ಭಾರತ ವಿರೋಧಿ ಮತ್ತು ಮೋದಿ ವಿರೋಧಿ ವಿಚಾರಸರಣಿಯ ವರದಿಗಾರರು ಬೇಕಾಗಿದ್ದಾರೆ ! – ‘ನ್ಯೂಯಾರ್ಕ್ ಟೈಮ್ಸ್’ನ ಜಾಹಿರಾತು

ಸರಕಾರವನ್ನು ಬದಲಾಯಿಸಲು ಸಹಾಯದ ಅಪೇಕ್ಷೆ !

ದೆಹಲಿಯಲ್ಲೇ ಆಗಲಿದೆ ನೇಮಕಾತಿ!

* ಈ ಸ್ಥಾನಕ್ಕಾಗಿ ನಾಳೆ ಪ್ರಗತಿ(ಅಧೋಗತಿ)ಪರರು, ಕಮ್ಯುನಿಸ್ಟರು, ಕಾಂಗ್ರೇಸ್ಸಿಗರು ಮೊದಲಾದವರು ಅರ್ಜಿ ಸಲ್ಲಿಸಿದರೆ ಅದರಲ್ಲಿ ಆಶ್ಚರ್ಯ ಪಡುವ ಆವಶ್ಯಕತೆ ಇಲ್ಲ !

* ಉದ್ದೇಶಪೂರ್ವಕವಾಗಿ ಭಾರತದ್ವೇಷಿ ಬರಹಗಳನ್ನು ಬರೆಯುವ ಇಂತಹ ವಿದೇಶಿ ದೈನಿಕಗಳ ಮೇಲೆ ಭಾರತವು ಶಾಶ್ವತವಾಗಿ ನಿರ್ಬಂಧ ಹೇರಬೇಕು ! ಕೇಂದ್ರ ಸರಕಾರವು ಇಂತಹ ಧೈರ್ಯ ತೋರಿಸಬೇಕು !

* ನ್ಯೂಯಾರ್ಕ್ ಟೈಮ್ಸ್ ಈ ರೀತಿಯ ಜಾಹೀರಾತನ್ನು ಚೀನಾ, ರಶಿಯಾ, ಸೌದಿ ಅರೆಬಿಯಾ, ಫ್ರಾನ್ಸ್ ಇತ್ಯಾದಿ ದೇಶಗಳ ಬಗ್ಗೆ ನೀಡಲು ಧೈರ್ಯ ಮಾಡಿದೆಯೇ ?

ಅಮೇರಿಕಾದ ಟ್ವಿಟರ್ ಮತ್ತು ಫೇಸ್‍ಬುಕ್ ಈ ಸಾಮಾಜಿಕ ಮಾಧ್ಯಮಗಳು ಹಾಗೂ ಈಗ ದೈನಿಕ ನ್ಯೂಯಾರ್ಕ್ ಟೈಮ್ಸ್ ಈ ಪ್ರಸಾರ ಮಾಧ್ಯಮಗಳು ಒಂದರ ಹಿಂದ ಒಂದರಂತೆ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ, ಸರಕಾರವು ಇದನ್ನು ದುರ್ಲಕ್ಷಿಸುವುದು ಯೋಗ್ಯವಲ್ಲ ! ಆದ್ದರಿಂದ ಇಂತಹ ಮಾಧ್ಯಮಗಳಿಗೆ ಸರಕಾರದಿಂದ ನಿರ್ಬಂಧ, ಹಾಗೂ ಜನರು ಬಹಿಷ್ಕಾರ ಹಾಕುವುದೇ ದೇಶಕ್ಕೆ ಹಿತವಾಗಿದೆ !

ನವದೆಹಲಿ – ಅಮೇರಿಕಾದ ‘ನ್ಯೂಯಾರ್ಕ್ ಟೈಮ್ಸ್’ ಈ ದೈನಿಕವು ವರದಿಗಾರರು ಬೇಕಾಗಿದ್ದಾರೆ ಎಂದು ಜಾಹೀರಾತನ್ನು ನೀಡುತ್ತಾ ಅದರಲ್ಲಿ ‘ಭಾರತ ವಿರೋಧೀ ಮತ್ತು ಮೋದಿ ವಿರೋಧಿ’ ವಿಚಾರಸರಣಿಯವರು ಅರ್ಹರಾಗಿದ್ದಾರೆ ಎಂದು ಅರ್ಹತೆಯನ್ನು ನೀಡಿದೆ. ಜುಲೈ ೧ ರಂದು ಈ ಜಾಹಿರಾತನ್ನು ಪ್ರಕಟಿಸಲಾಯಿತು. ದಕ್ಷಿಣ ಏಶಿಯಾ ಉದ್ಯೋಗದ ಬಗ್ಗೆ ವರದಿಯನ್ನು ಸಂಕಲನ ಮಾಡುವ ಕೆಲಸಕ್ಕಾಗಿ ಈ ಜಾಹೀರಾತನ್ನು ನೀಡಲಾಗಿತ್ತು ದೆಹಲಿಯಿಂದ ಕೆಲಸ ಮಾಡಬೇಕಾಗಲಿದೆ ಎಂದು ಅದರಲ್ಲಿ ಹೇಳಲಾಗಿದೆ.

ಈ ಜಾಹೀರಾತಿನಲ್ಲಿ ಬರೆಯಲಾಗಿರುವ ಅಂಶಗಳು

. ಭಾರತ ಸರಕಾರದ ವಿರುದ್ಧ ಬರೆಯಬಲ್ಲವರು ಹಾಗೂ ಸರಕಾರ ಬದಲಾಯಿಸಲು ಸಹಾಯ ಮಾಡುವವರು ಬೇಕಾಗಿದ್ದಾರೆ.

. ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಚೀನಾಗೆ ಸವಾಲೊಡ್ಡುತ್ತಿದೆ ಹಾಗೂ ವಿಶ್ವ ಮಟ್ಟದಲ್ಲಿ ಅದು ಶ್ರೇಷ್ಠನಾಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ, ಎಂದು ಇದರಲ್ಲಿ ಬರೆಯಲಾಗಿದೆ.

೩. ಪ್ರಧಾನಿ ಮೋದಿಯ ನೇತೃತ್ವದಡಿಯಲ್ಲಿ ಭಾರತವು ಚೀನಾವನ್ನು ವಿರೋಧಿಸುತ್ತಿರುವುದು ಒಂದು ನಾಟಕವಾಗಿದೆ ಎಂದು ಹೇಳಲಾಗಿದೆ. ಈ ನಾಟಕವು ಗಡಿಯಲ್ಲಿ ಮತ್ತು ಎರಡೂ ದೇಶಗಳ ನಡುವೆ ನಡೆಯುತ್ತಿದೆ.

ಅಮೇರಿಕಾದ ದೈನಿಕಗಳಿಗೆ ಚೀನಾದಿಂದ ಕೋಟಿಗಟ್ಟಲೆ ರೂಪಾಯಿಗಳ ಜಾಹೀರಾತುಗಳನ್ನು ನೀಡಲಾಗುತ್ತಿದೆ !

ಕಳೆದ ೪ ವರ್ಷಗಳಲ್ಲಿ ಚೀನಾದಿಂದ ಅಮೇರಿಕಾದ ದೈನಿಕಗಳಿಗೆ ಭಾರತೀಯ ರೂಪಾಯಿಯ ಪ್ರಕಾರ ೧೪೨ ಕೋಟಿ ರೂಪಾಯಿಗಳ ಜಾಹೀರಾತುಗಳನ್ನು ನೀಡಲಾಗಿದೆ. ಅದರಲ್ಲಿ ‘ವಾಲ್ ಸ್ಟ್ರೀಟ್ ಜರ್ನಲ್’ಗೆ ೪೪ ಕೋಟಿ ೭೩ ಲಕ್ಷ, ‘ವಾಶಿಂಗ್ಟನ್ ಪೋಸ್ಟ್’ಗೆ ೩೪ ಕೋಟಿ ೨೯ ಲಕ್ಷ, ನ್ಯೂಯಾರ್ಕ್ ಟೈಮ್ಸ್’ಗೆ ೩ ಕೋಟಿ ೭೨ ಲಕ್ಷ ರೂಪಾಯಿ ನೀಡಲಾಗಿದೆ. ಇದರೊಂದಿಗೆ ಇತರ ಅನೇಕ ದೈನಿಕಗಳಿಗೂ ಚೀನಾದಿಂದ ಜಾಹೀರಾತನ್ನು ನೀಡಲಾಗಿದೆ. (ಆದ್ದರಿಂದಲೇ ಈ ದೈನಿಕಗಳು ತಮ್ಮನ್ನು ಚೀನಾಕ್ಕೆ ಮಾರಿ ಕೊಂಡಿವೆ ಮತ್ತು ಭಾರತ ವಿರೋಧಿ ಬರಹಗಳನ್ನು ಬರೆಯುತ್ತಿವೆ. ಇದರಿಂದ ಅಮೇರಿಕಾದ ದೈನಿಕಗಳು ಹಳದಿ ಪತ್ರಿಕೋದ್ಯಮ ಮಾಡುತ್ತಿವೆ, ಎಂಬುದು ಗಮನಕ್ಕೆ ಬರುತ್ತಿದೆ ! ಇಂತಹ ದೈನಿಕಗಳ ಮೇಲೆ ಭಾರತದಲ್ಲಿ ನಿಷೇಧವನ್ನು ಹೇರಬೇಕು ! – ಸಂಪಾದಕರು)