ಅಸ್ಸಾಂನಲ್ಲಿ ಹೆಚ್ಚಾಗುತ್ತಿರುವ ಮುಸಲ್ಮಾನರ ಜನಸಂಖ್ಯೆಯನ್ನು ನಿಯಂತ್ರಿಸುವ ಪ್ರಯತ್ನ

ಮುಸಲ್ಮಾನ ನಾಯಕರ ೮ ಗುಂಪುಗಳನ್ನು ಸ್ಥಾಪಿಸಿ ಪರಿಹಾರ ಕೇಳುವೆವು !

* ಸಮಾನ ನಾಗರಿಕ ಕಾಯ್ದೆ ಮತ್ತು ಜನಸಂಖ್ಯೆ ನಿಯಂತ್ರಣ ಕಾಯ್ದೆ ಇವೇ ಮುಖ್ಯವಾದ ಪರಿಹಾರವಾಗಿದೆ. ಅದನ್ನು ಮಾಡಲು ಅಸ್ಸಾಂ ಸರಕಾರವು ಕೇಂದ್ರ ಸರಕಾರಕ್ಕೆ ಹೇಳಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

* ಇಂತಹ ಗಾಂಧಿಗಿರಿಯ ಪ್ರಯತ್ನಕ್ಕೆ ಯಶಸ್ಸು ಲಭಿಸಿದರೆ, ಒಳ್ಳೆಯದೇ; ಆದರೆ ಕಳೆದ ನೂರಾರು ವರ್ಷದ ಮತಾಂಧರ ಇತಿಹಾಸವನ್ನು ನೋಡಿದರೆ, ಈ ಪ್ರಯತ್ನ ಪ್ರಾಯೋಗಿಕ ಮಟ್ಟದಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ, ಈ ಬಗ್ಗೆ ಹಿಂದೂಗಳಲ್ಲಿ ಸಂದೇಹವಿದೆ !

ಗೌಹಾಟಿ (ಅಸ್ಸಾಂ) – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಜುಲೈ ೪ ರಂದು ರಾಜ್ಯದಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು ರಾಜ್ಯದ ೧೫೦ ಮುಸಲ್ಮಾನ ನಾಯಕರ ಸಭೆಯನ್ನು ಆಯೋಜಿಸಿ ಚರ್ಚಿಸಿದರು. ಮುಸಲ್ಮಾನರ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳವು ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ಅಡಚಣೆಯಾಗಿದೆ ಎಂದು ಮುಸಲ್ಮಾನ ನೇತಾರರು ಈ ಸಭೆಯಲ್ಲಿ ಒಪ್ಪಿಕೊಂಡರು. ಮತ್ತು ಅದನ್ನು ದೂರಗೊಳಿಸಲು ಪರಿಹಾರವನ್ನು ಸೂಚಿಸಲು ೮ ಗುಂಪುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾಜ್ಯದ ಮುಸಲ್ಮಾನ ನಾಯಕರು ಸಹಭಾಗಿಯಾಗಲಿದ್ದಾರೆ. ಈ ಗುಂಪು ಮುಂದಿನ ೩ ತಿಂಗಳಲ್ಲಿ ತಮ್ಮ ವರದಿಯನ್ನು ಸಲ್ಲಿಸಲಿದೆ.

. ಮುಖ್ಯಮಂತ್ರಿ ಸರಮಾ ಇವರು ಈ ಚರ್ಚೆಯ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ, ‘ಅಸ್ಸಾಂಗೆ ದೇಶದ ಪ್ರಮುಖ ೫ ರಾಜ್ಯದ ಸಾಲಿನಲ್ಲಿ ಬರಬೇಕಾದಲ್ಲಿ, ಜನಸಂಖ್ಯಾಸ್ಪೋಟವನ್ನು ತಡೆಗಟ್ಟಬೇಕು.’ ಎಂದು ಹೇಳಿದರು, ಇದನ್ನು ಈ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರು ಒಪ್ಪಿದರು. ೮ ಗುಂಪುಗಳಿಂದ ವರದಿ ಬಂದನಂತರ ಅಲ್ಪಸಂಖ್ಯಾತರ ವಿಕಾಸಕ್ಕಾಗಿ ಒಂದು ಕರಡನ್ನು ನಿರ್ಮಿಸಲಾಗುವುದು ಮತ್ತು ಮುಂದಿನ ೫ ವರ್ಷ ಅದಕ್ಕನುಸಾರ ಕೆಲಸ ಮಾಡಲಾಗುವುದು.

೨. ಮುಖ್ಯಮಂತ್ರಿ ಸರಮಾ ಅವರು, ಮುಂದಿನ ಸಭೆಯಲ್ಲಿ ಅಲ್ಪಸಂಖ್ಯಾತ ನಾಯಕರೊಂದಿಗೆ ವಿದ್ಯಾರ್ಥಿ ಸಂಘಟನೆಯೂ ಭಾಗವಹಿಸಲಿದೆ. ಅದೇ ರೀತಿ ಇತರ ಪ್ರಾಂತ್ಯಗಳಿಂದ (ಉದಾ ಬಾಂಗ್ಲಾದೇಶಿ ಮುಸಲ್ಮಾನ) ಬಂದವರ ಜೊತೆಯಲ್ಲೂ ಚರ್ಚಿಸಲಾಗುವುದು. (ಇಂತಹವರನ್ನು ಭಾರತದಿಂದ ಏಕೆ ಗಡಿಪಾರು ಮಾಡುವುದಿಲ್ಲ ? -ಸಂಪಾದಕ)