Religion Survey : 2050 ರ ಹೊತ್ತಿಗೆ, ಹಿಂದೂಗಳ ಜನಸಂಖ್ಯೆ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ತಲುಪಲಿದೆ !


ನವ ದೆಹಲಿ – ಅಮೇರಿಕಾದ ‘ಪ್ಯೂ ರಿಸರ್ಚ್ ಸೆಂಟರ್’ ಅಧ್ಯಯನದ ಪ್ರಕಾರ, 2050 ರ ವೇಳೆಗೆ ಹಿಂದೂಗಳ ವಿಶ್ವದ ಮೂರನೇ ಅತಿದೊಡ್ಡ ಜನಸಂಖ್ಯೆಯಾಗಲಿದೆ. ಅಲ್ಲಿಯವರೆಗೆ ಭಾರತದ ಹಿಂದೂ ಜನಸಂಖ್ಯೆ 130 ಕೋಟಿ ಇರಲಿದೆ. ಭಾರತದಲ್ಲಿ ಪ್ರತಿ 4 ಜನರಲ್ಲಿ 3 ಜನ ಹಿಂದೂಗಳಾಗುತ್ತಾರೆ. (ಇದರರ್ಥ ಮುಂದಿನ 25 ವರ್ಷಗಳಲ್ಲಿ ಭಾರತದಲ್ಲಿ ಹಿಂದೂ ಜನಸಂಖ್ಯೆಯ ಶೇಕಡಾವಾರು 5 ರಷ್ಟು ಕಡಿಮೆಯಾಗಲಿದೆ, ಆದರೆ ಮುಸ್ಲಿಮರು ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಇದು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಮಹತ್ವವನ್ನು ಮತ್ತೊಮ್ಮೆ ಒತ್ತಿಹೇಳುತ್ತದೆ ! – ಸಂಪಾದಕರು) 2050 ರ ವೇಳೆಗೆ ವಿಶ್ವದ ಜನಸಂಖ್ಯೆಯಲ್ಲಿ ಹಿಂದೂಗಳ ಒಟ್ಟು ಪಾಲು ಶೇ. 14. 9 ರಷ್ಟು ಇರಲಿದೆ. ಯಾವುದೇ ಧರ್ಮಕ್ಕೆ ಸೇರದ ಜನರು ಶೇ. 13.2 ರಷ್ಟು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಕಾಲಾವಧಿಯಲ್ಲಿ ವಿಶ್ವಾದ್ಯಂತ ಹಿಂದೂಗಳ ಜನಸಂಖ್ಯೆಯು  ಶೇ.34 ರಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ವರದಿಯಲ್ಲಿ, ಪ್ರಸ್ತುತ ಮೂರನೇ ಸ್ಥಾನದಲ್ಲಿ ಯಾವ ಸಿದ್ಧಾಂತದ ಅಥವಾ ಪಂಥದ ಜನರು ಇದ್ದಾರೆ ಎಂಬುದು ಸ್ಪಷ್ಟ ಪಡಿಸಿಲ್ಲ.

2050 ರಲ್ಲಿ, ಭಾರತವು ವಿಶ್ವದ ಅತಿ ಹೆಚ್ಚು ಮುಸಲ್ಮಾನರು ಇರುವ ರಾಷ್ಟ್ರವಾಗಲಿದೆ !

ಮುಸ್ಲಿಮರಲ್ಲಿ ಹೆಚ್ಚಿನ ಫಲವತ್ತತೆಯ ಪ್ರಮಾಣ ಮತ್ತು ಯುವಕರು ಇರುವ ಕಾರಣದಿಂದಾಗಿ, ಈ ಅವಧಿಯಲ್ಲಿ ಭಾರತವು ಇಂಡೋನೇಷ್ಯಾವನ್ನು ಹಿಂದಿಕ್ಕಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ. ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯು 31.1 ಕೋಟಿ ಆಗಿರುತ್ತದೆ, ಇದು ಇಡೀ ವಿಶ್ವದ ಮುಸ್ಲಿಮರಲ್ಲಿ ಶೇ.11 ರಷ್ಟು ಇರುವುದು. (ದೇಶದಲ್ಲಿ ಇಷ್ಟು ಮುಸಲ್ಮಾನರು ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಅಥವಾ ಭಾರತದ ಇನ್ನೊಂದು ವಿಭಜನೆಗೆ ಒತ್ತಾಯಿಸಬಹುದು ! – ಸಂಪಾದಕರು) ಇದರರ್ಥ ಭಾರತವು ಹೆಚ್ಚಿನ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೈಜೀರಿಯಾದಂತಹ ಇಸ್ಲಾಮಿಕ್ ದೇಶಗಳನ್ನು ಮೀರಿಸುತ್ತದೆ.

ಕ್ರೈಸ್ತರ ಜನಸಂಖ್ಯೆ ಕಡಿಮೆಯಾಗಲಿದೆ!

ಭಾರತದಲ್ಲಿ ಕ್ರೈಸ್ತ ಜನಸಂಖ್ಯೆಯು ಪ್ರಸ್ತುತ ಒಟ್ಟು ಜನಸಂಖ್ಯೆಯ ಶೇ. 2.5 ರಷ್ಟಿದೆ. 2050ರ ವೇಳೆಗೆ ಶೇ. 2.3ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.

ಶತಮಾನದ ಕೊನೆಯವರೆಗೆ, ಮುಸ್ಲಿಮರ ಜನಸಂಖ್ಯೆ ಜಗತ್ತಿನಲ್ಲಿಯೇ ಹೆಚ್ಚು ಇರಲಿದೆ !

ಪ್ಯೂ ರಿಸರ್ಚ್ ಸೆಂಟರ್ ನ ವರದಿಯ ಪ್ರಕಾರ, ಇಸ್ಲಾಂ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಧಾರ್ಮಿಕ ಗುಂಪು ಆಗಿದೆ. ಈ ಜನಸಂಖ್ಯೆಯ ಈ ವೇಗ ಹೀಗೆ ಮುಂದುವರಿದರೆ, ಈ ಶತಮಾನದ ಅಂತ್ಯದ ವೇಳೆಗೆ ಮುಸ್ಲಿಂ ಜನಸಂಖ್ಯೆಯು ಕ್ರೈಸ್ತರನ್ನು ಮೀರಿಸುತ್ತದೆ. 2010ರ ವೇಳೆಗೆ ಜಗತ್ತಿನಲ್ಲಿ 160 ಕೋಟಿ ಮುಸ್ಲಿಮರಿದ್ದರು. 2050ರ ವೇಳೆಗೆ ಈ ಜನಸಂಖ್ಯೆ 280 ಕೋಟಿ ಆಗಲಿದೆ. ಏಷ್ಯಾ ಪೆಸಿಫಿಕ್ ಪ್ರದೇಶವು ಅತಿದೊಡ್ಡ ಶೇ.72 ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. 2050 ರ ವೇಳೆಗೆ, ಮುಸ್ಲಿಂ ಜನಸಂಖ್ಯೆಯು ಒಟ್ಟು ಯುರೋಪಿಯನ್ ಜನಸಂಖ್ಯೆಯ ಶೇ.10 ರಷ್ಟು ಇರಲಿದೆ. 2100 ರ ಹೊತ್ತಿಗೆ, ಮುಸ್ಲಿಮರು ವಿಶ್ವದ ಅತಿದೊಡ್ಡ ಜನಸಂಖ್ಯೆಯಾಗಲಿದ್ದಾರೆ.