ಟ್ವಿಟರ್ ಕಾನೂನು ಪಾಲಿಸದಿದ್ದಲ್ಲಿ ಸರಕಾರವು ಕ್ರಮ ಕೈಗೊಳ್ಳಬಲ್ಲದು ! – ದೆಹಲಿ ಉಚ್ಚ ನ್ಯಾಯಾಲಯ

ನವ ದೆಹಲಿ – ಟ್ವಿಟರ್ ತಾನು ಮಾಹಿತಿ ಮತ್ತು ತಂತ್ರಜ್ಞಾನದ ಕಾನೂನನ್ನು ಪಾಲಿಸುತ್ತಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ಇನ್ನು ನಾವು ಟ್ವಿಟರ್ ಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲ. ಸರಕಾರವು ಟ್ವಿಟರ್ ಮೇಲೆ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸುವಾಗ ತಿಳಿಸಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕಾನೂನು ಜಾರಿಗೆ ಬಂದನಂತರ ಟ್ವಿಟರ್ ನಿಂದ ದೂರು ನೊಂದಣಿ ಅಧಿಕಾರಿಯ ನೇಮಕ ಮಾಡದೇ ಇದ್ದರಿಂದ ಅಮಿತ ಆಚಾರ್ಯ ಇವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ನಡೆದ ಆಲಿಕೆಯಲ್ಲಿ ನ್ಯಾಯಾಲಯವು ಈ ಮೇಲಿನಂತೆ ತೀರ್ಪನ್ನು ನೀಡಿದೆ. ನ್ಯಾಯಾಲಯವು ಈ ಸಮಯದಲ್ಲಿ ಟ್ವಿಟರ್ ಗೆ ದೂರು ಪರಿಹಾರ ಅಧಿಕಾರಿಗಳ ನೇಮಕ ಮಾಡಲು ಜುಲೈ ೮ ರ ತನಕ ಗಡುವು ನೀಡಿದೆ. ಈ ದಿನಾಂಕದೊಳಗೆ ಯಾವುದೇ ಭಾರತೀಯನನ್ನು ಈ ಹುದ್ದೆಗಾಗಿ ನೇಮಿಸಲಾಯಿತು, ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಬೇಕಾಗುತ್ತದೆ.

ಮಾಹಿತಿ ಮತ್ತು ತಂತ್ರಜ್ಞಾನ ಕಾನೂನಿನ ನಿಯಮಗಳ ಪಾಲನೆಯನ್ನು ಮಾಡಲು ಟ್ವಿಟರ್ ಗೆ ೩ ತಿಂಗಳ ಸಮಯವಕಾಶ ನೀಡಲಾಗಿತ್ತು; ಆದರೆ ಅದು ಅದನ್ನು ಪಾಲಿಸಲಿಲ್ಲ ಮತ್ತು ಈಗ ಅದು ಇನ್ನೂ ೨ ವಾರಗಳ ಕಾಲಾವಕಾಶ ನೀಡಬೇಕೆಂದು ಕೇಳಿದೆ. ಟ್ವಿಟರ್ ನ ಅಧಿಕಾರಿಗಳು, ನಮ್ಮ ಸಂಸ್ಥೆಯ ಪ್ರಧಾನ ಕಚೇರಿ ಅಮೇರಿಕಾದಲ್ಲಿದೆ. ಆದ್ದರಿಂದ ನಮಗೆ ತಡವಾಗುತ್ತಿದೆ ಎಂದು ಹೇಳಿದೆ, ಇದನ್ನು ನ್ಯಾಯಾಲಯವು ತಿರಸ್ಕರಿಸುತ್ತಾ, ನೀವು ಅಭ್ಯಾಸ ಮಾಡಿಕೊಂಡು ಬರಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ವಿಪತ್ತು ಬರಬಹುದು. ನಿಮೆಗ ಪೂರ್ಣ ಪ್ರಕ್ರಿಯೆಗಾಗಿ ಎಷ್ಟು ಕಾಲಾವಧಿ ಬೇಕು ? ನಮ್ಮ ದೇಶದಲ್ಲಿ ಎಷ್ಟು ಬೇಕೋ ಅಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಟ್ವಿಟರ್ ಗೆ ಅನಿಸುತ್ತಿದ್ದರೆ, ಅದಕ್ಕೆ ನಾವು ಅನುಮತಿಸುವುದಿಲ್ಲ ಎಂದು ಹೇಳಿದೆ.