Auto Parts Trade Ban : ವಾಹನಗಳ ಬಿಡಿ ಭಾಗಗಳನ್ನು ರಫ್ತು ಮಾಡುವ ದೆಹಲಿಯಲ್ಲಿನ ವ್ಯಾಪಾರಿಗಳಿಂದ ಬಾಂಗ್ಲಾದೇಶದ ಜೊತೆಗಿನ ವ್ಯಾಪಾರ ಬಂದ್ !

ನವ ದೆಹಲಿ – ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರತ್ಯುತ್ತರ ಎಂದು ದೆಹಲಿಯಲ್ಲಿನ ಕೆಲುವು ವ್ಯಾಪಾರಿಗಳು ಬಾಂಗ್ಲಾದೇಶವನ್ನು ಬಹಿಷ್ಕರಿಸಲು ಮುಂದಾಗಿದೆ. ಕಾಶ್ಮೀರಿ ಗೇಟ್ ನ ಆಟೋ ಪಾರ್ಟ್ಸ್ ವ್ಯಾಪಾರಿಗಳು ಬಾಂಗ್ಲಾದೇಶದ ಜೊತೆಗಿನ ವ್ಯಾಪಾರ ನಿಲ್ಲಿಸುವ ನಿರ್ಣಯ ಕೈಗೊಂಡಿದ್ದಾರೆ.

೨ ಸಾವಿರ ಅಂಗಡಿಗಳಿಂದ ಬಾಂಗ್ಲಾದೇಶಕ್ಕೆ ರಫ್ತು ಮಾಡುವುದನ್ನು ನಿಲ್ಲಿಸಿದೆ !

ಆಟೋಮೊಟಿವ್ ಪಾರ್ಟ್ಸ್ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ವಿನಯ ನಾರಂಗ ಇವರು, ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಲಿ ನಮ್ಮ ದೇವಸ್ಥಾನಗಳ ನಾಶ ಮಾಡಲಾಗಿದೆ. ನಮ್ಮ ಅನೇಕ ಹಿಂದೂ ಬಾಂಧವರು ಸಾವನ್ನಪ್ಪಿದ್ದಾರೆ. ಆದ್ದರಿಂದ ನಮ್ಮ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಬಾಂಗ್ಲಾದೇಶದ ಜೊತೆಗಿನ ವ್ಯಾಪಾರ ವ್ಯವಹಾರ ನಿಲ್ಲಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಜನವರಿ ೧೫ ವರೆಗೆ ಬಿಡಿ ಭಾಗಗಳ ರಫ್ತು ಮಾಡುವುದನ್ನು ನಿಲ್ಲಿಸುವ ನಿರ್ಣಯ ಅಲ್ಲಿಯ ಸಾರಿಗೆಯ ಮೇಲೆ ಪರಿಣಾಮ ಬೀರಬಹುದು. ಸುಮಾರು ೨ ಸಾವಿರ ಅಂಗಡಿಗಳು ಬಾಂಗ್ಲಾದೇಶಕ್ಕೆ ರಫ್ತು ಮಾಡುವುದನ್ನು ನಿಲ್ಲಿಸಿದ್ದಾರೆ.

ಸಂಪಾದಕೀಯ ನಿಲುವು

ದೆಹಲಿಯ ವ್ಯಾಪಾರಿಗಳ ಶ್ಲಾಘನಿಯ ನಿರ್ಣಯ ! ಯಾವುದು ಸರಕಾರ ಮಾಡಬೇಕೆಂದು ಅಪೇಕ್ಷಿತವಾಗಿತ್ತು ಅದನ್ನು ಈಗ ಜಾಗೃತ ರಾಷ್ಟ್ರ ಪ್ರೇಮಿ ಮತ್ತು ಧರ್ಮ ಪ್ರೇಮಿಗಳಿಗೆ ಮಾಡಬೇಕಾಗುತ್ತಿದೆ !