Anti India Slogans Cricket Match : ಮೇಲಬರ್ನ (ಆಸ್ಟ್ರೇಲಿಯಾ) ಇಲ್ಲಿಯ ಭಾರತ್ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಖಲಿಸ್ತಾನಿಗಳಿಂದ ಭಾರತ ವಿರೋಧಿ ಘೋಷಣೆ

ಭಾರತೀಯ ವೀಕ್ಷಕರಿಂದ ತೀಕ್ಷ್ಣ ಪ್ರತ್ಯುತ್ತರ !

ಮೇಲಬರ್ನ (ಆಸ್ಟ್ರೇಲಿಯಾ) – ಖಲಿಸ್ತಾನ ಬೆಂಬಲಿಗರು ಕ್ರಿಕೆಟ್ ಪಂದ್ಯದ ಸಮಯದಲ್ಲಿ ಭಾರತ ವಿರೋಧಿ ಕೃತ್ಯ ನಡೆಸಲು ಪ್ರಯತ್ನಿಸಿದರು. ಪ್ರಸ್ತುತ ಭಾರತೀಯ ಕ್ರಿಕೆಟ್ ಸಂಘ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಅಲ್ಲಿ ಆಸ್ಟ್ರೇಲಿಯಾ ಜೊತೆಗೆ ೪ ನೆಯ ಟೆಸ್ಟ್ ಮ್ಯಾಚ್ ಡಿಸೆಂಬರ್ ೨೬ ರಿಂದ ಆಡಲಾಗುವುದು. ಈ ಪಂದ್ಯದ ಸಮಯದಲ್ಲಿ ಬೆಳಿಗ್ಗೆ ಖಲಿಸ್ತಾನ ಬೆಂಬಲಿಗರು ಅಕ್ರಮವಾಗಿ ಸ್ಟೇಡಿಯಂನಲ್ಲಿ ನುಗ್ಗಿ ಭಾರತ ವಿರೋಧಿ ಘೋಷಣೆ ನೀಡಲು ಆರಂಭಿಸಿದರು. ಅವರ ಕೈಯಲ್ಲಿ ಖಲಿಸ್ತಾನಿ ಧ್ವಜಗಳು ಕೂಡ ಇದ್ದವು. ಅವರು ವಿರೋಧಿಸುವುದನ್ನು ನೋಡಿ ಭಾರತೀಯ ಪ್ರೇಕ್ಷಕರು ಭಾರತೀಯ ತ್ರಿವರ್ಣ ಧ್ವಜ ಹಾರಿಸುತ್ತಾ ಭಾರತವನ್ನು ಬೆಂಬಲಿಸಿ ಘೋಷಣೆ ನೀಡಿದರು. ಈ ಸಮಯದಲ್ಲಿ ಆಸ್ಟ್ರೇಲಿಯ ಪೊಲೀಸರು ಖಲಿಸ್ತಾನಿ ಬೆಂಬಲಿಗರನ್ನು ಹೊರದೂಡಿದರು. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಸಾರವಾಗಿದೆ.

ಸಂಪಾದಕೀಯ ನಿಲುವು

ಜಗತ್ತಿನಲ್ಲಿ ಹರಡಿರುವ ಖಲಿಸ್ತಾನಿಗಳ ಹೆಡೆಮುರಿ ಕಟ್ಟಲು ಭಾರತ ಸರಕಾರ ಏನು ಪ್ರಯತ್ನ ಮಾಡಲಿದೆ ?