Delhi Riot Accused Shahrukh Pathan MLA Candidate : ದೆಹಲಿ ಗಲಭೆಯ ಆರೋಪಿ ಶಾರುಖ ಪಠಾಣನಿಗೆ ವಿಧಾನಸಭೆಯ ಅಭ್ಯರ್ಥಿಯನ್ನಾಗಿ ಮಾಡಲು ಎ.ಐ.ಎಂ.ಐ.ಎಂ ಪ್ರಯತ್ನ!

(ಎ.ಐ.ಎಂ.ಐ.ಎಂ ಎಂದರೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಂ – ಆಲ್ ಇಂಡಿಯಾ ಮುಸ್ಲಿಂ ಯೂನಿಟಿ ಅಸೋಸಿಯೇಷನ್)

ನವದೆಹಲಿ – ಸಂಸದ ಅಸಾದುದ್ದೀನ ಓವೈಸಿ ಅವರ ಎ.ಐ.ಎಂ.ಐ.ಎಂ. ಪಕ್ಷದ ದೆಹಲಿ ಮುಖ್ಯಸ್ಥ ಶೋಯೆಬ್ ಜಮಾಯಿಯು ದೆಹಲಿ ಗಲಭೆಯ ಆರೋಪಿ ಶಾರುಖ ಪಠಾಣ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಎಂ.ಐ.ಎಂ. ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾರುಖ ಪಠಾಣನನ್ನು ಪಕ್ಷದಿಂದ ಚುನಾವಣಾ ಕಣಕ್ಕಿಳಿಸಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ. ಪಠಾಣ್ ಸದ್ಯ ಜೈಲಿನಲ್ಲಿದ್ದಾನೆ.

ಈ ಬಗ್ಗೆ ಶೋಯೆಬ್ ಜಮಾಯಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಇತ್ತೀಚೆಗೆ ನಾನು ಜೈಲಿನಲ್ಲಿರುವ ಶಾರುಖ ಪಠಾಣ ತಾಯಿಯನ್ನು ಭೇಟಿಯಾಗಿದ್ದೆ. ನಮ್ಮ ಪಕ್ಷದ ನಿಯೋಗವು ಅವನ ಕುಟುಂಬವನ್ನು ಭೇಟಿ ಮಾಡಿ, ಅವನ ಸ್ಥಿತಿ ಮತ್ತು ಕಾನೂನು ನೆರವಿನ ಬಗ್ಗೆ ಚರ್ಚಿಸಿದೆ. ಯಾರ ಮಕ್ಕಳು ಅನೇಕ ವರ್ಷಗಳಿಂದ ಜೈಲಿನಲ್ಲಿದ್ದಾರೆಯೋ, ಅಂತಹವರಿಗೆ ನ್ಯಾಯ ದೊರಕಿಸಿಕೊಡುವ ಅಭಿಯಾನದಲ್ಲಿ ನಮ್ಮ ಸಣ್ಣ ಹೆಜ್ಜೆ ಅವರಿಗೆ ಉತ್ತೇಜನ ನೀಡುತ್ತದೆ. ಸರ್ವೋಚ್ಚ ನ್ಯಾಯಾಲಯದ ಹೇಳಿಕೆಯಂತೆ ಯಾವ ಕೈದಿಗಳ ಪ್ರಕರಣಗಳು ಬಾಕಿ ಇದೆಯೋ ಅವರಿಗೆ ಜಾಮೀನು ಒದಗಿಸುವುದು ಅವರ ಹಕ್ಕಾಗಿದೆ. `ಅರವಿಂದ ಕೇಜ್ರಿವಾಲ ಅವರ ಸೂಚನೆಯ ಮೇರೆಗೆ ನನ್ನ ಮಗನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಮತ್ತು ನಾನು ಅದನ್ನು ಎಂದಿಗೂ ಮರೆಯುವುದಿಲ್ಲ’, ಎಂದು ಪಠಾಣ್ ತಾಯಿಯ ಹೇಳಿದ್ದಾರೆ.

ಪೊಲೀಸ ಪೇದೆಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದನು!

ಫೆಬ್ರವರಿ 20, 2020 ರಂದು, ದೆಹಲಿಯ ಈಶಾನ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಗಲಭೆಗಳು ಭುಗಿಲೆದ್ದಿತ್ತು. ಕನಿಷ್ಠ 53 ಜನರು ಸಾವನ್ನಪ್ಪಿದ್ದರು. ಫೆಬ್ರವರಿ 24 ರಂದು ಅದೇ ಗಲಭೆಯ ಸಂದರ್ಭದಲ್ಲಿ, ದೆಹಲಿಯ ಮೌಜ್ಪುರ-ಜಾಫ್ರಾಬಾದ್ ಪ್ರದೇಶದಲ್ಲಿ ಶಾರುಖ ಪಠಾಣ ಪೊಲೀಸ ಕಾನ್ಸ್ಟೆಬಲ ದೀಪಕ ದಹಿಯಾಗೆ ಬಹಿರಂಗವಾಗಿ ಪಿಸ್ತೂಲ್ ತೋರಿಸಿದ್ದನು. ಈ ಘಟನೆಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಸಂಪಾದಕೀಯ ನಿಲುವು

ಪೊಲೀಸ್ ಪೇದೆಯೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ಪಕ್ಷದ ಮನಃಸ್ಥಿತಿಯನ್ನು ಇದು ಸ್ಪಷ್ಟಪಡಿಸುತ್ತದೆ ! ಇಂತಹ ಪಕ್ಷಗಳನ್ನು ನಿಷೇಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಬೇಕು !