಚಯ ಸ್ಪಷ್ಟಪಡಿಸುವ ಸಂದರ್ಭದಲ್ಲಿ ಇದೆ !

ಇಂತಹ ಸ್ಪಷ್ಟತೆ ಪ್ರತಿಯೊಬ್ಬ ಹಿಂದೂವಿನಲ್ಲಿ ನಿರ್ಮಾಣವಾಗಿ ಅವನು ಈ ಐತಿಹಾಸಿಕ ರಾಷ್ಟ್ರ ಕಾರ್ಯದಲ್ಲಿ ಅವರ ಕ್ಷಮತೆಯ ಪ್ರಕಾರ ಸಹಭಾಗಿ ಆಗಬೇಕು.

ಸಂಪಾದಕೀಯದಲ್ಲಿ,
೧. ಮಾನವೀಯ ಸಂಸ್ಕೃತಿಯ ಮೂಲಕ ನ್ಯಾಯದಲ್ಲಿ ಆಗುತ್ತಿರುವ ಆಗ್ರಹವನ್ನು ಗಮನಿಸುವ ಸಮಯ ಬಂದಿದೆ.
೨. ಬಾಬಾಸಾಹೇಬ್ ಅಂಬೇಡ್ಕರ್ ಇವರು ಕೂಡ ಜಾತಿ ಆಧಾರಿತ ಭೇದಭಾವದ ಕಾರಣದ ಮೂಲಕ್ಕೆ ಹೋಗಿ ಸಂವಿಧಾನದಲ್ಲಿ ಉಪಾಯ ನೀಡಿದರು.
೩. ಧಾರ್ಮಿಕ ಅಸಂತೋಷ ಕೊನೆಗಾಣಿಸಲು ನಮ್ಮಲ್ಲಿ ಕೂಡ ಅಂತಹ ದೃಷ್ಟಿಕೋನದ ಅಗತ್ಯವಿದೆ. ಮುಸಲ್ಮಾನ ಸಮಾಜ ಸತ್ಯ ಸ್ವೀಕರಿಸಿದರೇ, ಮಾತ್ರ ಇದು ಸಾಧ್ಯವಾಗಬಹುದು. ಇತಿಹಾಸದಲ್ಲಿನ ಸತ್ಯ ಸ್ವೀಕಾರ ಮಾಡುವ ಈ ದೃಷ್ಟಿಕೋನ ಭಾರತೀಯ ಮುಸಲ್ಮಾನರಿಗೆ ಮೂರ್ತಿ ಭಂಜನೆಯಿಂದ ಪಾಪ ತಗಲುವುದರಿಂದ ಮತ್ತು ಧಾರ್ಮಿಕ ಪ್ರಭಾವದ ನಿಲುವಿನಿಂದ ಬೇರೆ ಇಡಬಹುದು. ಅದಕ್ಕಾಗಿ ಸಂಸ್ಕೃತಿಯ ಮೂಲಕ ನ್ಯಾಯದ ಆಗ್ರಹವನ್ನು ಗಮನಿಸಿದರೆ ಶಾಂತಿ ಮತ್ತು ಸೌಹಾರ್ದತೆ ಇದರ ಆಸೆ ಜಾಗೃತಗೊಳ್ಳುವುದು.
೪. ಸುಳ್ಳು ಜಾತ್ಯತೀತವನ್ನು ಬೆಂಬಲಿಸುವವರು ಕೇವಲ ಕೆಲವು ಬುದ್ಧಿವಾದಿಗಳ ಆಗ್ರಹಕ್ಕಾಗಿ ಈ ರೀತಿಯ ನ್ಯಾಯ ಮತ್ತು ಸತ್ಯ ತಿಳಿದುಕೊಳ್ಳುವ ಹಕ್ಕು ನಿರಾಕರಿಸುವುದು, ಇದರಿಂದ ಕಟ್ಟರವಾದ, ಪ್ರತ್ಯೇಕತಾವಾದ ಮತ್ತು ಶತ್ರುತ್ವಕ್ಕೆ ಪ್ರೋತ್ಸಾಹ ನೀಡಬಹುದು.
೫. ಸೋಮನಾಥದಿಂದ ಸಂಭಲವರೆಗೆ ಮತ್ತು ಅದಕ್ಕೂ ಮುಂದೆ, ಇಂತಹ ಸ್ಥಳಗಳ ಸತ್ಯ ತಿಳಿದುಕೊಳ್ಳುವ ಈ ಹೋರಾಟ, ಧಾರ್ಮಿಕ ಪ್ರಭಾವಕ್ಕಾಗಿ ಅಲ್ಲ. ಈ ಹೋರಾಟ ನಮ್ಮ ರಾಷ್ಟ್ರೀಯ ಗುರುತು ಸ್ಪಷ್ಟಗೊಳಿಸುವ ಸಂದರ್ಭದಲ್ಲಿ ಇರುವುದು.