ಪಠ್ಯಪುಸ್ತಕದಲ್ಲಿ ತಪ್ಪಾದ ಇತಿಹಾಸವನ್ನು ಬದಲಾಯಿಸುವ ಸಂಸದೀಯ ಸಮಿತಿಯು ಈ ಬಗೆಗಿನ ಸೂಚನೆಯನ್ನು ಕೋರುವ ದಿನಾಂಕವನ್ನು ಜುಲೈ ೧೫ ರ ತನಕ ಮುಂದುವರಿಸಿದೆ !

* ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಜನರಿಗೆ ತಪ್ಪಾದ ಇತಿಹಾಸವನ್ನು ಕಲಿಸಿದ ಆರೋಪಿಗಳನ್ನು ಸರಕಾರವು ಶೀಘ್ರವಾಗಿ ಗಲ್ಲಿಗೇರಿಸಬೇಕು, ಎಂದು ಜನರ ಬೇಡಿಕೆಯಗಿದೆ !

* ಸ್ವಾತಂತ್ರ್ಯದಿಂದ ಇಲ್ಲಿಯವರೆಗೆ, ಅಂದರೆ ೭೪ ವರ್ಷ ಜನರಿಗೆ ತಪ್ಪು ಇತಿಹಾಸವನ್ನು ಕಲಿಸುವ ಜಗತ್ತಿನ ಏಕೈಕ ದೇಶ ಭಾರತ ! ಇದು ಇಲ್ಲಿಯವರೆಗಿನ ಆಡಳಿತಗಾರರಿಗೆ ನಾಚಿಕೆಯ ವಿಷಯವಾಗಿದೆ !

ನವದೆಹಲಿ – ಕೇಂದ್ರಸರಕಾರವು ಇತಿಹಾಸದ ಪಠ್ಯಪುಸ್ತಕದಲ್ಲಿನ ತಪ್ಪಾದ ಅಂಶಗಳನ್ನು ತೆಗೆದು ಆ ಸ್ಥಾನದಲ್ಲಿ ಯೋಗ್ಯವಾದ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಆರಂಭಿಸಿದೆ. ಅದಕ್ಕಾಗಿ ಒಂದು ಸಂಸದೀಯ ಸಮಿತಿಯನ್ನು ಸ್ಥಾಪಿಸಲಾಗಿದೆ. ಈ ಸಮಿತಿಯು ಭಾರತಾದ್ಯಂತದ ಪಠ್ಯ ಪುಸ್ತಕಗಳಲ್ಲಿರುವ ಇತಿಹಾಸದಲ್ಲಿನ ತಪ್ಪು ಆಧಾರದ ಬಗ್ಗೆ ಹುಡುಕುವ ಕೆಲಸವನ್ನು ಮಾಡುತ್ತಿದೆ. ಈ ಬಗ್ಗೆ ಸಂಸದೀಯ ಸಮಿತಿಯು ಅದಕ್ಕೆ ಸಂಬಂಧಿಸಿದ ಸಲಹೆ ಹಾಗೂ ಸೂಚನೆಗಳನ್ನು ಕೇಳಿವೆ, ಅದೇರೀತಿ ಈ ಬಗ್ಗೆ ಆಸಕ್ತಿ ಇರುವ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರಿಗೆ ಜೂನ್ ೩೦ ರ ತನಕ ಅವರ ಸೂಚನೆಗಳನ್ನು ಮಂಡಿಸಲು ಕರೆಯಲಾಗಿತ್ತು. ಕೊರೊನಾದ ಎರಡನೇ ಅಲೆಯ ಪ್ರಭಾವದಿಂದ ಕೆಲವು ತಜ್ಞರಿಗೆ ಅವರ ಸೂಚನೆಗಳನ್ನು ಮಂಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಸಲಹೆ ಮತ್ತು ಸೂಚನೆ ನೀಡುವ ಸಮಯವನ್ನು ಜುಲೈ ೧೫ ರ ತನಕ ಮುಂದುವರಿಸಲಾಗಿದೆ.

ಈ ಸಮಿತಿಯ ಅಧ್ಯಕ್ಷ ಮತ್ತು ಶಾಸಕ ವಿನಯ ಸಹಸ್ರಬುದ್ಧೆ ಇವರು ಮಾತನಾಡಿ, ಭಾರತೀಯ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಮೊದಲು ದೇಶಕ್ಕೆ ಸ್ಥಾನವನ್ನು ನೀಡಬೇಕು. ೧೯೭೫ ರಲ್ಲಿ ತುರ್ತು ಪರಿಸ್ಥಿತಿ ಮತ್ತು ೧೯೯೮ ರಲ್ಲಿಯ ಪೋಖರಣ ಪರಮಾಣು ಪರೀಕ್ಷಣೆಗೂ ಪಠ್ಯ ಪುಸ್ತಕದಲ್ಲಿ ಸ್ಥಾನ ನೀಡಬೇಕು. ಇತಿಹಾಸಕಾರರ ಒಂದು ವಿಶಿಷ್ಟ ಸಮೂಹವು ತಪ್ಪು ಸಂದರ್ಭವನ್ನು ನೀಡಿತ್ತು. ಇಂತಹ ಇತಿಹಾಸಕಾರರ ಪ್ರಾಬಲ್ಯ ಕೊನೆಗೊಳ್ಳಬೇಕಿದೆ ಎಂದು ಹೇಳಿದರು.