ಕುಂಭ ಕ್ಷೇತ್ರದಲ್ಲಿ ‘ಡರೇಂಗೆ ತೋ ಮರೆಂಗೆ’ ಚರ್ಚೆಗೆ ಕಾರಣವಾದ ಫಲಕ !

ಪ್ರಯಾಗರಾಜ ಮಹಾಕಂಭ ಮೇಳ ೨೦೨೫

ಪ್ರಯಾಗರಾಜ್, ಜನೆವರಿ ೨೬ (ವಾರ್ತೆ) – ಪ್ರಯಾಗರಾಜ ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಅನೇಕ ಸಾಧು, ಸಂತರು, ಮಹಂತರು ಮುಂತಾದವರು ಕುಂಭ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅನೇಕ ಸಂತರ ಕಥಾವಾಚನ, ಪ್ರವಚನ ಮುಂತಾದ ಫಲಕಗಳು ಕುಂಭ ಕ್ಷೇತ್ರದಲ್ಲಿ ಹಾಕಲಾಗಿವೆ. ಇಂತಹದರಲ್ಲಿ ಮಹಾರಾಷ್ಟ್ರದ ರತ್ನಗಿರಿಯ ನಾಣಿಜಧಾಮದ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರ ಆಚಾರ್ಯಜಿ ಮಹಾರಾಜ್ ಇವರು ಕೂಡ ದೊಡ್ಡ ಆಕಾರದ ೩ ಫಲಕಗಳನ್ನು ತ್ರಿವೇಣಿ ಮಾರ್ಗದ ಹತ್ತಿರ ‘ಖೋಯಾ-ಪಾಯಾ ಕೇಂದ್ರ’ ದ ಮುಂದೆ ಹಾಕಿದ್ದಾರೆ.

ಇದರಲ್ಲಿನ ಒಂದು ಫಲಕದ ಮೇಲೆ ‘ಸನಾತನ ಸಾತ್ವಿಕ ಹೈ, ಪರ್ ಕಾಯರ ನಹಿ’ (ಸನಾತನ ಸಾತ್ವಿಕವಾಗಿದೆ, ಆದರೆ ಹೇಡಿ ಅಲ್ಲ) ಹಾಗೂ ಇನ್ನೊಂದು ಫಲಕದ ಮೇಲೆ ‘ಡರೇಂಗೆ ತೋ ಮರೆಂಗೆ’ (ಹೆದರಿದರೆ ಸಾಯುವೆವು), ‘ವಕ್ಫ್ ಕೆ ನಾಮ್ ಪರ್ ಸಂಪತ್ತಿ ಕೀ ಲೂಟ ಹೈ ! ಧರ್ಮನಿರಪೇಕ್ಷ ದೇಶ ಮೇ ಯೇ ಕೈಸಿ ಛೂಟ ಹೈ !’ (ವಕ್ಫ್ ಹೆಸರಿನಲ್ಲಿ ಸಂಪತ್ತಿಯ ಲೂಟಿ ಆಗುತ್ತಿದೆ ಜಾತ್ಯತೀತ ದೇಶದಲ್ಲಿ ಇದೆಂಥ ಸವಲತ್ತು ನೀಡಲಾಗುತ್ತಿದೆ ?) ಎಂಬ ವಾಕ್ಯ ಬರೆಯಲಾಗಿದೆ.

ಇದರಲ್ಲಿ ‘ಡರೇಂಗೆ ತೋ ಮರೆಂಗೆ’ ಈ ಫಲಕ ಗಮನ ಸೆಳೆಯುತ್ತಿದ್ದು ಕುಂಭ ಕ್ಷೇತ್ರದಲ್ಲಿ ಚರ್ಚೆಯ ವಿಷಯವಾಗಿದೆ. ಇತ್ತೀಚಿಗೆ ನಡೆದಿರುವ ಲೋಕಸಭೆಯ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ‘ಬಟೆಂಗೆ ತೋ ಕಟೆಂಗೆ’ (ವಿಭಜನೆಯಾದರೆ ಕೊಲ್ಲಲ್ಪಡುವೆವು) ನೀಡಿರುವ ಈ ಘೋಷಣೆ ಬಹಳ ಜನಪ್ರಿಯವಾಗಿತ್ತು. ಅದರ ಆಧಾರದಲ್ಲಿಯೇ ‘ಡರೇಂಗೆ ತೋ ಮರೆಂಗೆ’ ನೀಡಿರುವ ಈ ಘೋಷಣೆಯ ಚರ್ಚೆ ನಡೆಯುತ್ತಿದೆ.