ಕೋಮುಗಲಭೆಯನ್ನು ಹೆಚ್ಚಿಸಲು ಪಾಕಿಸ್ತಾನದಿಂದ ಈಶಾನ್ಯ ಭಾರತಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆ!

ತನಿಖಾ ದಳದ ದಾಳಿ, ಹಲವರ ಬಂಧನ !

ನವದೆಹಲಿ : ಈಶಾನ್ಯ ಭಾರತದಲ್ಲಿ ಕೋಮುಗಲಭೆ ಪ್ರಚೋದಿಸುವಲ್ಲಿ ಪಾಕಿಸ್ತಾನದ ದೊಡ್ಡ ಕೈವಾಡವಿರುವುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ತನಿಖಾ ದಳಗಳಿಗೆ ಇತ್ತೀಚೆಗೆ ಮಹತ್ವದ ಮಾಹಿತಿ ಲಭಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಜಮ್ಮು ಮತ್ತು ಕಾಶ್ಮೀರ, ಪಂಜಾಬ, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರ ಈ 5 ರಾಜ್ಯಗಳ ಮೂಲಕ ಈಶಾನ್ಯ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುತ್ತಿದೆ. ಈ ರಹಸ್ಯ ಮಾಹಿತಿಯ ಆಧಾರದ ಮೇಲೆ ರಾಷ್ಟ್ರೀಯ ತನಿಖಾ ದಳಕ್ಕೆ ಈ ರಾಜ್ಯಗಳಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆದಾರರು ಅಡಗಿರುವುದು ಗಮನಕ್ಕೆ ಬಂದಿದ್ದು, ಕಳೆದ ಕೆಲವು ದಿನಗಳಲ್ಲಿ ಅವರ 5 ಶಂಕಿತ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ. ಅಲ್ಲಿಂದ ಶಸ್ತ್ರಾಸ್ತ್ರಗಳು ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

1. ಪಾಕಿಸ್ತಾನದಿಂದ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಬಂದಿರುವ ಶಸ್ತ್ರಾಸ್ತ್ರಗಳನ್ನು ಬಿಹಾರದ 12 ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ತದ ನಂತರ ಅವುಗಳನ್ನು ಮಾರಾಟ ಮಾಡಲಾಗುತ್ತದೆ.

2. ಕೆಲವು ತಿಂಗಳ ಹಿಂದೆ ನಾಗಾಲ್ಯಾಂಡ್‌ನಲ್ಲಿ ವಶಪಡಿಸಿಕೊಂಡ ಎಕೆ -47 ಗಳನ್ನು ಬಿಹಾರದಿಂದ ಮಾರಾಟ ಮಾಡಲಾಗಿತ್ತು.

3. ರಾಷ್ಟ್ರೀಯ ತನಿಖಾ ದಳ ನಡೆಸಿದ ತನಿಖೆಯಲ್ಲಿ ಬಿಹಾರದಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 12 ಮಂದಿಯನ್ನು ಬಂಧಿಸಲಾಗಿದೆ.

4. ಕೆಲವು ದಿನಗಳ ಹಿಂದೆ ತನಿಖಾ ದಳ ಕಾಶ್ಮೀರದ ಒಂದು ಸ್ಥಳ, ಪಂಜಾಬ ಮತ್ತು ಹರಿಯಾಣದಲ್ಲಿ ತಲಾ ಒಂದು ಮತ್ತು ಬಿಹಾರದ 12 ಸ್ಥಳಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು 13 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿತ್ತು.

5. ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರು ಮತ್ತು ಮೈತೇಯಿ ಹಿಂದೂಗಳ ನಡುವಿನ ಕೋಮು ಹಿಂಸಾಚಾರದ ಉಲ್ಬಣಗೊಳ್ಳುವಲ್ಲಿ ಬಿಹಾರದಿಂದ ಕಳ್ಳಸಾಗಣೆಯಾದ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗಿತ್ತು.

ಸಂಪಾದಕೀಯ ನಿಲುವು

‘ಜಿಹಾದ್’ ರೂಪದಲ್ಲಿ ಭಾರತದ ಶಾಶ್ವತ ತಲೆನೋವನ್ನು ನಾಶಮಾಡಲು ಈ ವಿಚಾರ ಸರಣಿಯನ್ನು ಹರಡುತ್ತಿರುವ ಪಾಕಿಸ್ತಾನವನ್ನು ಸರ್ವನಾಶ ಮಾಡಬೇಕು ಇದನ್ನು ನಾವು ಯಾವಾಗ ಅರ್ಥಮಾಡಿ ಕೊಳ್ಳುತ್ತೇವೆ ?